September 19, 2024

ಮಣಿಪುರ ಗಲಭೆ ಖಂಡಿಸಿ ಕ್ರೈಸ್ತ ಸಂಘಟನೆಗಳ ಪ್ರತಿಭಟನೆ

0
ಚಿಕ್ಕಮಗಳೂರು: ಮಣಿಪುರ ಗಲಭೆ ನಿಯಂತ್ರಿಸಲು ಕೇಂದ್ರ ಮತ್ತು ಅಲ್ಲಿನ ರಾಜ್ಯ ಸರ್ಕಾರ ಮುಂದಾಗಬೇಕು. ಎರಡು ಸಮುದಾಯಗಳ ನಡುವೆ ಮಾತುಕತೆ ನಡೆಸಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಧರ್ಮ ಗುರು ಡಾ|ಟಿ.ಅಂಥೋಣಸ್ವಾನಿ ಮನವಿ ಮಾಡಿದರು. ಶುಕ್ರವಾರ ನಗರದಲ್ಲಿ ಶಾಂತಿ ಮತ್ತು ಸೌಹಾರ್ದ ಒಕ್ಕೂಟ ಕ್ರೈಸ್ತ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ನಮ್ಮ ನಡಿಗೆ ಐಕ್ಯತೆ ಕಡೆಗೆ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಆಜಾದ್‌ಪಾರ್ಕ್ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಮಣಿಪುರ ರಾಜ್ಯದಲ್ಲಿ ಮೇ ತಿಂಗಳಿಂದ ಅಲ್ಲಿ ಗಲಭೆ ನಡೆಯುತ್ತಿದೆ. ಜನಾಂಗೀಯ ಘರ್ಷಣೆಯಲ್ಲಿ ಅಪಾರ ಅನಾಹುತಗಳು ನಡೆದಿವೆ. ಅತ್ಯಾಚಾರದಂತಹ ಘಟನೆಗಳು ನಡೆದಿವೆ. ಗಲಭೆಯಲ್ಲಿ ೩೦೦ಕ್ಕೂ ಹೆಚ್ಚು ಜನರು ಸಾವನಪ್ಪಿದ್ದಾರೆಂಬ ಮಾಹಿತಿ ಇದೆ. ಅಂದಾಜು ೫೦ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ ಎಂದರು. ಹಿಂಸೆಯಿಂದ ಶಾಂತಿ ನೆಲೆಸಲು ಸಾಧ್ಯವಿಲ್ಲ. ಮಣಿಪುರ ಸರ್ಕಾರ ಮತ್ತು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಅಲ್ಲಿ ಶಾಂತಿ ನೆಲೆಸಲು ಮುಂದಾಗಬೇಕು. ಬುಡಕಟ್ಟು ಜನರನ್ನು ಒಟ್ಟುಗೂಡಿಸಿ ಮಾತುಕತೆ ನಡೆಸಬೇಕೆಂದು ಎಂದು ಸಲಹೆ ನೀಡಿದರು. ಉಪ್ಪಳ್ಳಿ ಮಸೀದಿಯ ಮೌಲಿ ಅವರಂಗಜೇಬ್ ಮಾತನಾಡಿ, ಪ್ರತಿಯೊಂದು ಧರ್ಮಗ್ರಂಥಗಳು ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದಕುವ ಸಂದೇಶ ನೀಡುತ್ತವೆ. ದೇಶದ ದೊಡ್ಡ ಧರ್ಮಗ್ರಂಥ ಸಂವಿಧಾನವು ಜನರು ಪರಸ್ಪರ ಪ್ರೀತಿಯಿಂದ ಬದುಕುವಂತೆ ಹೇಳುತ್ತದೆ ಎಂದರು. ಭಾರತ ದೇಶದಲ್ಲಿ ನೆಲೆಸಿರುವ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು. ಪ್ರೀತಿ ಸಹಭಾಳ್ಳೆಯಿಂದ ಜೀವಿಸಬೇಕು ಎಂದ ಅವರು, ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಅಲ್ಲಿ ಗಲಭೆ ಸೃಷ್ಟಿಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿದರು. ರೆವರೆಂಡ್ ಜಾರ್ಜ್ ವಿನೋದ್‌ಕುಮಾರ್ ಮಾತನಾಡಿ, ದೇಶದಲ್ಲಿ ಶಾಂತಿ ಕದಡಲು ಇಂತಹ ಘರ್ಷಣೆಗಳನ್ನು ಹುಟ್ಟು ಹಾಕಲಾಗುತ್ತಿದೆ. ಇದು ಅಪಾಯಕಾರಿಯಾದ ಬೆಳವಣಿಗೆಯಾಗಿದ್ದು, ಹಿಂಸೆ ಜೀವನದ ಮೌಲ್ಯವಾಗ ಬಾರದು. ಅಹಿಂಸೆ ಜೀವನದ ಮೌಲ್ಯವಾಗಬೇಕು ಎಂದು ತಿಳಿಸಿದರು. ಶಿಕ್ಷಣ ಸಂಸ್ಥೆಗಳು ಹಾಗೂ ಧಾರ್ಮಿಕ ಕೇಂದ್ರಗಳು ಮಾನವ ಮೌಲ್ಯಗಳನ್ನು ಕಲಿಸುವ ಕೆಲಸ ಮಾಡುತ್ತಿವೆ. ಆದರೆ, ಅಂತಹ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡಿರುವ ಘಟನೆ ಖಂಡನೀಯ ಎಂದ ಅವರು, ಹಿಂಸಾ ಪ್ರವೃತ್ತಿ ಈ ಸಮಾಜದಲ್ಲಿ ಕಟ್ಡಕಡೆಯವರು ಗುರಿಯಾಗುತ್ತಿದ್ದಾರೆ. ಅವರ ಬದುಕು ಬೀದಿಗೆ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಿಂಸೆ ಅಟ್ಟಹಾಸ ಮೆರೆದರೇ, ಪ್ರಜಾಪ್ರಭುತ್ವ ಶಕ್ತಿ ಕಳೆದುಕೊಳ್ಳುತ್ತದೆ. ಮಾನವೀಯ ಮೌಲ್ಯಗಳ ಪತನವಾಗುತ್ತವೆ. ಹಿಂಸೆಯಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳು ಉಳಿಯಬೇಕಾ ದರೇ ದೇಶದಲ್ಲಿ ಶಾಂತಿ ನೆಲೆಸಬೇಕು. ಮಣಿಪುರದಲ್ಲಿ ನಡೆದ ಗಲಭೆಯನ್ನು ನಿಯಂತ್ರಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಹಿಂಸೆ ಸೃಷ್ಟಿಸಿದವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ತಿಳಿಸಿದರು. ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‌ಪಾರ್ಕ್ ವೃತ್ತದವರೆಗೂ ನಡೆದ ಮೌನ ಪ್ರತಿಭಟನೆಯಲ್ಲಿ ಕ್ರೈಸ್ತ ಸಮುದಾಯದ ನೂರಾರು ಜನರು, ಧರ್ಮಗುರುಗಳು ಪಾಲ್ಗೊಂಡಿದ್ದರು. ಪ್ರತಿಭಟನೆ ಬಳಿಕ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೂಬೆನ್ ಮೊಸೆಸ್, ಶಶಿಕಾಂತ್, ಪಿಂಟೋ, ಶ್ರೀಧರ್ ಸ್ಯಾಮ್ಯೂಯಲ್, ಪ್ರಸಾದಯ್ಯ, ಜಾಬ್ ಸಚಿನ್, ಸುರೇಖಾ ಸಂಪತ್ ರಾಜ್ ಸೇರಿದಂತೆ ಅನೇಕರು ಇದ್ದರು. Christian organizations protest against Manipur riots

