September 19, 2024

ನೆರವು ನೀಡುವ ಸ್ಪಂದನಶೀಲತೆ ಹೆಚ್ಚಿದಲ್ಲಿ ಸಮಾಜದಲ್ಲಿ ಸಂಘಟನೆ

0
ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ರಮೇಶ್‌ಗೆ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ನೀಡಿದ ಬೀಳ್ಕೊಡುಗೆ

ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ರಮೇಶ್‌ಗೆ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ನೀಡಿದ ಬೀಳ್ಕೊಡುಗೆ

ಚಿಕ್ಕಮಗಳೂರು: ನಮ್ಮಲ್ಲಿ ನೆಟ್‌ವರ್ಕಿಂಗ್ ಸಿಸ್ಟಂ ವ್ಯವಸ್ಥಿತವಾಗಿ ರೂಪುಗೊಂಡು ಜಾತಿ-ಧರ್ಮಗಳ ಹಂಗಿಲ್ಲದೆ ಪರಸ್ಪರ ನೆರವು ನೀಡುವ ಸ್ಪಂದನಶೀಲತೆ ಹೆಚ್ಚಿದಲ್ಲಿ ಸಮಾಜದಲ್ಲಿ ಸಂಘಟನೆಗಳು ಬಲಿಷ್ಠವಾಗುತ್ತವೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ರಮೇಶ್‌ಗೆ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿ ಅನೇಕರಿಗೆ ಕೊಡುವ ಮನಸ್ಸು ಇರುತ್ತದೆ. ಸಮಾಜದ ಅಶಕ್ತರ ಬಗ್ಗೆ ಈ ನೆಟ್‌ವರ್ಕಿಂಗ್ ವ್ಯವಸ್ಥೆಯಲ್ಲಿ ಎಲ್ಲರ ಗಮನಕ್ಕೆ ಬಂದರೆ ಅಂಥವರಿಗೆ ನೆರವು ಒದಗಿಸಲು ಅವಕಾಶವಾಗುತ್ತದೆ. ಸಾಮಾನ್ಯ ಕಾರಣಗಳಿಗಾಗಿ ಕೆಲಸ ಮಾಡಲು ಮುಂದಾದಾಗ ನಮ್ಮ ಸಂಘಟನೆಗಳು ಬಲವಾಗುತ್ತವೆ. ನಮ್ಮನ್ನು ಒಡೆಯುವ ಹೊರಗಿನ ಶಕ್ತಿಗಳು ದುರ್ಬಲವಾಗುತ್ತವೆ ಎಂದು ಹೇಳಿದರು.

ಉದ್ಯಮಿ ಡಿ.ಹೆಚ್.ನಟರಾಜ್, ಹಿರಿಯ ಪತ್ರಕರ್ತರಾದ ಸ.ಗಿರಿಜಾಶಂಕರ ಹಾಗೂ ಚೂಡಾನಾಥ ಅಯ್ಯರ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಎಂಎಸ್ ಅಧ್ಯಕ್ಷ ಪಿ.ಮಂಜುನಾಥ ಜೋಷಿ, ಬಿಎಂಎಸ್ ನಿರ್ದೇಶಕಿ ಹಾಗೂ ಎಕೆಬಿಎಂಎಸ್ ಸ್ವಾಮ್ಯದ ವಿಪ್ರ ಮಹಿಳಾ ವೇದಿಕೆಯ ಜಿಲ್ಲಾ ಸಂಚಾಲಕಿ ಎಸ್.ಶಾಂತಕುಮಾರಿ ಇಲ್ಲಿನ ಜಿಲ್ಲಾಧಿಕಾರಿಯಾಗಿದ್ದ ವೇಳೆ ಕೆ.ಎನ್.ರಮೇಶ್ ಅವರು ಬಡವ-ಬಲ್ಲಿದರೆನ್ನದೆ ಜನತೆಗೆ ಸಮಾನವಾಗಿ ಸ್ಪಂದಿಸಿದ ರೀತಿಯನ್ನು ಬಣ್ಣಿಸಿದರು.

ನಿರ್ಗಮಿತ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಶಾಲು ಹೊದಿಸಿ, ಪೇಟಾ ತೊಡಿಸಿ ಹಾಗೂ ಅವರ ಪತ್ನಿ ಡಾ.ರಶ್ಮಿ ರಮೇಶ್ ಅವರಿಗೆ ಮಡಿಲಕ್ಕಿ ತುಂಬಿ ಸನ್ಮಾನಿಸಲಾಯಿತು. ಮಹಾಸಭಾದ ಕಾರ್ಯದರ್ಶಿ ಎನ್.ಕೆ.ಅಶ್ವಿನ್ ಸ್ವಾಗತ, ನಿರ್ದೇಶಕಿ ಸುಮಾ ಪ್ರಸಾದ್ ಕಾರ್ಯಕ್ರಮ ನಿರೂಪಣೆ, ಸಹ ಕಾರ್ಯದರ್ಶಿ ಎ.ಎನ್.ಗೋಪಾಲಕೃಷ್ಣ ವಂದನಾರ್ಪಣೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕೆ.ಎನ್.ರಮೇಶ್ ದಂಪತಿ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು. ಪೂರ್ವಿ ತಂಡದ ಲಾಲಿತ್ಯ ಅಣ್ವೇಕರ್ ಸಾಥ್ ನೀಡಿದರು. ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ನ ಅಧ್ಯಕ್ಷ, ಗಾಯಕ ಎಂ.ಎಸ್.ಸುಧೀರ್ ಗೀತೆಯೊಂದನ್ನು ಹಾಡಿ ಮುದಗೊಳಿಸಿದರು.

Chikkamagaluru Brahmin Mahasabha bids farewell to outgoing District Collector Ramesh

About Author

Leave a Reply

Your email address will not be published. Required fields are marked *

You may have missed