September 19, 2024

ಮಾನಸಿಕ ಒತ್ತಡ ಕಡಿಮೆಯಾಗಿಸಲು ಸಂಗೀತ ಸಹಕಾರಿ

0
ಜಿಲ್ಲಾ ಕಾರಾಗೃಹದಲ್ಲಿ ಬಂಧಿಗಳಿಗೆ ಏರ್ಪಡಿಸಲಾಗಿದ್ದ ಸಂಗೀತ ಕಾರ್ಯಕ್ರಮ

ಜಿಲ್ಲಾ ಕಾರಾಗೃಹದಲ್ಲಿ ಬಂಧಿಗಳಿಗೆ ಏರ್ಪಡಿಸಲಾಗಿದ್ದ ಸಂಗೀತ ಕಾರ್ಯಕ್ರಮ

ಚಿಕ್ಕಮಗಳೂರು: ಸಂಗೀತಕ್ಕೆ ತನ್ನದೇಯಾದ ಶಕ್ತಿಯಿದೆ. ಮನಸ್ಸಿಗೆ ಆನಂದನ್ನುಂಟು ಮಾಡುವ ಜೊತೆಗೆ ಮಾನಸಿಕ ಒತ್ತಡ ಕಡಿಮೆಯಾಗಿಸಲು ಸಂಗೀತ ಆಲಿಸುವುದು ಸಹಕಾರಿ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಬಂಧಿಗಳಿಗೆ ಏರ್ಪಡಿಸಲಾಗಿದ್ದ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಜೀವನದಲ್ಲಿ ಒಮ್ಮೆಯಾದರೂ ಸಂಗೀತದ ಬಗ್ಗೆ ಆಸಕ್ತಿ ಮೂಡಿಸಿದರೆ ದೂರ ಸರಿಯಲ್ಲ ಸಾಧ್ಯವಿಲ್ಲ. ಬದುಕ ನ್ನು ಮುನ್ನೆಡೆಸುವ ಜಾನಪದ, ಶಾಸ್ತ್ರೀಯ ಗೀತೆ ಹಾಗೂ ವಚನಗಳನ್ನು ಪ್ರತಿಯೊಬ್ಬರು ಕೇಳುವ ಮೂಲಕ ಗೀತೆಯ ತತ್ವದ ರೂಪುರೇಷಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಅರ್ಥವಿರದ ಗೀತೆಗಳನ್ನು ನಾಗರೀಕ ಸಮಾಜದಲ್ಲಿದೆ. ಹಿಂದಿನ ಕಾಲದಿಂದ ಕನಕ ದಾಸರು, ಪುರಂದರದಾಸರ ಗೀತೆಗಳು ಹಾಗೂ ಕವಿಗಳು ರಚಿಸಿದಂತೆ ಕೃತಿಯನ್ನು ಗೀತೆಗಳನ್ನಾಗಿ ಮಾಡಿರುವುದು ಇದುವರೆಗೂ ಮರೆಯಲಾಗುವುದಿಲ್ಲ. ಸತ್ಯಹರಿಶ್ಚಂದ್ರನ ಸಿನಿಮಾದ ಕುಲದಲ್ಲಿ ಕೀಳಾವುದು ಗೀತೆ ಇಂದಿಗೂ ಅಜರಾಮರ ಎಂದರು.

ಜೈಲರ್ ಎಂ.ಕೆ.ನೆಲಧರಿ ಮಾತನಾಡಿ ಕಾರಾಬಂಧಿಗಳಿಗೆ ನಿತ್ಯದ ಚಟುವಟಿಕೆಗಳ ನಡುವೆ ಸಂಗೀತ ಕಾರ್ಯ ಕ್ರಮ ಆಯೋಜಿಸಿ ಮನರಂಜನೆ ನೀಡಲಾಗುತ್ತಿದೆ ಎಂದು ಹೇಳಿದರು. ಗಾಯಕ ಸಾಯಿ ಸತೀಶ್ ಹಲವಾರು ಗೀತೆಗಳನ್ನು ಮೂಡುವ ಮೂಲಕ ಬಂಧಿಗಳಿಗೆ ಮನರಂಜಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಜೈಲರ್ ವನಖಂಡೆ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದರು.

A concert was organized for the prisoners in the district jail

About Author

Leave a Reply

Your email address will not be published. Required fields are marked *

You may have missed