September 19, 2024

ಮನದಲ್ಲಿ ಸತ್ಯ, ಹೃದಯದಲ್ಲಿ ಒಳ್ಳೆತನವಿದ್ದರೆ ನಿತ್ಯವೂ ಸುಖವಿದೆ

0
ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ  32ನೇ ವರ್ಷದ ತಪೋನುಷ್ಠಾನ

ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ  32ನೇ ವರ್ಷದ ತಪೋನುಷ್ಠಾನ

ರಂಭಾಪುರಿ ಪೀಠ(ಬಾಳೆಹೊನ್ನೂರು): ‘ನಿನ್ನೆ ಸುಖ ಇತ್ತು ಎಂದು ಇತಿಹಾಸ ಹೇಳುತ್ತದೆ. ನಾಳೆಗೆ ಸುಖವಿದೆ ಎಂದು ವಿಜ್ಞಾನ ಹೇಳುತ್ತದೆ. ಮನದಲ್ಲಿ ಸತ್ಯ, ಹೃದಯದಲ್ಲಿ ಒಳ್ಳೆತನವಿದ್ದರೆ ನಿತ್ಯವೂ ಸುಖವಿದೆ ಎಂದು ಧರ್ಮ ಹೇಳುತ್ತದೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ  32ನೇ ವರ್ಷದ ತಪೋನುಷ್ಠಾನ ಹಾಗೂ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಆಶಾವಾದಿ ಪ್ರತಿ ವಿಪತ್ತಿನಲ್ಲೂ ಅವಕಾಶವನ್ನು ಹುಡುಕುತ್ತಾನೆ. ನಿರಾಶಾವಾದಿ ಪ್ರತಿ ಅವಕಾಶದಲ್ಲೂ ವಿಪತ್ತನ್ನೇ ಕಾಣುತ್ತಾನೆ. ಮರಕ್ಕೆ ಬೇರು ಎಷ್ಟು ಮುಖ್ಯವೋ ಹಾಗೆ ಮನುಷ್ಯನಿಗೆ ನಂಬಿಕೆ ಮುಖ್ಯ. ಬೇರು ಇಲ್ಲದಿದ್ದರೆ ಮರ ಉಳಿಯುವುದಿಲ್ಲ. ನಂಬಿಕೆ ಇಲ್ಲದಿದ್ದರೆ ಸಂಬಂಧಗಳು ಉಳಿಯುವುದಿಲ್ಲ. ತಾಳ್ಮೆ, ಪ್ರಶಾಂತತೆ ಹಿರಿಯರ ಮಾರ್ಗದರ್ಶನ, ನಿರಂತರ ಪ್ರಯತ್ನ, ಶ್ರದ್ಧೆ, ಆತ್ಮ ವಿಶ್ವಾಸ ಇವು ಯಶಸ್ಸು ಸಾಧಿಸಲು ಅವಶ್ಯಕವಾಗಿರುವ ಅಂಶಗಳು ಎಂಬುದನ್ನು ಮರೆಯಬಾರದು. ಬದುಕು ಒಳಿತು ಕೆಡಕುಗಳ ಮಿಶ್ರಣ’ ಎಂದರು.

ಮಾದನ ಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮಿ ‘ಜಗದ್ಗುರು ರೇಣುಕ ವಿಜಯ‘ ಪುರಾಣ ಪ್ರವಚನ ನೀಡಿ, ‘ಅಶಾಂತಿಯಿಂದ ತತ್ತರಿಸುತ್ತಿರುವ ಜಗತ್ತಿಗೆ ಶಾಂತಿ ನೆಮ್ಮದಿ ಬೇಕಾಗಿದೆ. ಆಧ್ಯಾತ್ಮ ಸಾಧನೆ ಮತ್ತು ಮಹಾನುಭಾವರ ಚಿಂತನೆಗಳನ್ನು ಪರಿಪಾಲಿಸಿದರೆ ಸುಖದ ಬದುಕು ನಿರ್ಮಾಣಗೊಳ್ಳುತ್ತದೆ’ ಎಂದರು.

ರಂಭಾಪುರಿ ಸ್ವಾಮೀಜಿ ಇಷ್ಟಲಿಂಗ ಪೂಜೆ  ನೆರವೇರಿಸಿದರು. ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ದಾನಯ್ಯ ದೇವರು, ಶಿವಮೊಗ್ಗದ ಎಸ್.ಎಚ್.ಸಿದ್ಧಣ್ಣ, ಬೆಂಗಳೂರಿನ ಬಾಳಯ್ಯ ಇಂಡಿಮಠ, ಅರಸೀಕೆರೆ ತಾಲ್ಲೂಕಿನ ಶಂಕರನಹಳ್ಳಿ ಭಕ್ತರು ಇದ್ದರು. ಗಂಗಾಧರ ಹಿರೇಮಠ,  ಶಿಕ್ಷಕ ವೀರೇಶ ಇದ್ದರು

32nd Year Taponushthan held at Rambhapuri Peeth as part of Shravan month

About Author

Leave a Reply

Your email address will not be published. Required fields are marked *

You may have missed