ಚಿಕ್ಕಮಗಳೂರು: ಮಣಿಪುರ ಗಲಭೆ ನಿಯಂತ್ರಿಸಲು ಕೇಂದ್ರ ಮತ್ತು ಅಲ್ಲಿನ ರಾಜ್ಯ ಸರ್ಕಾರ ಮುಂದಾಗಬೇಕು. ಎರಡು ಸಮುದಾಯಗಳ ನಡುವೆ ಮಾತುಕತೆ ನಡೆಸಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಧರ್ಮ ಗುರು ಡಾ|ಟಿ.ಅಂಥೋಣಸ್ವಾನಿ ಮನವಿ ಮಾಡಿದರು.

ಶುಕ್ರವಾರ ನಗರದಲ್ಲಿ ಶಾಂತಿ ಮತ್ತು ಸೌಹಾರ್ದ ಒಕ್ಕೂಟ ಕ್ರೈಸ್ತ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ನಮ್ಮ ನಡಿಗೆ ಐಕ್ಯತೆ ಕಡೆಗೆ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಆಜಾದ್‌ಪಾರ್ಕ್ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಮಣಿಪುರ ರಾಜ್ಯದಲ್ಲಿ ಮೇ ತಿಂಗಳಿಂದ ಅಲ್ಲಿ ಗಲಭೆ ನಡೆಯುತ್ತಿದೆ. ಜನಾಂಗೀಯ ಘರ್ಷಣೆಯಲ್ಲಿ ಅಪಾರ ಅನಾಹುತಗಳು ನಡೆದಿವೆ. ಅತ್ಯಾಚಾರದಂತಹ ಘಟನೆಗಳು ನಡೆದಿವೆ. ಗಲಭೆಯಲ್ಲಿ ೩೦೦ಕ್ಕೂ ಹೆಚ್ಚು ಜನರು ಸಾವನಪ್ಪಿದ್ದಾರೆಂಬ ಮಾಹಿತಿ ಇದೆ. ಅಂದಾಜು ೫೦ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ ಎಂದರು.

ಹಿಂಸೆಯಿಂದ ಶಾಂತಿ ನೆಲೆಸಲು ಸಾಧ್ಯವಿಲ್ಲ. ಮಣಿಪುರ ಸರ್ಕಾರ ಮತ್ತು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಅಲ್ಲಿ ಶಾಂತಿ ನೆಲೆಸಲು ಮುಂದಾಗಬೇಕು. ಬುಡಕಟ್ಟು ಜನರನ್ನು ಒಟ್ಟುಗೂಡಿಸಿ ಮಾತುಕತೆ ನಡೆಸಬೇಕೆಂದು ಎಂದು ಸಲಹೆ ನೀಡಿದರು.

ಉಪ್ಪಳ್ಳಿ ಮಸೀದಿಯ ಮೌಲಿ ಅವರಂಗಜೇಬ್ ಮಾತನಾಡಿ, ಪ್ರತಿಯೊಂದು ಧರ್ಮಗ್ರಂಥಗಳು ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದಕುವ ಸಂದೇಶ ನೀಡುತ್ತವೆ. ದೇಶದ ದೊಡ್ಡ ಧರ್ಮಗ್ರಂಥ ಸಂವಿಧಾನವು ಜನರು ಪರಸ್ಪರ ಪ್ರೀತಿಯಿಂದ ಬದುಕುವಂತೆ ಹೇಳುತ್ತದೆ ಎಂದರು.

ಭಾರತ ದೇಶದಲ್ಲಿ ನೆಲೆಸಿರುವ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು. ಪ್ರೀತಿ ಸಹಭಾಳ್ಳೆಯಿಂದ ಜೀವಿಸಬೇಕು ಎಂದ ಅವರು, ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಅಲ್ಲಿ ಗಲಭೆ ಸೃಷ್ಟಿಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿದರು.

