September 19, 2024

ಮಣಿಪುರದಲ್ಲಿ ನಡೆದ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆ

0
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿ ಗೋಷ್ಠಿ

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿ ಗೋಷ್ಠಿ

ಎನ್.ಆರ್.ಪುರ: ಮಣಿಪುರ ರಾಜ್ಯದಲ್ಲಿ ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣ ನಾಗರೀಕ ಸಮಾಜ ತಲೆತಗ್ಗಿಸುವಂತ ಘಟನೆಯಾಗಿದ್ದು ಇದಕ್ಕೆ ಕೇಂದ್ರ ಹಾಗೂ ಮಣಿಪುರ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳ ವೈಫಲ್ಯವೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆರೋಪಿಸಿದರು.

ಅವರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಅವರು ಪದೇ,ಪದೇ ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುತ್ತಾರೆ.ಆದರೆ, ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಮೋದಿಯವರು ಮಂಕಿಬಾತ್ ನಲ್ಲಿ ಮಾತನಾಡುತ್ತಾರೆ.ಆದರೆ, ದೇಶದ ಗಡಿ ಭಾಗದಲ್ಲಿರುವ ಪ್ರಮುಖ ರಾಜ್ಯವಾದ ಮಣಿಪುರದಲ್ಲಿ ೭೮ ದಿನಗಳಿಂದ ಹಿಂಸಾಚಾರ ನಡೆಯುತ್ತಿದ್ದರೂ ಆ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲ ಎಂದರು

ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ನಡೆಸಿದ ವೀಡಿಯೋ ವೈರಲ್ ಆದ ನಂತರ ಪ್ರಧಾನಿ ಮಾತನಾಡಿದ್ದಾರೆ. ಅಲ್ಲಿನ ಪೊಲೀಸರು ಎಚ್ಚರಗೊಂಡಿದ್ದಾರೆ.ಗುಜರಾತ್ ನಲ್ಲಿ ಪ್ರಾಣಿಗಳ ಬಗ್ಗೆ ಖಾಳಜಿ ವಹಿಸುವ ಮೋದಿಯವರಿಗೆ ಮಣಿಪುರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿರುವುದು ಕಾಣುತ್ತಿಲ್ಲವೇ ? ಎಂದು ಪ್ರಶ್ನಿಸಿದರು.

ಮಣಿಪುರ ರಾಜ್ಯ ಹೊತ್ತಿ ಉರಿಯುತ್ತಿದ್ದರೂ ಪ್ರಧಾನಿ ಗಮನ ನೀಡಿರಲಿಲ್ಲ. ಸುಪ್ರೀಂ ಕೋರ್ಟ್ ಎಚ್ಚರಿಸಿದ ಮೇಲೆ ಬಿಜೆಪಿ ಸರ್ಕಾರವು ಎಚ್ಚೆತ್ತುಕೊಂಡಿದೆ. ಮಣಿಪುರ ಬಿಜೆಪಿ ಸರ್ಕಾರವನ್ನು ತಕ್ಷಣ ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದರು. ಮಣಿಪುರದಲ್ಲಿ ಸಂತ್ರಸ್ತರನ್ನು ಬೇಟಿ ಮಾಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೋದರೆ ಅಲ್ಲಿನ ಸರ್ಕಾರ ಅಡ್ಡಿ ಪಡಿಸುತ್ತದೆ.ಡಾ.ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಬಿಜೆಪಿ ಪಕ್ಷದವರಿಗೆ ನಂಬಿಕೆ ಇಲ್ಲವಾಗಿದೆ ಎಂದು ಟೀಕಿಸಿದರು.

ಕಳೆದ ವಿಧಾನ ಸಭೆ ಚುನಾವಣೆಯ ಸೋಲಿಗೆ ಇನ್ನೂ ಬಿಜೆಪಿ ಪಕ್ಷವು ಇನ್ನೂ ಚೇತರಿಸಿಕೊಂಡಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ಪಕ್ಷದ ೫ ಗ್ಯಾರಂಟಿಗಳ ಬಗ್ಗೆ ಲೇವಡಿ ಮಾಡಿದ್ದಾರೆ.ಶೋಭಾ ಹಾಗೂ ಸಿ.ಟಿ.ರವಿ ಅವರು ಕಾಂಗ್ರೆಸ್ ಸರ್ಕಾರದ ಕೆಟ್ಟದಾಗಿ ಮಾತನಾಡುತ್ತಿದ್ದಾರೆ.ಸಿ.ಟಿ.ರವಿ ಅವರಿಗೆ ಮತದಾರರೇ ಸರಿಯಾದ ಪಾಠ ಕಲಿಸಿದ್ದಾರೆ ಎಂದರು.

