September 19, 2024

ವಿವಿಧ ಸಮಿತಿಗಳ ಶ್ರಮಿಸಿದ ಪರಿಣಾಮ ಜಿಲ್ಲೆಯ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು

0
ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿ? ಜಾತಿ ಘಟಕ ಏರ್ಪಡಿಸಿದ್ದ ಜಿಲ್ಲೆಯ ೫ ಶಾಸಕರಿಗೆ ಅಭಿನಂದನಾ ಸಮಾರಂಭ

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿ? ಜಾತಿ ಘಟಕ ಏರ್ಪಡಿಸಿದ್ದ ಜಿಲ್ಲೆಯ ೫ ಶಾಸಕರಿಗೆ ಅಭಿನಂದನಾ ಸಮಾರಂಭ

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಪಕ್ಷದ ಎಲ್ಲಾ ವಿವಿಧ ಸಮಿತಿಗಳು ಜಿಲ್ಲೆಯಲ್ಲಿ ಶ್ರಮಿಸಿದ ಪರಿಣಾಮ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಜಯಗಳಿಸಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರಲು ಸಹಕಾರಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ ಅಂಶುಮಂತ್ ಹೇಳಿದರು.

ಅವರು ಶುಕ್ರವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿ? ಜಾತಿ ಘಟಕ ಏರ್ಪಡಿಸಿದ್ದ ಜಿಲ್ಲೆಯ ೫ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಕಾಂಗ್ರೆಸ್ ಪಕ್ಷ ಡಾ. ಬಿ.ಆರ್.ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದ ಅಡಿಯಲ್ಲಿ ಎಲ್ಲಾ ವರ್ಗದ ಜನರಿಗೆ ಅಧಿಕಾರ ಸಿಗಬೇಕೆಂಬ ದೃಷ್ಠಿಯನ್ನು ಇಟ್ಟುಕೊಂಡು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ದಮನಿತರಿಗೆ ಧ್ವನಿ ಆಗಬೇಕೆಂದು ಇಂದು ಹಲವು ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.

ಸಂವಿಧಾನದ ಆಶಯಗಳನ್ನು ಗೌರವಿಸುವುದರ ಜೊತೆಗೆ ದೇಶದ ಎಲ್ಲಾ ಕಟ್ಟ ಕಡೆಯ ವ್ಯಕ್ತಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತದೆ ಎಂದು ಹೇಳಿದರು.ಮತದಾರರು ಪಕ್ಷದ ಮೇಲೆ ವಿಶ್ವಾಸ ಇಟ್ಟುಕೊಂಡಿರುವುದರಿಂದ ಜವಾಬ್ದಾರಿ ಅರಿತು ಕೆಲಸ ಮಾಡಬೇಕಾಗಿದೆ ಎಂದವರು ಬಿಜೆಪಿ ಭ್ರ? ವ್ಯವಸ್ಥೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಎಲ್ಲಾ ನಾಯಕರು ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಹಿಂದುಳಿದ ಅಲ್ಪಸಂಖ್ಯಾತ, ಪರಿಶಿ? ಜಾತಿ, ಪರಿಶಿ? ವರ್ಗ ಇತರೆ ಜನಾಂಗ ಭದ್ರ ಬುನಾಧಿಯಾಗಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತೆ, ಅಧಿಕಾರ ಹಂಚಿಕೆ ವಿ?ಯದಲ್ಲಿ ಗಮನಹರಿಸುವುದು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಿಡಿಎ ಅಧ್ಯಕ್ಷ ಸ್ಥಾನವನ್ನು ಪರಿಶಿ? ಜಾತಿ ವರ್ಗಕ್ಕೆ ಕೊಟ್ಟರೆ ತಪ್ಪೇನಿಲ್ಲ ಎಂದರು.

