September 19, 2024

ಡಿ.ಸಿ.ಸಿ. ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ: ಡಿ.ಎಸ್. ಸುರೇಶ್

0
ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್. ಸುರೇಶ್ ಪತ್ರಕಾಗೋಷ್ಠಿ

ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್. ಸುರೇಶ್ ಪತ್ರಕಾಗೋಷ್ಠಿ

ಚಿಕ್ಕಮಗಳೂರು:  ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಬಗ್ಗೆ ತಪ್ಪು ಮಾಹಿತಿಯಿಂದ ಆಡಳಿತ ಮಂಡಳಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಅನೇಕ ಅಕ್ರಮಗಳನ್ನು ನಡೆಸಿದೆ ಎಂಬ ಆರೋಪ ನಿರಾಧಾರ ಎಂದು ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್. ಸುರೇಶ್ ಸ್ಪಷ್ಠ ಪಡಿಸಿದರು.

ಅವರು ಇಂದು ಪತ್ರಕಾಗೋಷ್ಠಿಯಲ್ಲಿ ಮಾತನಾಡಿ ತಾವು ಬ್ಯಾಂಕಿನ ಅಧ್ಯಕ್ಷರಾದ ನಂತರ ೧೮ ಕೋಟಿ ರೂ ಲಾಭ ಬಂದಿದೆ ಜೊತೆಗೆ ರಾಜ್ಯದಲ್ಲೇ ಡಿ.ಸಿ.ಸಿ. ಬ್ಯಾಂಕ್ ಅಭಿವೃದ್ಧಿಯಲ್ಲಿ ಮುಂದಿದ್ದು ನಭಾರ್ಡ್ ಬ್ಯಾಂಕ್ ಪ್ರಶಂಸೆ ವ್ಯಕ್ತ ಪಡಿಸಿದೆ ಎಂದು ಹೇಳಿದರು.

ರೈತರಿಗೆ ಮತ್ತು ಠೇವಣಿದಾರರಿಗೆ ತಪ್ಪು ಮಾಹಿತಿ ರವಾನೆಯಾಗುವ ರೀತಿ ಆಡಳಿತ ಮಂಡಳಿ ವಿರುದ್ದ ಆರೋಪ ಮಾಡಲಾಗಿದೆ ಆದರೆ ಯಾವುದೇ ತಪ್ಪು ಮಾಡಿದಿದ್ದರು ಭ್ರಷ್ಠಾಚಾರಕ್ಕೆ ಅವಕಾಶ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಆರೋಪ ಮಾಡಿರುವುದು ಸರಿಯಲ್ಲ ಬ್ಯಾಂಕಿನ ಸಮಗ್ರ ಹಿತ ಕಾಪಾಡಬೇಕಿತ್ತು ಎಂದರು.

ಖಾಲಿ ಇರುವ ಸ್ಥಾನಕ್ಕೆ ಕೋಆಪ್ ಮಾಡಲು ಅವಕಾಶ ಇರುವುದರಿಂದ ಈ ಸ್ಥಾನಕ್ಕೆ ಇದೇ ವರ್ಗದ ಕ್ಷೇತ್ರಕ್ಕೆ ಗಿರೀಶ್ ಚೌಹಾಣ್ ಇವರನ್ನು ದಿನಾಂಕ:೨೨-೦೩-೨೦೨೨ ರಂದು ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಿ ತಾತ್ಕಾಲಿಕವಾಗಿ ಕೋಆಪ್ ಮಾಡಿಕೊಳ್ಳಲಾಗಿದೆ ಎಂದರು.

