September 20, 2024

ದೇಶದಲ್ಲಿ ಮೌಡ್ಯ, ಕಂದಚಾರದ ವಿರುದ್ಧ ಹೋರಾಡಿದವರು ದಾಬೋಳ್ಕರ್

0
ನಗರದ ಕೋಟೆ ಸಮೀಪ ಆರ್.ಕೆ.ಸ್ಟುಡಿಯೋ ಸಭಾಂಗಣದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ನಗರದ ಕೋಟೆ ಸಮೀಪ ಆರ್.ಕೆ.ಸ್ಟುಡಿಯೋ ಸಭಾಂಗಣದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಚಿಕ್ಕಮಗಳೂರು: ದೇಶದಲ್ಲಿನ ಮೌಡ್ಯ ಮತ್ತು ಕಂದಚಾರವನ್ನು ತಡೆದು ಸಮಾಜಕ್ಕೆ ವೈಜ್ಞಾ ನಿಕ ವಿಶ್ಲೇಷಣೆ ನೀಡುವ ಮೂಲಕ ಸಾಮಾನ್ಯ ಜನರ ಉನ್ನತಿಗೆ ಶ್ರಮವಹಿಸಿದವರು ಡಾ|| ನರೇಂದ್ರ ದಾಬೋಳ್ಕರ್ ಎಂದು ಹಿರಿಯ ಸಾಹಿತಿ ಡಾ.ಬೆಳವಾಡಿ ಮಂಜುನಾಥ್ ಹೇಳಿದರು.

ನಗರದ ಕೋಟೆ ಸಮೀಪ ಆರ್.ಕೆ.ಸ್ಟುಡಿಯೋ ಸಭಾಂಗಣದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ ಹಾಗೂ ಆರ್.ಕೆ.ಆರ್ಟ್ ಮತ್ತು ಡಿಸೈನ್ ಸ್ಟುಡಿಯೋ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದಾಬೋಳ್ಕರ್ ಅವರು ಅಂದಿನ ಸಮಯದಲ್ಲಿ ಪಠ್ಯಪುಸ್ತಕಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಎನ್. ಸಿ.ಟಿ.ಆರ್.ಟಿ.ಗೆ ಪತ್ರ ಬರೆದವರು. ಬೆಂಗಳೂರು ಇನ್ಸೂಟ್ಯೂಟ್ ಆಫ್ ಸೈನ್ಸ್‌ಗೆ ಅಭಿವೃದ್ದಿಗೆ ಶ್ರಮಿಸಲು ಕೇಂದ್ರ ಸರ್ಕಾರಕ್ಕೆ ೨೫ ಕೋಟಿ ಬಿಡುಗಡೆಗೊಳಿಸಲು ಮನವಿ ಮಾಡಿದ ಅಪರೂಪದ ನಾಯಕ ಎಂದು ಹೇಳಿದರು.

ಮೂಲತ ಮಹಾರಾಷ್ಟ್ರ ರಾಜ್ಯದಲ್ಲಿ ನರೇಂದ್ರ ದಾಬೋಳ್ಕರ್ ಜನಿಸಿದರಾದರೂ ಕೂಡಾ ದೇಶಾದ್ಯಂತ ಸಂಚರಿಸಿ ವೈಜ್ಞಾನಿಕ ಮನೋವೃತಿ ಬೆಳೆಸಲು ಕಂದಚಾರಗಳ ವಿರುದ್ಧ ಹೋರಾಡಿದ ಪರಿಣಾಮ ಇಂದು ದೇಶ ದ ವಿವಿಧ ಕಡೆಗಳಲ್ಲಿ ಅವರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇಂತಹ ವ್ಯಕ್ತಿಗಳು ಸಮಾಜಕ್ಕೆ ಉತ್ತಮ ಕೊ ಡುಗೆ ನೀಡಿರುವುದರಿಂದ ಪ್ರತಿಯೊಬ್ಬರು ಸ್ಪೂರ್ತಿದಾಯಕ ಎಂದರು.

ಚಿತ್ರಕಲೆ ಎಂಬುದು ನಾಗರೀಕತೆ ಹುಟ್ಟುವ ಮೊದಲೇ ಪ್ರಾರಂಭವಾಗಿದ್ದು ಹಿಂದಿನ ಕಾಲದಲ್ಲಿ ಕೇವಲ ಒಂದು ಗೆರೆಯಿಂದ ಚಿತ್ರವನ್ನು ಸೃಷ್ಟಿಸಲಾಗುತ್ತಿತ್ತು. ಆಧುನಿಕತೆ ಬೆಳೆದಂತೆ ಆಯಾಮಗಳು ಬದಲಾಗಿವೆ. ಒಂದೇ ಗೆರೆಯಿಂ ದಲೇ ಇದೀಗ ಇಡೀ ಬ್ರಹ್ಮಂಡವನ್ನು ಸೃಷ್ಟಿಸಬಲ್ಲ ಶಕ್ತಿ ಕಲಾವಿದ ಹೊಂದಿರುವುದು ಖುಷಿಯ ಸಂಗತಿ ಎಂದರು.

