September 19, 2024

ಬಂಜಾರ ಸಮುದಾಯ ಸರ್ಕಾರಿ ಸೌಲಭ್ಯ ಪಡೆಯುವಲ್ಲಿ ಹಿಂದೆ ಬಿದ್ದಿದೆ-ಗಂಗಾಧರ್

0
ಕಲ್ಯಾಣ ನಗರದ ಬಂಜಾರ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ೨೦೨೩-೨೬ ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ

ಕಲ್ಯಾಣ ನಗರದ ಬಂಜಾರ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ೨೦೨೩-೨೬ ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ

ಚಿಕ್ಕಮಗಳೂರು:  ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಬಂಜಾರ ಸಮುದಾಯ ಹಿಂದೆ ಬಿದ್ದಿದ್ದು ಇನ್ನು ಮುಂದೆ ಸಂಘಟನೆ ಹೋರಾಟದ ಮೂಲಕ ಈ ತಾರತಮ್ಯ ನೀತಿ ಹೋಗಲಾಡಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಶ್ರೀ ಸೇವಾಲಾಲ್ ಬಂಜಾರ ಅಭಿವೃದ್ಧಿ ಸೇವಾ ಸಂಘದ ನೂತನ ಅಧ್ಯಕ್ಷ ಗಂಗಾಧರ್ ತಿಳಿಸಿದರು.

ಅವರು ಇಲ್ಲಿನ ಕಲ್ಯಾಣ ನಗರದ ಬಂಜಾರ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ೨೦೨೩-೨೬ ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಮತ್ತು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸ್ವಾತಂತ್ರ್ಯ ಬಂದು ಸುಮಾರು ೭೭ ವ?ಗಳು ಕಳೆದರೂ ಎಲ್ಲ ಸಮುದಾಯದವರಿಗೂ ಭವನಗಳಿವೆ ಆದರೆ ಬಂಜಾರ ಸಮುದಾಯಕ್ಕೆ ಸಮುದಾಯ ಭವನ ಇರುವುದಿಲ್ಲ ಈ ನಿಟ್ಟಿನಲ್ಲಿ ನಗರದ ಸುತ್ತಮುತ್ತ ಎಲ್ಲಿಯಾದರೂ ಸರ್ಕಾರದಿಂದ ಎರಡು ಎಕರೆ ಜಾಗವನ್ನು ಮಂಜೂರು ಮಾಡುವಂತೆ ಒತ್ತಾಯಿಸಿದರು.
ಸರ್ಕಾರ ಆಸ್ಪತ್ರೆಯ ಯಾವುದಾದರು ಒಂದು ವಾರ್ಡಿಗೆ ರಕ್ಷಿತಬಾಯಿ ಎಂಬ ಹೆಸರಿಡಬೇಕೆಂದು ಆಗ್ರಹಿಸಿದವರು ಇದಕ್ಕಾಗಿ ಹೋರಾಟ ನಡೆಯುತ್ತಿದೆ ಅತಿ ಶೀಘ್ರದಲ್ಲಿ ಫಲ ನೀಡಲಿ ಜಿಲ್ಲೆಯಲ್ಲಿ ಸಮುದಾಯದ ೨೫ ಸಾವಿರ ಜನ ಮತದಾರರಿದ್ದಾರೆ ಎಂದರು.

ಸಂಘಟನಾ ಕಾರ್ಯದರ್ಶಿ ರೂಪ ಮಾತನಾಡಿ ಈ ಬಂಜಾರ ಸಂಘದಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದು ೧೮೦ ಜನ ನಗರದಲ್ಲಿ ಮಹಿಳಾ ಸದಸ್ಯರಿದ್ದು, ಚಿಕ್ಕಮಗಳೂರಿನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.

ಸಮುದಾಯದ ಜನರಲ್ಲಿ ತುಂಬಾ ಬಡವರಿದ್ದು ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ ಅಂತಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಸಹಕರಿಸುವಂತೆ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲು ನಿರ್ಧರಿಸಲಾಗಿದೆ ಎಂದರು.

ನಿಕಟ ಪೂರ್ವ ಅಧ್ಯಕ್ಷ ರಾಮನಾಯ್ಕ ಮಾತನಾಡಿ ೧೯೮೪ ರಿಂದಲೂ ಒಂದು ಎಕರೆ ಜಾಗವನ್ನು ಸಮುದಾಯದ ಸಂಘಕ್ಕೆ ಮೀಸಲಿಡುವಂತೆ ಜಿಲ್ಲಾ ಪರಿ?ತ್‌ಗೆ ಮನವಿ ನೀಡಿ ಒತ್ತಾಯಿಸಿದ್ದು ಈವರೆಗೆ ಇದು ಈಡೇರಿಲ್ಲ ವಂತಿಕೆ ಸಂಗ್ರಹಿಸಿ ಭವನ ನಿರ್ಮಿಸಿದ್ದು ಮುಂದೆ ಈ ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದರು.

ಬೀಕನಹಳ್ಳಿ ಸರ್ವೆ ನಂಬರ್ ೭ರಲ್ಲಿ ಲಭ್ಯವಿರುವ ೨೦ ಗುಂಟೆ ಜಾಗವನ್ನು ಮಂಜೂರು ಮಾಡುವುದಾಗಿ ಚುನಾವಣೆ ಪೂರ್ವದಲ್ಲಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು ಇದನ್ನು ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಭವನದ ಪಕ್ಕದಲ್ಲಿ ಇರುವ ನಿವೇಶನದಲ್ಲಿ ಸೇವಾಲಾಲ್ ಉದ್ಯಾನವನ ಮತ್ತು ಕಟ್ಟಡ ನಿರ್ಮಾಣ ಮಾಡಲು ನಗರ ಸಭೆಗೆ ಅನುದಾನ ಕೋರಿ ಮನವಿ ಸಲ್ಲಿಸಲಾಗಿದೆ ಎಂದರು. ಈ ಸಂಬಂಧ ಶಾಸಕರಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ನೀಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಲಾಲಸಿಂಗ್ ನಾಯಕ್, ಕಾರ್ಯದರ್ಶಿ ಅಣ್ಣನಾಯಕ್, ಖಜಾಂಚಿ ಗೋವಿಂದನಾಯಕ್, ನಿರ್ದೇಶಕರುಗಳಾದ ರಾಮನಾಯಕ್, ರಾಜನಾಯಕ್, ಶಂಕರ್‌ನಾಯಕ್, ರವಿನಾಯಕ್, ಚಂದ್ರನಾಯಕ್, ಕುಮಾರನಾಯಕ್ ಉಪಸ್ಥಿತರಿದ್ದರು.

Shri Sewalal Banjara Development Service Association

About Author

Leave a Reply

Your email address will not be published. Required fields are marked *

You may have missed