ನಿಬಂಧಕರ ಅನುಮತಿಯನ್ನು ಪಡೆದು ಜಿಲ್ಲಾ ಬ್ಯಾಂಕಿನ ಅಧ್ಯಕ್ಷರಿಗೆ ರೂ.೩೦ ಲಕ್ಷಗಳಲ್ಲಿ ಇನೋವಾ ಕಾರನ್ನು ಖರೀದಿಸಲಾಗಿರುತ್ತದೆ. ಸದರಿ ವಾಹನವನ್ನು ಬ್ಯಾಂಕಿನ ಉದ್ದೇಶಕ್ಕಾಗಿ ಉಪಯೋಗಿಸಿಕೊಳ್ಳಲಾಗಿದೆ ಎಂದ ಸುರೇಶ್ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ೧೯೫೯ ಮತ್ತು ನಿಯಮ ೧೯೬೦ ರಡಿಯಲ್ಲಿ ಹಲವಾರು ತಿದ್ದುಪಡಿಗಳಾಗಿರುವುದರಿಂದ ಸದರಿ ತಿದ್ದುಪಡಿಗಳನ್ನು ನಮ್ಮ ಬ್ಯಾಂಕಿನ ಉಪವಿದಿಗಳಲ್ಲಿ ಅಳವಡಿಸಿಕೊಂಡು ಸಹಕಾರ ಸಂಘಗಳ ಜಂಟಿ ನಿಬಂಧಕರಿಂದ ಅನುಮೋದನೆಯನ್ನು ಪಡೆಯಲಾಗಿದೆ ಎಂದು ವಿವರಿಸಿದರು.

ಬ್ಯಾಂಕಿನ ಆಡಳಿತ ಮತ್ತು ಅಭಿವೃದ್ದಿ ದೃಷ್ಟಿಯಿಂದ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗುತ್ತಿದ್ದು ಈ ಬಗ್ಗೆ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಬ್ಯಾಂಕಿನ ದಿನಾಂಕ:೩೧-೦೩-೨೦೨೦ ರ ಆಡಿಟ್ ವರದಿಯಲ್ಲಿರುವಂತೆ ಕಟ್ಟಡ ನಿದಿಯ ಮೊತ್ತ ರೂ.೧೪ ಕೋಟಿಗಳಿದ್ದು ನಕ್ಷೆ ಮತ್ತು ಅಂದಾಜು ವೆಚ್ಚಕ್ಕೆ ಪಿ.ಡಬ್ಲೂ.ಡಿ ಇಲಾಖೆಯಿಂದ ಅನುಮೋದನೆ ಪಡೆದು ಪಾರದರ್ಶಕವಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯ ಅಪೆಕ್ಸ್ ಬ್ಯಾಂಕಿನಿಂದ ರೂ.೧೦ ಲಕ್ಷ ಶೇರು ಬಂಡವಾಳ ರೂಪದಲ್ಲಿ ಬಿಡುಗಡೆಯಾಗಿದೆ ಆದರೆ ನಮ್ಮ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸದೇ ಇರುವುದರಿಂದ ಸರ್ಕಾರಕ್ಕೆ ವಾಪಾಸ್ಸು ಮರುಪಾವತಿಸಲು ರಾಜ್ಯ ಅಪೆಕ್ಸ್ ಬ್ಯಾಂಕಿಗೆ ಕೋರಿಕೊಳ್ಳಲಾಗಿದೆ. ಬ್ಯಾಂಕಿನ ಆಂತರಿಕ ಪರಿಶೀಲನೆ ಹಾಗೂ ಆಡಿಟ್ ವರದಿಯಲ್ಲಿ ಅಥವಾ ಗ್ರಾಹಕ ಸಾರ್ವಜನಿಕರಿಂದ ದೂರುಗಳು ಬಂದಂತಹ ಸಂದರ್ಭದಲ್ಲಿ ಅಂತವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಮಹೇಶ್ ಇವರನ್ನು ಅಮಾನತ್ತಿನಲ್ಲಿಟ್ಟು ಸದರಿ ಮೊತ್ತವನ್ನು ಪಾವತಿ ಮಾಡಿರುವುದರಿಂದ ಎಚ್ಚರಿಕೆ ನೀಡಿ ಅಮಾನತ್ತು ಆದೇಶ ಹಿಂಪಡೆಯಲಾಗಿದೆ ಎಂದು ಹೇಳಿದರು.

