September 20, 2024

ಬೋಳರಾಮೇಶ್ವರ ದೇವಾಲಯದಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ

0
ಬೋಳರಾಮೇಶ್ವರ ದೇವಾಲಯದಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ

ಬೋಳರಾಮೇಶ್ವರ ದೇವಾಲಯದಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ

ಚಿಕ್ಕಮಗಳೂರು: ನಗರ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಶನಿವಾರ ಚಿಕ್ಕಮಗಳೂರು ಜಿಲ್ಲಾ ಮತ್ತು ತಾಲ್ಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ೧೮೪ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ವಿಶೇಷ ಪೂಜೆ ಸಲ್ಲಿಸಿ ಆಚರಿಸಲಾಯಿತು.

ಶಾಸಕ ಹೆಚ್.ಡಿ.ತಮ್ಮಯ್ಯ ರವರು ಕ್ಯಾಮೆರಾ ಕ್ಲಿಕ್ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವಿಶ್ವ ಛಾಯಾಗ್ರಾಹಕರ ದಿನಾಚಾರಣೆ ಶುಭಾಶಯವನ್ನು ತಿಳಿಸಿ, ಛಾಯಾಗ್ರಾಹಕ ವೃತ್ತಿ ಸುಂದರವಾದ ಒಂದು ಗೌರವಯುತ ವೃತ್ತಿಯಾಗಿದೆ, ಛಾಯಾಗ್ರಾಹಕರು ಇಲ್ಲದೆ ಯಾವುದೇ ಶುಭ ಸಮಾರಂಭಗಳು ನೆಡೆಯುವುದಿಲ್ಲ, ಛಾಯಾಗ್ರಾಹಕ ವೃತ್ತಿಯೂ ಕಷ್ಟಕರವಾದ ವೃತ್ತಿಯಾಗಿದೆ ಇಂತಹ ಛಾಯಾಗ್ರಾಹಕ ಕುಟುಂಬಗಳಿಗೆ ಭದ್ರತೆ ನೀಡುವುದರ ಬಗ್ಗೆ ಆಲೋಚಿಸಲಾಗುವುದು ಹಾಗೂ ಛಾಯಾಗ್ರಾಹಕರ ಸಂಘಕ್ಕಾಗಿ ನಿವೇಶನ ಕೊಡಿಸುವಂತೆ ಪ್ರಸ್ತಾಪ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ನಗರಸಭೆ ಪ್ರಾಧಿಕಾರದಡಿಯಲ್ಲಿ ನಿವೇಶನ ಮಂಜೂರು ಮಾಡಲಾಗುವುದು ಎಂದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಛಾಯಾಗ್ರಾಹಕರಿಗೆ ಐ.ಡಿ ಕಾರ್ಡ್ ವಿತರಿಸಿ ಮಾತನಾಡಿ ಕಪ್ಪು-ಬಿಳುಪಿನಿಂದ ಪ್ರಾರಂಭವಾದ ಛಾಯಾಚಿತ್ರ ತಂತ್ರಜ್ಞಾನ ಬೆಳೆದಂತೆ ಅನೇಕ ಬದಲಾವಣೆ ಜೊತೆಗೆ ಬೆರಳ ತುದಿಯಲ್ಲಿ ಛಾಯಾಚಿತ್ರ ನೀಡುವ ಹಂತಕ್ಕೆ ಬಂದಿದೆ, ಛಾಯಾಗ್ರಾಹಕರಿಗೆ ನಗರಸಭೆಯಿಂದ ಸಿಗುವ ಅನುಕೂಲಗಳನ್ನು ಮಾಡಿಕೊಡಲಾಗುವುದು, ಎಸ್ಸಿ-ಎಸ್ಟಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದ್ದು, ನಗರಸಭೆ ವತಿಯಿಂದ ದೋರೆಯುವ ಸವಲತ್ತುಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಜಯಚಂದ್ರ ಮಾತನಾಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ನಯಾಜ್, ಛಾಯಾಗ್ರಾಹಕ ಸಂಘದ ಪ್ರಧಾನ ಕಾರ್ಯದರ್ಶಿ ರೇಣುಕಪ್ಪ. ಮಾಜಿ ಪ್ರಧಾನ ಕಾರ್ಯದರ್ಶಿ ಕಿಶೋರ್‌ಕುಮಾರ್, ತಾಲ್ಲೂಕು ಸಂಘದ ಅಧ್ಯಕ್ಷ ಸುನೀಲ್, ಕಾರ್ಯದರ್ಶಿ ವಿನಯ್, ಸದಸ್ಯರಾದ ದಿನೇಶ್, ಕವಿತಾಗೋಪಾಲ್, ರಮೇಶ್, ನವೀನ್, ಮೂರ್ತಿ, ಗಣೇಶ್, ಪ್ರಸನ್ನ, ಲಕ್ಷ್ಮೀಕಾಂತ, ರಘು, ಸತೀಶ, ಜಾಕಿರ್, ಶಿವು, ಮತ್ತಿತರರು ಇದ್ದರು.

 

World Photographers Day Celebration at Bolarameswara Temple

About Author

Leave a Reply

Your email address will not be published. Required fields are marked *