September 19, 2024

ಸಂಘ ಸಂಸ್ಥೆಗಳು ಸಮಾಜ ಸೇವೆಗೆ ಮೊದಲ ಆದ್ಯತೆ ನೀಡಬೇಕು

0
ರೋಟರಿ ಕಾಫಿ ಲ್ಯಾಂಡ್ ನ ನೂತನ ಅಧ್ಯಕ್ಷ ತನೋಜ್ ನಾಯ್ಡು ತಂಡದ ಪದಗ್ರಹಣ ಸಮಾರಂಭ

ರೋಟರಿ ಕಾಫಿ ಲ್ಯಾಂಡ್ ನ ನೂತನ ಅಧ್ಯಕ್ಷ ತನೋಜ್ ನಾಯ್ಡು ತಂಡದ ಪದಗ್ರಹಣ ಸಮಾರಂಭ

ಚಿಕ್ಕಮಗಳೂರು: ಸಂಘ ಸಂಸ್ಥೆಗಳು ಸಮಾಜ ಸೇವೆಗೆ ಮೊದಲ ಆದ್ಯತೆ ನೀಡಬೇಕು ಎಂದು ರೋಟರಿ ಕಾಫಿ ಲ್ಯಾಂಡ್‌ನ ವಲಯ ಸೇನಾನಿ ನಾಸೀರ್ ಹುಸೇನ್ ಸಲಹೆ ಮಾಡಿದರು.

ನಗರದ ರಾಜ್ ವಿಲ್ಲಾ ಸಭಾಂಗಣದಲ್ಲಿ ಬುಧವಾರ ನಡೆದ ರೋಟರಿ ಕಾಫಿ ಲ್ಯಾಂಡ್ ನ ನೂತನ ಅಧ್ಯಕ್ಷ ತನೋಜ್ ನಾಯ್ಡು ತಂಡದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಸೇವೆ ಮನುಷ್ಯನನ್ನು ದೈವತ್ವಕ್ಕೇರಿಸುತ್ತದೆ. ಬದುಕನ್ನು ಸಾರ್ಥಕ ಗೊಳಿಸು ತ್ತದೆ. ನಮ್ಮ ಹೆಸರನ್ನು ಚಿರಸ್ಥಾಯಿಯಾಗಿಸುತ್ತದೆ ಎಂದ ಅವರು, ಈ ಹಿನ್ನೆಲೆಯಲ್ಲಿ ರೋಟರಿ ಕಾಫಿ ಲ್ಯಾಂಡ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಬಡವರು, ದೀನರು ಅಶಕ್ತರು ಮತ್ತು ಅಸಹಾಯಕರ ಸೇವೆ ಮಾಡಬೇಕು. ನೊಂದವರ ಕಣ್ಣೀರು ಒರೆ ಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಚಂದ್ರಯಾನ ಯಶಸ್ವಿಯಾದ ದಿನವೇ ಪದಗ್ರಹಣ ನಡೆದಿರುವುದು ಸಂತಸದ ಸಂಗತಿ. ಆ ನಿಟ್ಟಿನಲ್ಲಿ ತನೋಜ್ ನಾಯ್ಡು ಅದೃಷ್ಟವಂತರು ಎಂದ ಅವರು, ನೂತನ ತಂಡ ನಗರದಲ್ಲಿ ನಡೆಯುವ ರೋಟರಿ ಜಿಲ್ಲಾ ಸಮ್ಮೇಳನದ ಯಶಸ್ಸಿಗೆ ದುಡಿಯ ಬೇಕು ಎಂದು ತಿಳಿಸಿದರು.

ನಿರ್ಗಮಿತ ಅಧ್ಯಕ್ಷ ಎಸ್.ಎನ್.ಮಂಜುನಾಥ್ ಅವರು ನೂತನ ಅಧ್ಯಕ್ಷ ತತನೋಜ್ ನಾಯ್ಡು ಅವರಿಗೆ ಸಮಾರಂಭದಲ್ಲಿ ಅಧಿಕಾರವನ್ನು ಹಸ್ತಾಂತರಿಸಿದರು.
ನೂತನ ಅಧ್ಯಕ್ಷ ತನೋಜ್ ನಾಯ್ಡು ಮಾತನಾಡಿ, ರೋಟರಿ ಕಾಫಿ ಲ್ಯಾಂಡ್‌ನ ಅಧ್ಯಕ್ಷಗಿರಿ ತಮಗೆ ಬಯಸದೇ ಬಂದ ಭಾಗ್ಯವಾಗಿದೆ ಎಂದರು.

ನಗರದಲ್ಲಿ ನಡೆಯುವ ರೋಟರಿ ಜಿಲ್ಲಾ ಸಮ್ಮೇಳನದ ಯಶಸ್ವಿಗೆ ಎಲ್ಲರೂ ತಮ್ಮೊಂ ದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸಂಸ್ಥೆಗೆ ಹೊಸದಾಗಿ ಸೇರ್ಪಡೆಗೊಂಡ ನೂತನ ಸದಸ್ಯರನ್ನು ಸಮಾರಂಭದಲ್ಲಿ ಸ್ವಾಗತಿಸಿ, ಪ್ರಮಾಣವಚನ ಬೋಧಿಸಲಾಯಿತು.

ರೋಟರಿ ಕಾಫಿ ಲ್ಯಾಂಡ್ ಜಿಲ್ಲಾ ಉಪರಾಜ್ಯಪಾಲ ಅನಂತೇಗೌಡ, ಕಾರ್ಯದರ್ಶಿ ನಾಗೇಶ್ ಕೆಂಜಿಗೆ, ಜಿಲ್ಲಾ ಮಾಜಿ ರಾಜ್ಯಪಾಲ ಡಿ.ಎಸ್.ರವಿ, ಗುರುಪ್ರಸಾದ್, ಸುಧಾ ಗೌಡ, ಬಿ.ಕೆ.ಗುರುಮೂರ್ತಿ, ಡಾ.ವೀರೇಂದ್ರ, ಆನಂದ್, ವಿವೇಕ್, ಶಿವರಾಜ್ ಉಪಸ್ಥಿ ತರಿದ್ದರು.

Inauguration ceremony of the new president of Rotary Coffee Land Tanoj Naidu team

About Author

Leave a Reply

Your email address will not be published. Required fields are marked *

You may have missed