ರೆವರೆಂಡ್ ಜಾರ್ಜ್ ವಿನೋದ್‌ಕುಮಾರ್ ಮಾತನಾಡಿ, ದೇಶದಲ್ಲಿ ಶಾಂತಿ ಕದಡಲು ಇಂತಹ ಘರ್ಷಣೆಗಳನ್ನು ಹುಟ್ಟು ಹಾಕಲಾಗುತ್ತಿದೆ. ಇದು ಅಪಾಯಕಾರಿಯಾದ ಬೆಳವಣಿಗೆಯಾಗಿದ್ದು, ಹಿಂಸೆ ಜೀವನದ ಮೌಲ್ಯವಾಗ ಬಾರದು. ಅಹಿಂಸೆ ಜೀವನದ ಮೌಲ್ಯವಾಗಬೇಕು ಎಂದು ತಿಳಿಸಿದರು.

ಶಿಕ್ಷಣ ಸಂಸ್ಥೆಗಳು ಹಾಗೂ ಧಾರ್ಮಿಕ ಕೇಂದ್ರಗಳು ಮಾನವ ಮೌಲ್ಯಗಳನ್ನು ಕಲಿಸುವ ಕೆಲಸ ಮಾಡುತ್ತಿವೆ. ಆದರೆ, ಅಂತಹ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡಿರುವ ಘಟನೆ ಖಂಡನೀಯ ಎಂದ ಅವರು, ಹಿಂಸಾ ಪ್ರವೃತ್ತಿ ಈ ಸಮಾಜದಲ್ಲಿ ಕಟ್ಡಕಡೆಯವರು ಗುರಿಯಾಗುತ್ತಿದ್ದಾರೆ. ಅವರ ಬದುಕು ಬೀದಿಗೆ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂಸೆ ಅಟ್ಟಹಾಸ ಮೆರೆದರೇ, ಪ್ರಜಾಪ್ರಭುತ್ವ ಶಕ್ತಿ ಕಳೆದುಕೊಳ್ಳುತ್ತದೆ. ಮಾನವೀಯ ಮೌಲ್ಯಗಳ ಪತನವಾಗುತ್ತವೆ. ಹಿಂಸೆಯಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳು ಉಳಿಯಬೇಕಾ ದರೇ ದೇಶದಲ್ಲಿ ಶಾಂತಿ ನೆಲೆಸಬೇಕು. ಮಣಿಪುರದಲ್ಲಿ ನಡೆದ ಗಲಭೆಯನ್ನು ನಿಯಂತ್ರಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಹಿಂಸೆ ಸೃಷ್ಟಿಸಿದವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ತಿಳಿಸಿದರು.

ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‌ಪಾರ್ಕ್ ವೃತ್ತದವರೆಗೂ ನಡೆದ ಮೌನ ಪ್ರತಿಭಟನೆಯಲ್ಲಿ ಕ್ರೈಸ್ತ ಸಮುದಾಯದ ನೂರಾರು ಜನರು, ಧರ್ಮಗುರುಗಳು ಪಾಲ್ಗೊಂಡಿದ್ದರು. ಪ್ರತಿಭಟನೆ ಬಳಿಕ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೂಬೆನ್ ಮೊಸೆಸ್, ಶಶಿಕಾಂತ್, ಪಿಂಟೋ, ಶ್ರೀಧರ್ ಸ್ಯಾಮ್ಯೂಯಲ್, ಪ್ರಸಾದಯ್ಯ, ಜಾಬ್ ಸಚಿನ್, ಸುರೇಖಾ ಸಂಪತ್ ರಾಜ್ ಸೇರಿದಂತೆ ಅನೇಕರು ಇದ್ದರು.

Christian organizations protest against Manipur riots

About Author

Leave a Reply

Your email address will not be published. Required fields are marked *

You may have missed