ಬ್ಯಾಂಕಿನ ಗ್ರಾಹಕರಿಂದ ಸಂಗ್ರಹಿಸಿದ ಆದಾಯ ತೆರಿಗೆ ಮೊತ್ತ ರೂ.೪೯೬೮೦/- ಗಳನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಲಾಗಿದೆ. ಆಡಳಿತ ಮಂಡಳಿ ಸದಸ್ಯರಿಗೆ ವೃತ್ತಿಪರತೆ ಮತ್ತು ಕೌಶಲ್ಯ ಅಭಿವೃದ್ದಿಗಾಗಿ ಲ್ಯಾಪ್‌ಟಾಪನ್ನು ನೀಡಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದೋರನಾಳು ಈ ಸಹಕಾರ ಸಂಘದ ೨೦೨೦-೨೧ ನೇ ಸಾಲಿನ ಆಡಿಟ್ ಇಲಾಖೆಗೆ ವಹಿಸಲಾಗಿದ್ದು ಸದರಿ ಅಧಿಕಾರಿಗಳು ಆಡಿಟ್ ವರದಿ ಸಲ್ಲಿಸದೇ ಇರುವುದರಿಂದ ವಿಳಂಬವಾಗಿದೆ. ಇದರಲ್ಲಿ ಆಡಳಿತ ಮಂಡಳಿಯ ಹಸ್ತ ಕ್ಷೇಪ ಇರುವುದಿಲ್ಲ ಎಂದು ಸ್ಪಷ್ಠಪಡಿಸಿದರು.

ಚುನಾವಣೆ ಕರ್ತವ್ಯ ನಿರತ ಅಧಿಕಾರಿಗಳು ಬ್ಯಾಂಕಿನ ವಾಹನದಲ್ಲಿದ್ದ ರೂ.೪೦ ಲಕ್ಷ ಜಪ್ತಿ ಮಾಡಿದಾರೆ ನಂತರದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಸಮಗ್ರ ಪರಿಶೀಲನೆ ಮತ್ತು ತನಿಖೆ ನಡೆಸಿ ಜಪ್ತಿ ಮಾಡಿದ ಮೊತ್ತವನ್ನು ಬ್ಯಾಂಕಿಗೆ ವಾಪಸ್ಸು ನೀಡಿದ್ದಾರೆ ಎಂದ ಅವರು ಈ ಹಣವನ್ನೂ ಚುನಾವಣೆಗೆ ಬಳಸಲಾಗುತ್ತಿತ್ತು ಎಂಬುದು ಸುಳ್ಳು ಆರೋಪ ಎಂದರು.

ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಈ ಅವಧಿಯವರೆಗೆ ರೂ.೪೬೩.೧೧ ಕೋಟಿ ಕೃಷಿ ಸಾಲವನ್ನು ವಿತರಿಸಲಾಗಿದೆ. ಆರೋಪದಲ್ಲಿ ಯಾವುದೇ ಹುರುಳಿರುವುದಿಲ್ಲ. ಬ್ಯಾಂಕ್ ರೈತ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಸದಸ್ಯ ಸಹಕಾರ ಸಂಘಗಳು ಜಿಲ್ಲಾ ಬ್ಯಾಂಕಿನಿಂದ ಆರ್ಥಿಕ ನೆರವು ಪಡೆದು ಸುಮಾರು ೧೧೨ ಸಹಕಾರ ಸಂಘಗಳು ಲಾಭ ಗಳಿಕೆಯಲ್ಲಿ ಹೆಜ್ಜೆಯಿಟ್ಟಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ರಮೇಶ್ ನಿರ್ದೇಶಕರುಗಳಾದ ಕೆ.ಆರ್. ಆನಂದಪ್ಪ, ಎಂ.ಎಸ್.ನಿರಂಜನ್, ಪರಮೇಶ್ವರಪ್ಪ, ಬಸವರಾಜಪ್ಪ, ಉಪಸ್ಥಿತರಿದರು.

D.C.C. The allegations against the bank’s board of directors have not been substantiated

About Author

Leave a Reply

Your email address will not be published. Required fields are marked *

You may have missed