September 19, 2024

ಸಂವಿಧಾನದಲ್ಲಿ ತಿಳಿಸಿರುವ ಕರ್ತವ್ಯಗಳನ್ನು ಪ್ರತಿಯೊಬ್ಬರು ತಪ್ಪದೆ ಪಾಲಿಸಬೇಕು

0
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ೨೦೧೬ ಒಂದು ದಿನದ ಕಾರ್ಯಗಾರ

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ೨೦೧೬ ಒಂದು ದಿನದ ಕಾರ್ಯಗಾರ

ಚಿಕ್ಕಮಗಳೂರು: ಸಂವಿಧಾನದಲ್ಲಿ ತಿಳಿಸಿರುವ ಕರ್ತವ್ಯಗಳನ್ನು ಪ್ರತಿಯೊಬ್ಬರು ತಪ್ಪದೆ ಪಾಲಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮ ಎ. ಅವರು ಹೇಳಿದ್ದಾರೆ.

ನಗರದ ಐಡಿಎಸ್‌ಜಿ ಕಾಲೇಜಿನ ಮಲ್ಲೇಗೌಡ ಸಭಾಂಗಣದಲ್ಲಿ ವಿಶೇಷ ಚೇತನರ ಸಬಲೀಕರಣ ಸಮಿತಿ, ಐಡಿಎಸ್‌ಜಿ ಕಾಲೇಜಿನ ಸಂವೇದನಾ ಮತ್ತು ಪತ್ರಿಕೋದ್ಯಮ ವಿಭಾಗ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ೨೦೧೬ ಒಂದು ದಿನದ ಕಾರ್ಯಗಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿಶೇಷ ಚೇತನರಿಗೆ ಸರ್ಕಾರ ನೀಡಿರುವ ಯೋಜನೆಗಳನ್ನು ಸಕಾಲದಲ್ಲಿ ಅರ್ಹರಿಗೆ ನೀಡಿರುವ ಜವಾಬ್ದಾರಿ. ಸರ್ಕಾರಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಂಘ – ಸಂಸ್ಥೆಗಳು ನಿಗಾ ವಹಿಸಿ ದೊರಕಿಸಿ ಕೊಡಲು ಮುಂದಾಗಬೇಕು ಎಂದ ಅವರು. ವಿಶೇಷ ಚೇತನರು ಈ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಿ ಸರ್ಕಾರದ ಕಾರ್ಯಕ್ರಮಗಳನ್ನು ಬಳಸಿಕೊಂಡು ಉನ್ನತಿಯನ್ನು ಸಾಧಿಸಬೇಕು, ಅಲ್ಲದೆ ಸಮಾಜದಲ್ಲಿ ಗೌರವಯುತ ಜೀವನ ನಡೆಸಬೇಕು ಎಂದು ಹೇಳಿದರು.

ಸಮಾಜದಲ್ಲಿ ವಿಶೇಷ ಚೇತನರನ್ನು ಯಾರು ಅಗೌರವದಿಂದ ಕಾಣಬಾರದು. ಅವರನ್ನು ಮಾನವೀಯತೆ ದೃಷ್ಠಿಯಿಂದ ನೋಡಿ ಅವರಿಗೆ ಅವಕಾಶಗಳನ್ನು ನೀಡಿ ಗೌರವಯುತ ಬದುಕನ್ನು ನಡೆಸಲು ಸಹಾಯಕವಾಗಬೇಕು. ಮನೆ, ಕುಟುಂಬ, ಸಮಾಜ ಅವರನ್ನು ಸರಿಯಾಗಿ ನಡೆಸಿಕೊಂಡಲ್ಲಿ ಅವರು ಸಹ ಸಮಾಜದಲ್ಲಿ ಸಾಧನೆ ಮಾಡುವರು. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸಾಧನೆ ಮಾಡಲು ಎಲ್ಲರ ಸಹಕಾರ ಅಗತ್ಯ ನ್ಯಾಯಾಲಯ ಹಾಗೂ ವಿವಿಧ ಇಲಾಖೆಗಳಲ್ಲಿ ಅವರಿಗೆ ವಿಶೇಷವಾದ ವ್ಯವಸ್ಥೆಗಳನ್ನು ಕಾನೂನು ನೀಡಿದೆ. ಇದನ್ನು ಸದುಪಯೋಗಪಡಿಸಿಕೊಂಡು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಅವರು ಮಾತನಾಡಿ ವಿಶೇಷ ಚೇತನರಿಗೆ ಕಾನೂನಿನಲ್ಲಿ ಹಲವಾರು ಉಪಯುಕ್ತ ಯೋಜನೆಗಳನ್ನು ನೀಡಿದೆ. ಅವರ ಬಗ್ಗೆ ಸೂಕ್ಷ್ಮ ಸಂವೇಧನೆಯಿಂದ ಮತ್ತು ಮಾನವೀಯತೆಯಿಂದ ಅವರಿಗೆ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು. ಈ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡುತ್ತಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ, ಸುಧಾಕರ್, ಶಾರದ ಕಾನೂನು ಕಾಲೇಜು ಪ್ರಾಂಶುಪಾಲರಾದ ಸಯ್ಯದ್ ನಯಿಮುರ್ ರೆಹಮಾನ್, ಒಐಒಓ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ಎಂ. ಗಣೇಶ್, ವಿಶೇಷ ಚೇತನ ಕಲ್ಯಾಣಾಧಿಕಾರಿ ಪೃಥ್ವಿಜಿತ್, ಪುಟ್ಟಸ್ವಾಮಿ, ಡಾ. ರಾಧಕೃಷ್ಣ, ಸಕ್ಷಮ ಸಂಚಾಲಕರಾದ, ಎಸ್.ಕೆ. ಸಿದ್ದೇಶ್ವರ ಆಚಾರ್ ಮತ್ತಿತರರು ಸಮಾರಂಭದಲ್ಲಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಡಿಎಸ್‌ಜಿ ಕಾಲೇಜಿನ ಕನ್ನಡ ಸಂಯೋಜಕರಾದ ಪ್ರೊ. ಮೂಡಲ ಗಿರಿಯಪ್ಪ ವಹಿಸಿದ್ದರು. ಸ್ನೇಹ ಲೀಲಾ ಸ್ವಾಗತಿಸಿ, ಅಂತರ ವಂದಿಸಿದರು.

Rights of Persons with Disabilities Act 2016 is a one day activist

About Author

Leave a Reply

Your email address will not be published. Required fields are marked *

You may have missed