September 20, 2024

ದೇವರಾಜ ಅರಸು ರಾಜ್ಯ ಕಂಡ ಮಹಾನ್ ವ್ಯಕ್ತಿ

0
ಮಾಜಿ ಮುಖ್ಯಮಂತ್ರಿ, ಮೌನಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸು ಅವರ ೧೦೮ನೇ ಜನ್ಮದಿನಾಚರಣೆ

ಮಾಜಿ ಮುಖ್ಯಮಂತ್ರಿ, ಮೌನಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸು ಅವರ ೧೦೮ನೇ ಜನ್ಮದಿನಾಚರಣೆ

ಚಿಕ್ಕಮಗಳೂರು: ರಾಜ್ಯ ಕಂಡ ಮಹಾನ್ ವ್ಯಕ್ತಿ ಡಿ.ದೇವರಾಜ ಅರಸು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಮಾಜಿ ಮುಖ್ಯಮಂತ್ರಿ, ಮೌನಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸು ಅವರ ೧೦೮ನೇ ಜನ್ಮದಿನಾಚರಣೆ ಉದ್ಘಾಟಿಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಅರಸುಅವರು ನಡೆದುಬಂದ ದಾರಿ ಸುಲಭವಾಗಿರಲಿಲ್ಲ ಬಿಎಸ್ಸಿ ಪದವಿ ಪಡೆದರೂ ಮಣ್ಣಿನ ಮಗನಾಗಿ ಬೆರೆತುಹೋಗಿದ್ದರೆಂದರು.

ದೇವರಾಜ ಅರಸು ೧೯೧೫ರ ಆಗಸ್ಟ್ ೨೦ರಂದು ಮೈಸೂರಿ ಜಿಲ್ಲೆಯ ಪಿರಿಯಪಟ್ಟಣ ತಾಲೂಕು ಬೆಟ್ಟದ ತುಂಗದ ಅರಸು ಮನೆತನದ ದೇವರಾಜ ಅರಸು ಮತ್ತು ದೇವೀರಮ್ಮಣ್ಣಿಯವರ ಪುತ್ರರಾಗಿ ಜನಿಸುತ್ತಾರೆ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದ ಬಳಿಕ ಕಲ್ಲಹಳ್ಳಿಗೆ ಬಂದು ಇಪ್ಪತ್ತು ವರ್ಷಗಳ ಕಾಲ ಕೃಷಿಕರಾಗಿ ದುಡಿದರು. ಹೈನುಗಾರಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಹೇಳಿದರು.

ಅರಸರು ೧೯೪೬ರಲ್ಲಿ ಪ್ರಜಾಪ್ರತಿನಿಧಿಸಭೆಗೆ ನಡೆದ ಚುನಾವಣೆಯು ಸಾರ್ವಜನಿಕ ಬದುಕಿಗೆ ಪ್ರವೇಶಿಸುವ ಅವಕಾಶ ದೊರೆಯಿತು. ಅವರು ೨ ಬಾರಿ ಮುಖ್ಯಮಂತ್ರಿಯಾದಾಗ ಹಿಂದುಳಿದವರ್ಗ, ಶೋಷಿತವರ್ಗ, ರೈತರ ಪರವಾಗಿ ಕೆಲಸಮಾಡುವ ಅವಕಾಶ ದೊರೆಯಿತು.ಯಾರೂ ಮಾಡದ ಉಳುವವನೆ ಭೂ ಒಡೆಯ ಕಾನೂನನ್ನು ಜಾರಿಗೊಳಿಸುವ ಮೂಲಕ ರೈತರ ಮನದಲ್ಲಿ ಶಾಶ್ವತವಾಗಿ ಉಳಿಯುವಂತಾದರು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಜೀವನದಲ್ಲಿ ಮುಖ್ಯವಾದ ಗುರಿಯನ್ನಿಟ್ಟುಕೊಂಡು ವಿದ್ಯಾಭ್ಯಾಸ ಮುಂದುವರೆಸಿದರೆ ಉಜ್ವಲ ಭವಿಷ್ಯ ಸಿಗುತ್ತದೆ. ವಿದ್ಯಾರ್ಥಿಗಳು ದೊಡ್ಡದೊಡ್ಡ ಕನಸ್ಸು ಕಾಣಬೇಕೆಂದು ತಿಳಿಸಿ, ಈ ಕ್ಷೇತ್ರದ ಜನರು ನನ್ನನ್ನು ಆಯ್ಕೆಮಾಡಿದ್ದು, ನಾನು ನಿಮ್ಮೆಲ್ಲರ ಜನಸೇವಕನಾಗಿ ಕೆಲಸ ನಿರ್ವಹಿಸುತ್ತೇನೆಂದರು.

ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ ಮಾತನಾಡಿ, ದೇವರಾಜ ಅರಸು ಮಹಾನ್ ವ್ಯಕ್ತಿ. ಹಿಂದುಳಿದ ವರ್ಗದವರ ಏಳಿಗೆಗೆ ಶ್ರಮಿಸಿದವರು. ಅವರ ಆದರ್ಶವನ್ನು ನಾವೆಲ್ಲರು ಪಾಲಿಸಬೇಕು. ರಾಜ್ಯಕ್ಕೆ ಕರ್ನಾಟಕವೆಂದು ಹೆಸರಿಟ್ಟವರು. ಅವರು ನಡೆದುಬಂದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ಹೇಳಿದರು.

ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ದೇವರಾಜು ಅರಸು ಕುರಿತು ಉಪನ್ಯಾಸನೀಡಿ, ಅರಸು ಅವರ ಚಿಂತನೆಗಳ ಬಗ್ಗೆ ಮೆಲುಕುಹಾಕಬೇಕಾಗಿದೆ. ಕಲ್ಲಲ್ಲಿ ಅರಳಿದ ಅಪರೂಪದ ಪುಷ್ಪ ಅವರಾಗಿದ್ದರು. ಸಮಾಜ ವಿಜ್ಞಾನಿಯಾಗಿದ್ದರು. ಹಿಂದುಳಿದ ವರ್ಗಕ್ಕೆ ಸಮಪಾಲು ಸಿಗಬೇಕೆಂದು ಮಹಾದಾಸೆಯನ್ನು ಹೊಂದುವ ಮೂಲಕ ಅದರಂತೆ ಕೆಲಸ ಮಾಡಿದವರು. ಹಿಂದುಳಿದ ವರ್ಗಕ್ಕೆ ಅಸ್ಮಿತೆ, ಅಸ್ತಿತ್ವವನ್ನು ತಂದು ಕೊಟ್ಟವರು ಎಂದು ಬಣ್ಣಿಸಿದರು.

ಕರ್ನಾಟಕದಲ್ಲಿ ಬರಗಾಲ ಸೃಷ್ಟಿಯಾದಾಗ ಬಸವರು ಮಾಡಿದ್ದ ಸಾಲವನ್ನು ಮನ್ನಾಮಾಡುವುದಕ್ಕಾಗಿ ಋಣಪೆರಿಹಾರೆ ಶಾಸನವನ್ನು ರೂಪಿಸಲಾಯಿತು. ಅನಿಷ್ಟ ಪದ್ಧತಿ ಮಲಹೊರುವ ಪದ್ಧತಿಯನ್ನು ನಿಷೇಧಿಸಲಾಯಿತು.ಜೀತ ಪದ್ಧತಿಯನ್ನು ನಿಷೇಧಿಸಲಾಯಿತು.ಮಹತ್ತರವಾದ ಭೂ ಸುಧಾರಣೆಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಉಳುವವನೆ ಭೂಮಿಯ ಒಡೆಯರನ್ನಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ದಲಿತ ಮುಖಂಡ ಕೆ.ಟಿ.ರಾಧಾಕೃಷ್ಣ, ವಕೀಲ ಅನಿಲ್‌ಕುಮಾರ್, ಜಿಲ್ಲಾಧಿಕಾರಿ ಮೀನಾನಾಗರಾಜ್, ಅರಸು ಸಂಘದ ಅಧ್ಯಕ್ಷ ಮಧುಕುಮಾರ್‌ರಾಜ್ ಅರಸು, ಹಿಂದುಳಿದ ವರ್ಗ ಇಲಾಖೆ ಅಧಿಕಾರಿ ಸೋಮಶೇಖರ್, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ಕಾಂಗ್ರೆಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಇದ್ದರು.

ತಾಲೂಕು ಕಚೇರಿ ಆವರದಿಂದ ಆರಂಭವಾದ ಮೆರವಣಿಗೆಯನ್ನು ಶಾಸಕ ಹೆಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ವಿಧಾನಪರಿಷತ್‌ಸದಸ್ಯ ಎಸ್.ಎಲ್.ಭೋಜೇಗೌಡ, ಜಿಲ್ಲಾಧಿಕಾರಿ ಮೀನಾನಾಗರಾಜ್, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಉಮಾಪ್ರಶಾಂತ್ ಇದ್ದರು.

Devaraja Arasu birthday celebration

About Author

Leave a Reply

Your email address will not be published. Required fields are marked *