September 19, 2024

ನೀರಿನಲ್ಲಿ ಮುಳುಗಿ ಮೂವರು ಬಾಲಕರು ಸಾವು

0

ಚಿಕ್ಕಮಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಧಾರುಣ ಘಟನೆ ವರದಿಯಾಗಿದೆ.

ಮೂಡಿಗೆರೆ ಪಟ್ಟಣದ ಹ್ಯಾಂಡ್‌ಪೋಸ್ಟ್ ಬಳಿ ಇರುವ ರಿಯಾಜ್ ಎಂಬವರ ತೋಟದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೂವರು ಬಾಲಕರ ಪೈಕಿ ಇಬ್ಬರು ಕೆರೆ ನೀರಿನಲ್ಲಿ ಮುಳುಗು ಮೃತಪಟ್ಟಿದ್ದಾರೆ.

ಮೃತ ಬಾಲಕರನ್ನು ಮೂಡಿಗೆರೆ ಹ್ಯಾಂಡ್‌ಪೋಸ್ಟ್ ನಿವಾಸಿಗಳಾದ ತನ್ಮಯಿ(೧೭) ಹಾಗೂ ಕಿಶೋರ್(೧೨) ಎಂದು ಗುರುತಿಸಲಾಗಿದೆ. ತನ್ಮಯಿ ಹಾಗೂ ಕಿಶೋರ್ ಎಂಬ ಬಾಲಕರು ತಮ್ಮ ಮತ್ತೋರ್ವ ಸ್ನೇಹಿತನೊಂದಿಗೆ ಹ್ಯಾಂಡ್‌ಪೋಸ್ಟ್ ಬಳಿ ಇರುವ ರಿಯಾಜ್ ಎಂಬವರ ತೋಟದ ಕೆರೆಯಲ್ಲಿ ಶನಿವಾರ ರಾತ್ರಿ ವೇಳೆ ಮೀನು ಹಿಡಿಯಲು ಹೋಗಿದ್ದರು.

ರಾತ್ರಿಯಾಗಿದ್ದರಿಂದು ಮೀನು ಹಿಡಿಯಲು ಕೆರೆಗೆ ಇಳಿದಿದ್ದ ಮೂವರು ಬಾಲಕರು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದಾರೆ. ಕೆರೆಯ ಆಳದ ಅರಿವಿಲ್ಲದ ಬಾಲಕರು ನೀರಿನ ಆಳದ ಅರಿವಿಲ್ಲದೇ ಬಾಲಕರ ಪೈಕಿ ತನ್ಮಯಿ ಹಾಗೂ ಕಿಶೋರ್ ನೀರಿನಲ್ಲಿ ಮುಳುಗಿದ್ದಾರೆ. ಮತ್ತೋರ್ವ ಬಾಲಕ ಈಜಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದು ಬಂದಿದೆ.

ಪ್ರಾಣಾಪಾಯದಿಂದ ಪಾರಾಗಿದ್ದ ಬಾಲಕ ಮನೆಗೆ ಬಂದು ಹೆತ್ತವರಿಗೆ ವಿಷಯ ತಿಳಿಸಿದ್ದು, ಕೋಡಲೇ ಬಾಲಕರ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಪೋಷಕರು, ಸ್ಥಳೀಯರು ಹಾಗೂ ಮುಳುಗು ತಜ್ಞರು ಕೆರೆಯಲ್ಲಿ ಬಾಲಕರಿಬ್ಬರಿಗೆ ಹುಡುಕಾಡಿದ್ದಾರೆ.

ಈ ವೇಳೆ ಕಿಶೋರ್, ತನ್ಮಯಿ ಅವರು ಮೃತಪಟ್ಟ ಸ್ಥಿತಿಯಲ್ಲಿ ಕೆರೆಯಲ್ಲಿ ಪತ್ತೆಯಾಗಿದ್ದಾರೆಂದು ತಿಳಿದು ಬಂದಿದೆ. ಘಟನೆ ಸಂಬಂದ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿನ ಗುಂಡಿಗೆ ಬಿದ್ದು ಬಾಲಕ ಸಾವು: ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ೭ ವರ್ಷದ ಬಾಲಕನೋರ್ವ ನಿರ್ಮಾಣ ಹಂತದ ಸರಕಾರಿ ಕಟ್ಟಡದ ಬಳಿ ನಿರ್ಮಿಸಿದ್ದ ನೀರಿನ ಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೃತ ಬಾಲಕನನ್ನು ಜನ್ನಾಪುರ ಗ್ರಾಮದ ನಿವಾಸಿ ಸುನಿಲ್ ಎಂಬವರ ಪುತ್ರ ಆಶಿರ್ ಡಿ ಕುನ್ನಾ ಎಂದು ಗುರುತಿಸಲಾಗಿದೆ. ಆಶಿರ್ ಶನಿವಾರ ಸಂಜೆ ವೇಳೆ ತನ್ನ ಮೂವರು ಸ್ನೇಹಿತರೊಂದಿಗೆ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡದ ಬಳಿ ಆಟವಾಡಲು ತೆರಳಿದ್ದಾರೆ. ಈ ವೇಳೆ ಕಟ್ಟಡದ ಬಳಿ ನೀರು ಸಂಗ್ರಹ ಮಾಡಲು ನಿರ್ಮಿಸಿದ್ದ ಗುಂಡಿಗೆ ಬಾಲಕ ಆಶಿರ್ ಬಿದ್ದಿದ್ದಾನೆ.

ಗುಂಡಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿದ್ದ ಪರಿಣಾಮ ಬಾಲಕ ನೀರಿನಿಂದ ಮೇಲೆ ಬರಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಘಟನೆ ಸಂಬಂದ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಅವರ ವಿರುದ್ಧ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Three boys drowned in water

 

About Author

Leave a Reply

Your email address will not be published. Required fields are marked *

You may have missed