ಬಿಜೆಪಿ ಸಂಸದರಾಗಿರುವ ಶೋಭಾ ಅವರಿಗೆ ಬಡವರಿಗೆ ಅಕ್ಕಿ ತಲಪಿಸುವ ಜವಬ್ದಾರಿ ಇದೆ.ಅವರು ಜವಬ್ದಾರಿ ಸ್ಥಾನದಲ್ಲಿದ್ದರೂ ಜೇಜವಬ್ದಾರಿಯಿಂದ ಮಾತನಾಡುತ್ತಾರೆ.ಬಿಜೆಪಿ ಪಕ್ಷದ ಆಂತರಿಕ ಕಿತ್ತಾಟದಿಂದ ಇನ್ನೂ ವಿಧಾನ ಸಭೆಯಲ್ಲಿ ವಿರೋದ ಪಕ್ಷದ ನಾಯಕನನ್ನು ಆರಿಸಲು ಸಾದ್ಯವಾಗಿಲ್ಲ. ಬಿಜೆಪಿ ಪಕ್ಷವು ಕಾಂಗ್ರೆಸ್ ಪಕ್ಷವನ್ನು ದೂಷಿಸುವ ಬದಲು ಅವರ ಪಕ್ಷವನ್ನು ಸರಿಪಡಿಸಿಕೊಳ್ಳಲಿ ಎಂದು ಕಿವಿ ಮಾತು ಹೇಳಿದರು.

ಕಾಂಗ್ರೆಸ್ ಪಕ್ಷವು ಭರವಸೆ ನೀಡಿದಂತೆ ೫ ಗ್ಯಾರಂಟಿಗಳಲ್ಲಿ ಈಗಾಗಲೇ ೩ ಗ್ಯಾರಂಟಿ ಅನುಷ್ಠಾನಕ್ಕೆ ಬಂದಿದ್ದು ಯಶಸ್ಸು ಕಂಡಿದೆ. ೧ ಕೋಟಿ ೫೦ ಲಕ್ಷ ಜನರು ಗೃಹ ಜ್ಯೋತಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಬಸ್ಸಿನಲ್ಲಿ ಓಡಾಡುತ್ತಿದ್ದಾರೆ.ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ಬದಲು ಹಣ ನೀಡುತ್ತೇವೆ ಎಂದು ಹೇಳಿದರು

ಗೃಹ ಲಕ್ಷ್ಮೀ ಯೋಜನೆಗೆ ಕೆಲವು ತಾಂತ್ರಿಕ ಅಡಚಣೆಯಾಗಿದೆ. ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತೇವೆ.ಬಿಜೆಪಿ ಪಕ್ಷದವರಿಗೆ ಯಾವುದೇ ಆತಂಕ ಬೇಡ.ಸಣ್ಣ, ಪುಟ್ಟ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ರಾಜ್ಯದಲ್ಲಿ ಈಗ ನೆಮ್ಮದಿ ವಾತಾವರಣ ಇದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್ ಬೈಲು ನಟರಾಜ,ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ,ನಗರ ಘಟಕದ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ಕಾಂಗ್ರೆಸ್ ಪಕ್ಷದ ಮುಖಂಡರಾದ ಇ.ಸಿ.ಜೋಯಿ,ಪೇಟೆ ಸತೀಶ್, ಕಿರಣ್, ಜುಬೇದ, ಕೆ.ಎ.ಅಬೂಬಕರ್,

ಎಸ್.ಡಿ.ರಾಜೇಂದ್ರ,ಅಂಜುಂ,ನಾಗರಾಜ್, ಇಮ್ರಾನ್ ಇದ್ದರು.

The incident that took place in Manipur is an incident that makes the civil society dizzy

About Author

Leave a Reply

Your email address will not be published. Required fields are marked *

You may have missed