September 19, 2024

ಮನುಷ್ಯನನ್ನು ಮನುಷ್ಯನಂತೆ ನೋಡುವ ಸಮಾಜ ನಿರ್ಮಾಣವಾಗಬೇಕು.

0
ನಗರದ ರಾಮನಹಳ್ಳಿಯ ಮೊಹಮದೀಯ ಶಾದಿ ಮಹಲ್‌ನಲ್ಲಿ ದಲಿತ್ ಮತ್ತು ಮೈನಾರಿಟೀಸ್ ಸೇನೆ ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕಗಳ ಉದ್ಘಾಟನಾ ಸಮಾರಂಭ

ನಗರದ ರಾಮನಹಳ್ಳಿಯ ಮೊಹಮದೀಯ ಶಾದಿ ಮಹಲ್‌ನಲ್ಲಿ ದಲಿತ್ ಮತ್ತು ಮೈನಾರಿಟೀಸ್ ಸೇನೆ ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕಗಳ ಉದ್ಘಾಟನಾ ಸಮಾರಂಭ

ಚಿಕ್ಕಮಗಳೂರು: ಮನುಷ್ಯನನ್ನು ಮನುಷ್ಯನಂತೆ ನೋಡುವ ಸಮಾಜ ನಿರ್ಮಾಣವಾಗಬೇಕು. ಜಾತಿ ವ್ಯವಸ್ಥೆ ವರ್ಣವನ್ನು ಹೊರಗಿಟ್ಟು ಮನುಷ್ಯತ್ವವನ್ನು ಎತ್ತಿಹಿಡಿಯುವ ಕೆಲಸ ಆಗಬೇಕು ಎಂದು ದಲಿತ ಮೈನಾರಿಟೀಸ್ ಸೇನೆಯ ರಾಜ್ಯಾಧ್ಯಕ್ಷ ಎ.ಜೆ.ಖಾನ್ ತಿಳಿಸಿದರು.

ನಗರದ ರಾಮನಹಳ್ಳಿಯ ಮೊಹಮದೀಯ ಶಾದಿ ಮಹಲ್‌ನಲ್ಲಿ ದಲಿತ್ ಮತ್ತು ಮೈನಾರಿಟೀಸ್ ಸೇನೆ ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ದಲಿತ ಮತ್ತು ಅಲ್ಪಸಂಖ್ಯಾತರು ಇಂದಿಗೂ ಕೂಡ ಶೋಷಣೆಗೆ ಒಳಗಾಗುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ ಎಂದರು.

ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರರು ಎಂದು ಡಾ|ಬಿ.ಆರ್.ಅಂಬೇಡ್ಕರ್ ಅವರು ಹೇಳಿದ್ದಾರೆ. ಆದ್ದರಿಂದ ಶೋಷಿತರು ಮತ್ತು ಅಲ್ಪಸಂಖ್ಯಾತರು ಸಂಘಟಿತರಾಗಬೇಕು ಎಂದು ಹೇಳಿದರು.

ಮಹಾತ್ಮ ಜ್ಯೋತಿ ಬಾ ಪುಲೆ ಅವರು ಗಬ್ಬರ್ ಶೇಖ್ ಎಂಬುವರೆ ಜೊತೆ ಸೇರಿ ಅಲ್ಪಸಂಖ್ಯಾತರಿಗೆ ಶಿಕ್ಷಣ ಕೊಡಿಸುವಂತಹ ಕೆಲಸವನ್ನು ಮಾಡಿದರು. ಕ್ರೈಸ್ತ ಮಿಷನರಿಗಳು ಬೆಂಬಲವನ್ನು ನೀಡಿದರು. ಮಾತಾ ಸಾವಿತ್ರಿ ಬಾಯಿ ಪುಲೆ ಅವರು ಮಹಿಳೆಯರಿಗೆ ಶಿಕ್ಷಣ ಕೊಡಿಸುವಂತಹ ಕೆಲಸ ಮಾಡಿದರು. ಫಾತಿಮಾ ಶೇಖ್ ಅವರು ಸಾವಿತ್ರಿ ಬಾಯಿಪುಲೆ ಅವರಿಗೆ ಬೆಂಬಲವನ್ನು ನೀಡಿದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಲ್ತಾಫ್ ಹುಸೇನ್, ರಾಜ್ಯ ಉಪಾಧ್ಯಕ್ಷರಾದ ಹಾಲ್ಕೆರೆ ನಂಜಪ್ಪ, ಜಿಲ್ಲಾ ಕಾರ್ಯಾಧ್ಯಕ್ಷರಾದ ಎಂ.ಎಸ್.ಕೃಷ್ಣ, ಕಾಯಾಧ್ಯಕ್ಷರಾದ ಮುಬಾರಕ್ ಪಾಷಾ, ಅಶ್ಫಾಕ್ ಶಾಹ್, ಅಬ್ದುಲ್ ಅನೀಫ್, ಅಕ್ಬರ್ ಆಲಿ, ಜಿಲ್ಲಾ ಕಾರ್ಯದರ್ಶಿ ಸೈಯದ್ ರಿಜ್ವಾನ್, ತಾಲ್ಲೂಕು ಉಪಾಧ್ಯಕ್ಷ ಸರ್ಜಿಲ್, ಪ್ರಧಾನ ಕಾರ್ಯದರ್ಶಿ ಅಕ್ಬರ್ ಆಲಿ, ಉಮೇಶ್, ಜಿಲ್ಲಾ ಕಾರ್ಯದರ್ಶಿ ವಸೀಂ ಅಹಮದ್, ಸಹ ಕಾರ್ಯದರ್ಶಿ ಸಾಕೀಬ್ ಹುಸೇನ್, ಗಣೇಸ್, ಜಿಲ್ಲಾ ವಕ್ತಾರ ರೋಹಿತ್, ಜಿಲ್ಲಾ ಉಸ್ತುವಾರಿ ವಿಜಯಪ್ರಕಾಶ್, ಖಜಾಂಚಿ ಸುಫೀಯಾನ್, ಸಲೀಂ, ಸುಬ್ಬಯ್ಯ, ಫಯಾಜ್ ಅಲಿ, ಸೈಯದ್ ಆಬಿದೀನ್, ಸದಸ್ಯರುಗಳಾದ ಇಸ್ಮಾಯಿಲ್‌ಫರೀಫ್, ರೆಹಮಾನ್ ಸಜ್ಜಾದ್, ಅಹಮದ್ ಅತೀಕ್, ಶೌಕತ್ ಅಲಿ, ಮಹಮ್ಮದ್ ಶೇಕ್ ಮತ್ತಿತರರು ಉಪಸ್ಥಿತರಿದ್ದರು.

Inauguration of Dalit and Minorities Army District Unit and Taluk Units

About Author

Leave a Reply

Your email address will not be published. Required fields are marked *

You may have missed