ಈ ಬಗ್ಗೆ ಪಕ್ಷದ ಎಲ್ಲಾ ಮುಖಂಡರು ನಿರ್ಧರಿಸಬೇಕಾಗಿದೆ ಮುಂದೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಗಳು ಬರುತ್ತಿರುವುದರಿಂದ ಈ ಜನರ ಬೆಂಬಲ ನಮ್ಮ ಪಕ್ಷಕ್ಕೆ ಗಟ್ಟಿಯಾಗಿ ನಿಲ್ಲಬೇಕಾಗುತ್ತದೆ ಎಂಬುದನ್ನು ಅರಿಯಬೇಕಾಗಿದೆ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಹೆಚ್.ಹೆಚ್ ದೇವರಾಜ್ ಮಾತನಾಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದ ಸಿ.ಟಿ ರವಿಗೆ ಭ್ರ?ಚಾರ ಎಂದರೇನು ಗೊತ್ತಿಲ್ಲ ಅನ್ನುತ್ತಾರೆ. ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡಿದ್ದಾರೆ ದಲಿತರು ಮುಸ್ಲಿಂ ಶೋಷಿತರು ಕಾಂಗ್ರೆಸ್ ಪಕ್ಷದ ಪರವಾಗಿ ನಿಂತ ಪರಿಣಾಮ ಅಧಿಕಾರಕ್ಕೆ ಬಂದಿದೆ ಆದರೆ ಬಿಜೆಪಿ ಅಪಪ್ರಚಾರ ಮಾಡುತ್ತಾ ತನ್ನ ಸಣ್ಣತನವನ್ನು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.

ಶಾಸಕ ಎಚ್.ಡಿ ತಮ್ಮಯ್ಯ ಮಾತನಾಡಿ ಜನಪರವಾದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೇ ಮೂರನ್ನು ಅನು?ನಕ್ಕೆ ತರಲಾಗಿದೆ, ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗೆ ಮನೆಯ ಯಜಮಾನಿ ಖಾತೆಗೆ ಆ.೩೦ ರಿಂದ ಜಾರಿಗೆ ಬಂದು ಹಣ ಜಮಾ ಆಗಲಿದೆ ಎಂದರು.

ಪರಿಶಿ? ಜಾತಿ ಘಟಕದ ಅಧ್ಯಕ್ಷ ಎಂ.ಮಲ್ಲೇಶ್ ಮಾತನಾಡಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕ ವತಿಯಿಂದ ಜಿಲ್ಲೆಯ ಶಾಸಕರುಗಳು, ಪಕ್ಷಕ್ಕಾಗಿ ದುಡಿದ ನಾಯಕರುಗಳು ಹಾಗೂ ಎಸ್ಸಿ ಬ್ಲಾಕ್ ಘಟಕದ ಅಧ್ಯಕ್ಷರುಗಳಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯ ೫ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲಾಗಿದೆ, ಹಲವು ವರ್ಷಗಳ ನಂತರ ಅಭೂತಪೂರ್ವ ಯಶಸ್ಸು ದೋರೆತಿದೆ ಎಂದರು.

ಮಾಜಿ ಸಚಿವ ಬಿ.ಬಿ ನಿಂಗಯ್ಯ ವೇದಿಕೆಯಲ್ಲಿ ಎಂ.ಎಲ್ ಮೂರ್ತಿ, ಎ.ಎನ್ ಮಹೇಶ್, ಡಾ|| ಡಿ.ಎಲ್ ವಿಜಯ್‌ಕುಮಾರ್, ಎಚ್.ಪಿ ಮಂಜೇಗೌಡ, ಸೈಯದ್ ಹನೀಫ್, ಡಿ.ಸಿ ಪುಟ್ಟೇಗೌಡ, ಮಹಡಿಮನೆ ಸತೀಶ್, ತನೂಜ್‌ನಾಯ್ಡು, ರಘು, ಮೋಹನ್‌ಕುಮಾರ್ ಮತ್ತಿತರರಿದ್ದರು. ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಪರಿಶಿ? ಜಾತಿ ಘಟಕದ ಅಧ್ಯಕ್ಷ ಎಂ.ಮಲ್ಲೇಶ್ ವಹಿಸಿದ್ದರು. ಮೊದಲಿಗೆ ಪ್ರಧಾನ ಕಾರ್ಯದರ್ಶಿ ಈಶ್ವರ್ ಸ್ವಾಗತಿಸಿದರು.

Congratulatory ceremony for 5 MLAs of the district

About Author

Leave a Reply

Your email address will not be published. Required fields are marked *

You may have missed