September 19, 2024

ಲೋಕಕಲ್ಯಾಣಾರ್ಥವಾಗಿ ವಿವಿಧ ಹೋಮ-ಹವನ

0
ಚಿಕ್ಕಮಗಳೂರು: ನಗರದ ಸುಗ್ಗಿಕಲ್ಲು ಬಡಾವಣೆಯ ಶ್ರೀ ಗುರು ರಾಘವೇಂದ್ರ ಯಜ್ಞಮಂಟಪದಲ್ಲಿ ಅಧಿಕಮಾಸದ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಆಯೋಜಿಸಿರುವ ವಿವಿಧ ಹೋಮ

ಚಿಕ್ಕಮಗಳೂರು: ನಗರದ ಸುಗ್ಗಿಕಲ್ಲು ಬಡಾವಣೆಯ ಶ್ರೀ ಗುರು ರಾಘವೇಂದ್ರ ಯಜ್ಞಮಂಟಪದಲ್ಲಿ ಅಧಿಕಮಾಸದ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಆಯೋಜಿಸಿರುವ ವಿವಿಧ ಹೋಮ

ಚಿಕ್ಕಮಗಳೂರು: ನಗರದ ಸುಗ್ಗಿಕಲ್ಲು ಬಡಾವಣೆಯ ಶ್ರೀ ಗುರು ರಾಘವೇಂದ್ರ ಯಜ್ಞಮಂಟಪದಲ್ಲಿ ಅಧಿಕಮಾಸದ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಆಯೋಜಿಸಿರುವ ವಿವಿಧ ಹೋಮ, ಹವನ ಮತ್ತು ಶ್ರೀನಿವಾಸ ಕಲ್ಯಾಣೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಶನಿ ವಾರ ಆರಂಭಗೊಂಡವು.

ಬೆಳಿಗ್ಗೆ ಪುಣ್ಯಾಹವಾಚನ, ಕಂಕಣ ಬಂಧನ, ಮಹಾಸಂಕಲ್ಪ, ದೇವತಾ ಕಲಶ ಸ್ಥಾಪನೆ, ಶ್ರೀ ಸುದರ್ಶನ ಹೋಮ, ನೃಸಿಂಹ ಹೋಮ, ನವಗ್ರಹ ಹೋಮ, ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಂತ್ರ ಹೋಮ ನಡೆದವು.

೩೩ ತಿಂಗಳಿಗೊಮ್ಮೆ ಬರುವ ಅಧಿಕಮಾಸದ ಸಂಕೇತವಾಗಿ ಪುರೋಹಿತ ಅಶ್ವಥ್ಥ ನಾರಾಯಣಾಚಾರ್ಯ ವಸಂತಚಾರ್ಯ ಜೋಶಿ ಅವರ ನೇತೃ ತ್ವದಲ್ಲಿ ೩೩ ದಂಪತಿಗಳು, ೩೩ ಯಜ್ಞಕುಂಡಗಳಲ್ಲಿ ಏಕಕಾಲದಲ್ಲಿ ಪವ ಮಾನ ಹೋಮವನ್ನು ನೆರವೇರಿಸಿದರು.

ಮಧ್ಯಾಹ್ನ ಹೋಮದ ಪೂರ್ಣಾಹುತಿಯ ನಂತರ ಉತ್ತರಾದಿಮಠದ ಆಡಳಿತಾಧಿಕಾರಿ ಮಧುಸೂಧನಾಚಾರ್ಯ ಮತ್ತು ಸುಮುಖ್ ಜ್ಯೋಶಿ ಅವರಿಂದ ಅಧಿಕಮಾಸದ ಮತ್ತು ಪವಮಾನ ಹೋಮದ ಮಹತ್ವ ಕುರಿತು ಪ್ರವಚನ ಜರುಗಿತು.

ಈ ವೇಳೆ ಭಕ್ತರಿಂದ ಸಾಮೂಹಿಕ ಭಜನೆ, ನಾಮ ಸಂಕೀರ್ತನೆ ನಡೆದವು. ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು. ಕಾರ್ಯಕ್ರಮದ ಆಯೋಜಕ ಅಶ್ವತ್ಥನಾರಾಯಣಾಚಾರ್ಯ ವಸಂತಾಚಾರ್ಯ ಜೋಶಿ ಮಾತನಾಡಿ, ಪುಣ್ಯಕರವಾದ ಅಧಿಕಮಾಸದಲ್ಲಿ ಅಧಿಕ ಫಲ ದೊರೆಯುವ ಹಿನ್ನೆಲೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಮಳೆ, ಬೆಳೆ, ಸಮೃದ್ಧಿಗಾಗಿ ಈ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಹುಬ್ಬಳ್ಳಿಯ ವೇದಬ್ರಹ್ಮ ಆನಂದಾಚಾರ್ಯ ಅವರ ನೇತೃತ್ವದ ಋತ್ವಿಕರ ತಂಡದಿಂದ ಧಾರ್ಮಿಕ ವಿಧಿ ವಿಧಾನಗಳು ನಡೆದವು.

Various Homa-Havanas for public welfare

About Author

Leave a Reply

Your email address will not be published. Required fields are marked *

You may have missed