September 19, 2024

ಅನುಭವಾತ್ಮಕ ಕಲಿಕೆಯಿಂದ ಮಕ್ಕಳ ಪರಿಪೂರ್ಣ ವಿಕಾಸ ಸಾಧ್ಯ

0
ನಾದಚೈತನ್ಯ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿಶ್ವವಿದ್ಯಾಲಯ ಶಾಲೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ದೇಶಗಾನ ಭಾವಯಾನ ಕನ್ನಡ ಕವಿಗಳ ದೇಶಭಕ್ತಿ ಗೀತೆಗಳ ಕಲಿಕಾ ಶಿಬಿರ

ನಾದಚೈತನ್ಯ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿಶ್ವವಿದ್ಯಾಲಯ ಶಾಲೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ದೇಶಗಾನ ಭಾವಯಾನ ಕನ್ನಡ ಕವಿಗಳ ದೇಶಭಕ್ತಿ ಗೀತೆಗಳ ಕಲಿಕಾ ಶಿಬಿರ

ಚಿಕ್ಕಮಗಳೂರು: ಅನುಭವಾತ್ಮಕ ಕಲಿಕೆಯಿಂದ ಮಕ್ಕಳ ಪರಿಪೂರ್ಣ ವಿಕಾಸ ಸಾಧ್ಯ, ಪಠ್ಯೇತರ ಚಟುವಟಿಕೆಗಳ ಕಲಿಕೆಯಿಂದ ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ವಿಕಾಸಗೊಂಡು ದೇಶಕ್ಕೆ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವೀಶ್ ರವರು ತಿಳಿಸಿದರು.

ನಾದಚೈತನ್ಯ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿಶ್ವವಿದ್ಯಾಲಯ ಶಾಲೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ದೇಶಗಾನ ಭಾವಯಾನ ಕನ್ನಡ ಕವಿಗಳ ದೇಶಭಕ್ತಿ ಗೀತೆಗಳ ಕಲಿಕಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಭಾಕಾರಂಜಿ, ಕಲೋತ್ಸವದಂತಹ ಉತ್ಸವ, ಸ್ಪರ್ಧೇಗಳ ಮೂಲಕ ಕಲೆಗಳ ಅನಾವರಣ ಮಾಡಲು ಇಂತಹ ಶಿಬಿರಗಳ ಕಲಿಕೆಯು ಮಕ್ಕಳಿಗೆ ಅತ್ಯಂತ ಸಹಕಾರಿ ಸರ್ಕಾರಿ ಶಾಲೆಗಳಲ್ಲಿ ಇಂತಹ ಪಠ್ಯೇತರ ಚಟುವಟಿಕೆಗಳಿಗೆ ಶಿಕ್ಷಕರಿದ್ದು, ತಿಂಗಳಿಗೊಂದು ದಿನ ಬ್ಯಾಗ್‌ಲೆಸ್ ಡೇ ಮಾಡಿ ಸಂಗೀತ, ನೃತ್ಯ, ಕ್ರೀಡೆ ಸೇರಿದಂತೆ ಇನ್ನಿತರ ಪೂರಕ ಚಟುವಟಿಕೆಗಳಿಗೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಾ ಬಂದಿದೆ ಜೊತೆಗೆ ಈ ರೀತಿಯ ಕಲಿಸುವಿಕೆಯನ್ನು ನಾದಚೈತನ್ಯ ಸಂಸ್ಥೆಯು ಅನೇಕ ವರ್ಷಗಳಿಂದಲೂ ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.

ನಾದವೈತನ್ಯ ಸಂಸ್ಥೆಯ ಅಧ್ಯಕ್ಷರಾದ ಪ್ರೇಮ್‌ಕುಮಾರ್ ಮಾತನಾಡಿ ಮಕ್ಕಳು ಖಾಲಿ ಪಾತ್ರೆ ಇದ್ದಂತೆ, ನಮಗೆ ಬೇಕಾದನ್ನು ತುಂಬಿಸಬಹುದು, ಅವರಲ್ಲಿರುವ ಚೈತ್ನ್ಯವನ್ನು ಬಾಲ್ಯದಲ್ಲಿಯೇ ಪುಟಿದೆಬ್ಬಿಸುವ ಕಾರ್ಯವನ್ನು ಸಂಸ್ಥೆಯು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದರು.

ವಿಶ್ವ ವಿದ್ಯಾಲಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದತ್ತಾತ್ರಿಯವರು ಮಾತನಾಡಿ ಮಕ್ಕಳು ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶೇಷಾದ್ರಿಗೌಡ, ಶಾಲಾ ಕಾರ್ಯದರ್ಶಿ ಲಕ್ಷ್ಮೀನಾರಾಯಣರಾವ್, ಸುರೇಶ್, ಶಿಕ್ಷಕಿ ಮೈತ್ರಿ ನಿರೂಪಿಸಿ, ಮುಖ್ಯ ಶಿಕ್ಷಕ ಪಿ.ಎನ್.ವಾಳದ್ ಸ್ವಾಗತಿಸಿದರು, ರೇಖಾಪ್ರೇಮಕುಮಾರ್ ರವರು ಮಕ್ಕಳಿಗೆ ಕನ್ನಡ ಕವಿಗಳ ದೇಶಭಕ್ತಿಗೀತೆಗಳನ್ನು ಹೇಳಿಕೊಟ್ಟರು.

Perfect development of children is possible through experiential learning

About Author

Leave a Reply

Your email address will not be published. Required fields are marked *

You may have missed