September 19, 2024

ಆ.18 ಮಣಿಪುರ ಹಿಂಸಾಚಾರ ಖಂಡಿಸಿ ಕ್ರೈಸ್ತ ಸಂಘಟನೆಗಳ ಮೌನ ಪ್ರತಿಭಟನೆ

0
ಕ್ರೈಸ್ತ ಸಂಘಟನೆಗಳ ಮುಖಂಡರಾದ ರೂಬಿನ್ ಮೊಸಸ್ ಪತ್ರಿಕಾಗೋಷ್ಠಿ

ಕ್ರೈಸ್ತ ಸಂಘಟನೆಗಳ ಮುಖಂಡರಾದ ರೂಬಿನ್ ಮೊಸಸ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಮಣಿಪುರದಲ್ಲಿ ನಡೆದಿರುವ ಹಿಂಸಾಚಾರ ಮತ್ತು ಕ್ರೈಸ್ತರ ಮೇಲೆ ನಡೆದಿರುವ ದೌರ್ಜನ್ಯವನ್ನು ಖಂಡಿಸಿ ಹಾಗೂ ಶಾಂತಿ ಮರುಸ್ಥಾಪನೆಗಾಗಿ ಇದೇ ತಿಂಗಳ ೧೮ ರಂದು ಕ್ರೈಸ್ತ ವಿವಿಧ ಸಂಘಟನೆಗಳ ವತಿಯಿಂದ ನಗರದಲ್ಲಿ ಮೌನ ಮೆರವಣಿಗೆಯೊಂದಿಗೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ವಿವಿಧ ಚರ್ಚ್ ಹಾಗೂ ಕ್ರೈಸ್ತ ಸಂಘಟನೆಗಳ ಮುಖಂಡರಾದ ರೂಬಿನ್ ಮೊಸಸ್ ಮತ್ತಿತರ ಮುಖಂಡರುಗಳು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ ಆಗಸ್ಟ್ ೧೮ರ ಶುಕ್ರವಾರ ಬೆಳಗ್ಗೆ ೧೦ ಗಂಟೆಗೆ ಹನುಮಂತಪ್ಪ ವೃತ್ತದಿಂದ ಕಪ್ಪು ಪಟ್ಟಿ ಧರಿಸಿ ಮೌನ ಮೆರವಣಿಗೆ ನಡೆಸಿ ಆಜಾದ್‌ಪಾರ್ಕ್ ವೃತದಲ್ಲಿ ಬಹಿರಂಗ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಈ ಸಭೆಯಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳು ಭಾಗವಹಿಸುವುದಿಲ್ಲ ವಿವಿಧ ಚರ್ಚ್‌ಗಳ ಧರ್ಮ ಗುರುಗಳು, ಮೌಲ್ವಿಗಳು ಹಾಗೂ ಮಠಾಧೀಶರುಗಳು ಭಾಗವಹಿಸಿ ಸರ್ವಧರ್ಮ ಸಭೆಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಸುಮಾರು ೧ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

೨೦೨೧ ರಿಂದ ಈಶಾನ್ಯ ಕಣಿವೆಯಲ್ಲಿ ಉಂಟಾದ ಜನಾಂಗೀಯ ದ್ವೇ?ದ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಯಾರು ಕಂಡು ಕೇಳರಿಯದ ಹಿಂಸಾಚಾರ ನಡೆಯುತ್ತಿದೆ, ಮಹಿಳೆಯರು ಮತ್ತು ಮಕ್ಕಳನ್ನು ಬೀದಿಗೆ ಎಳೆ ತಂದು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ ಮಾನವ ಕುಲವೇ ತಲೆ ತಗ್ಗಿಸುವಂತೆ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಲಾಗುತ್ತಿದೆ. ಪಿಕಾಸಿ ಗುದ್ದಲಿಯಿಂದ ಅಮಾನವೀಯವಾಗಿ ಹಲ್ಲೆ ನಡೆಸಲಾಗುತ್ತಿದೆ ೪೦೦ಕ್ಕೂ ಹೆಚ್ಚು ಚರ್ಚ್‌ಗಳನ್ನು ಧ್ವಂಸ ಮಾಡಿದೆ ಎನ್ನಲಾಗಿದ್ದು, ಈ ಘಟನೆ ಬಗ್ಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಶಾಂತಿ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಕ್ರೈಸ್ತ ಸಂಘಟನೆಗಳ ಮುಖಂಡರುಗಳಾದ ಸಚಿನ್, ಸುರೇಖಾ ಸಂಪತ್, ಸುಂದರಬಾಬು, ಜೇಮ್ಸ್ ಡಿಸೋಜಾ, ಸಿಲ್ವಿಸ್ಟರ್, ಜೋಸೆಫ್ ಉಪಸ್ಥಿತರಿದ್ದರು

Silent protest by Christian organizations

About Author

Leave a Reply

Your email address will not be published. Required fields are marked *

You may have missed