ಚಿತ್ರಕಲಾ ತರಬೇತಿಗೆ ಸಂಬಂಧಿಸಿದಂತೆ ಶಾಂತಿನಿಕೇತನ ಶಾಲೆ ಹೊರತುಪಡಿಸಿದರೆ ಬೇರ್‍ಯಾವ ಶಾಲೆಗಳಿ ರಲಿಲ್ಲ. ಇದೀಗ ಆರ್.ಕೆ.ಆರ್ಟ್ ಎಂಬ ನೂತನ ಶಾಲೆಯು ಪ್ರಾರಂಭವಾಗಿದ್ದು ಚಿತ್ರಕಲೆ ಬಗ್ಗೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಕಲಾವಿದನು ಜೀವನದಲ್ಲಿ ಪ್ರತಿಭೆ, ಜಾಣ್ಮೆ ಹಾಗೂ ಕೌಶಲ್ಯತೆ ಎಂಬ ಮೂರು ಗುಣಗಳನ್ನು ಹೊಂದಿರಬೇಕು. ಇದರಿಂದ ಕಲೆಯನ್ನು ಅನಾವರಣಗೊಳಿಸಲು ಸಾಧ್ಯ. ಕೇವಲ ಒಂದುಚಿತ್ರ ಮನುಷ್ಯನ ನೋಟವನ್ನೇ ಬದಲಿಸುವ ಶಕ್ತಿ ಹೊಂದಿರಲು ಕಾರಣ ಕಲೆಗಾರನ ನೂಪುಣತೆ ಸಾಕ್ಷಿ ಎಂದರು.

ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಮಾತನಾಡಿ ಪುರಾತನ ಕಾಲದಲ್ಲಿ ರಂಗೋಲಿ ಚಿತ್ರದ ಮೂಲಕ ಕಲೆ ಎಂಬುದು ಜನಿಸಿದ್ದು ಸರಳ ಮತ್ತು ವಕ್ರ ರೇಖೆಯಿಂದ ಒಂದು ಚಿತ್ರ ಸೃಷ್ಟಿಯಾ ಗಲಿದೆ. ಕಲೆಯನ್ನು ನೋಡಲು ಒಳಗಣ್ಣುಬೇಕು. ಸಾಮಾನ್ಯ ಜನತೆಗೂ, ಕಲಾವಿದರಿಗೂ ನೋಡುವ ನೋಟವೇ ಬೇರೆ ಬೇರೆಯಾಗಿರಲಿದೆ ಎಂದು ಹೇಳಿದರು.

ಆರ್.ಕೆ.ಆರ್ಟ್ ಶಾಲೆಯ ಸಂಸ್ಥಾಪಕ ಉಮೇಶ್ ಮಾತನಾಡಿ ಇಂದಿನ ಯುವಪೀಳಿಗೆಗೆ ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ನೂತನ ಚಿತ್ರಕಲಾ ಶಾಲೆಯನ್ನು ಸ್ಥಾಪಿಸಲಾಗಿದೆ. ಆಸಕ್ತಿಯುಳ್ಳ ಕಲಾವಿದರು ಸ್ವಯಂಪ್ರೇರಿತರಾಗಿ ಸೇರ್ಪಡೆಗೊಳ್ಳುವ ಮೂಲಕ ಚಿತ್ರಕಲೆ ಬೆಳವಣಿಗೆಗೆ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಶರಣ ಸಾಹಿತ್ಯ ಅಧ್ಯಕ್ಷ ರವೀಶ್ ಕ್ಯಾತನ ಬೀಡು, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ವಿಕ ವರದಿಗಾರ ಚೇತನ್, ವನ್ಯಜೀವಿ ಛಾಯಾಗ್ರಾಹಕ ಶಿವಕುಮಾರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ಮಾವಿನಕೆರೆ ದಯಾನಂದ್, ಅಧ್ಯಾಪಕ ಜೈಶಂಕರ್, ಆರ್.ಕೆ.ಆರ್ಟ್ ಕಲಾ ಶಾಲೆ ಯ ಕಾರ್ಯದರ್ಶಿ ಶಿವಕುಮಾರ್, ಸಲಹೆಗಾರ ರಮೇಶ್, ಮೇರಿ ವಿಕ್ಟರ್, ಪಿಡಬ್ಲ್ಯೂಡಿ ಇಲಾಖೆ ಗವಿ ರಂಗಪ್ಪ ಮತ್ತಿತರರು ಹಾಜರಿದ್ದರು.

National Scientific Psychology Day

 

About Author

Leave a Reply

Your email address will not be published. Required fields are marked *