September 19, 2024

ಶ್ರೀ ಗುರು ರಾಘವೇಂದ್ರ ಯಜ್ಞಮಂಟಪದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ

0
Sri Srinivasa Kalyanotsava

Sri Srinivasa Kalyanotsava

ಚಿಕ್ಕಮಗಳೂರು: ಕಲಿಯುಗದ ಹೆದ್ದೈವ ಶ್ರೀನಿವಾಸ ಹಾಗೂ ಪದ್ಮಾವತಿ ದೇವಿಯ ವಿವಾಹದ ವೈಭವವನ್ನು ಸಾರುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದೊಂದಿಗೆ ಕಳೆದ ಎರಡು ದಿನಗಳ ಕಾಲ ಅಧಿಕಮಾಸದ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ನಗರದ ಸುಗ್ಗಿಕಲ್ ಬಡಾವಣೆಯ ಶ್ರೀ ಗುರು ರಾಘವೇಂದ್ರ ಯಜ್ಞಮಂಟಪದಲ್ಲಿ ನಡೆದ ಹೋಮ, ಹವನ, ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

ಸಾಮೂಹಿಕ ಭಜನೆ, ನಾಮ ಸಂಕೀರ್ತನೆ, ದಾಸ ಕೀರ್ತನೆಗಳ ಗಾಯನದ ನಡುವೆ ಬೆಂಗಳೂರಿನ ಶ್ರೀನಿವಾಸ ಉತ್ಸವ ಬಳಗದ ವಾದಿರಾ ಜಾಚಾರ್ ತಂಡದಿಂದ ಜರುಗಿದ ಶ್ರೀನಿವಾಸ ಹಾಗೂ ಪದ್ಮಾವತಿ ದೇವಿ ಯ ವಿವಾಹದ ವಿಧಿ ವಿಧಾನಗಳ ವೈಭವವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.

ಕಾರ್ಯಕ್ರಮದ ಆಯೋಜಕ ಅಶ್ವತ್ಥನಾರಾಯಣಾಚಾರ್ಯ ವಸಂತಚಾ ರ್ಯ ಜೋಶಿ ದಂಪತಿ ಭಕ್ತರ ಪರವಾಗಿ ಶ್ರೀನಿವಾಸ ಕಲ್ಯಾಣೋತ್ಸವದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಇದಕ್ಕೂ ಮುನ್ನ ಅಧಿಕಮಾಸದ ಪ್ರಯುಕ್ತ ವಿಶೇಷ ಧನ್ವಂತರಿ ಹೋಮ, ೩೩ ತಿಂಗಳಿಗೊಮ್ಮೆ ಬರುವ ಅಧಿಕ ಮಾಸದ ಸಂಕೇತವಾಗಿ ೩೩ ದಂಪತಿ ಗಳಿಗೆ ಪೂಜೆ, ೩೩ ಬಾಗಿನ ೩೩ ಅಪೂಪದಾನಗಳನ್ನು ನೀಡಲಾಯಿತು. ವಿದ್ವಾಂಸರಿಂದ ಪ್ರವಚನ ನಡೆದವು. ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.

ಶ್ರೀನಿವಾಸ ಕಲ್ಯಾಣೋತ್ಸವದ ಪ್ರಯುಕ್ತ ತಿರುಪತಿ ಯ ಶ್ರೀ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲಿ ಗುಡಿಯನ್ನು ನಿರ್ಮಿಸಿ ಬಾಲಾಜಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ನಗರ ಮತ್ತು ಹೊರ ಊರುಗಳ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Sri Srinivasa Kalyanotsava

About Author

Leave a Reply

Your email address will not be published. Required fields are marked *

You may have missed