September 20, 2024

ಸನಾತನ ಹಿಂದೂ ಧರ್ಮದ ಬಗ್ಗೆ ಅವಹೇಳನ ಖಂಡಿಸಿ ವಿ.ಎಚ್.ಪಿ ಪ್ರತಿಭಟನೆ

0
VHP Protests Condemn Insults About Sanatana Hindu Dharma

VHP Protests Condemn Insults About Sanatana Hindu Dharma

ಚಿಕ್ಕಮಗಳೂರು: ಸನಾತನ ಹಿಂದೂ ಧರ್ಮದ ಬಗ್ಗೆ ತಮಿಳುನಾಡಿನ ಸಚಿವ ಉದಯ ನಿಧಿ ಸ್ಟಾಲಿನ್ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿ?ತ್, ಬಜರಂಗದಳ ಕಾರ್ಯಕರ್ತರು ಇಂದು ನಗರದ ಅಜಾದ್ ವೃತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಭಾರತೀಯ ಸಂವಿಧಾನದಂತೆ ಪ್ರತಿಜ್ಞಾ ವಿಧಿಯನ್ನು ತಮಿಳುನಾಡಿನ ಸರ್ಕಾರದ ಮಂತ್ರಿಯಾಗಿ ಸ್ವೀಕರಿಸಿದ ಉದಯ ನಿಧಿ ಸ್ಟಾಲಿನ್‌ರವರು ಸೆಪ್ಟೆಂಬರ್ ೨.ರಂದು ನಡೆದ ಸತತ ಅಬಾಲಿಷನ್ ಕಾನ್ಫsರೆನ್ಸ್ ಸಭೆಯಲ್ಲಿ ಭಾಗವಹಿಸಿ ಸನಾತನ ಇಂದು ಧರ್ಮವನ್ನು ಮೂಲೋಚ್ಚಾಟನೆ ಮಾಡುವಂತೆಯೂ ಹಿಂದು ಧರ್ಮವನ್ನು ಸೊಳ್ಳೆ, ಮಲೇರಿಯ, ಡೆಂಗ್ಯೂನಂತಹ ಕಾಯಿಲೆಗೆ ಹೋಲಿಸಿ ಭಾ?ಣ ಮಾಡಿರುವುದನ್ನು ಖಂಡಿಸಿದರು.

ಸನಾತನ ಧರ್ಮವನ್ನು ಮೂಲೋಚ್ಚಾಟನೆ ಮಾಡುವಂತಹ ಹೇಳಿಕೆ ನೀಡಿ ಹಿಂದುಗಳನ್ನು ಬೆದರಿಸುವ ,ಭಯ ಹುಟ್ಟಿಸುವಂತಹ ಧರ್ಮದ ಆಧಾರದಲ್ಲಿ ಮೂಲೋಚ್ಚಾಟನೆ ಮಾಡುವಂತಹ ಅಪರಾಧಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಧರ್ಮದ ಆಧಾರದಲ್ಲಿ ಸನಾತನಿಗಳ ಡೆಂಗ್ಯೂ, ಮಲೇರಿಯಾ ಗಳಿಗೆ ಹೋಲಿಸಿ ಉದ್ದೇಶಪೂರ್ವಕ ಅವಮಾನ ಅಪಮಾನ ಮಾನಹಾನಿ ಮಾಡಿದ್ದಾರೆ. ವಿಶ್ವದಾದ್ಯಂತ ಇರುವ ಹಿಂದುಗಳ ಭಾವನೆಯನ್ನು ಧಾರ್ಮಿಕತೆಯನ್ನು ಕಾಸಿಗೊಳಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ತಮ್ಮ ಈ ಹೇಳಿಕೆಯಿಂದ ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಕದಡಿ ಅಶಾಂತಿಯನ್ನು ದುರುದ್ದೇಶ ಪೂರ್ವಕವಾಗಿ ಮಾಡಿಸುವ ಪ್ರಯತ್ನ ಮಾಡಿದ್ದು ಸಂವಿಧಾನ ಬದ್ಧವಾದ ಸಚಿವ ಸ್ಥಾನ ಅಲಂಕರಿಸಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಧರ್ಮವೊಂದನ್ನು ಮೂಲೋಚ್ಚಾಟನೆ ಮಾಡುವ ಸಾರ್ವಜನಿಕ ಕರೆ ನೀಡುವ ಮೂಲಕ ದ್ವೇ? ಪೂರ್ಣ ಭಾ?ಣ ಮಾಡಿ ಸಂವಿಧಾನ ಪ್ರತಿಜ್ಞೆ ಉದ್ದೇಶಪೂರ್ವಕ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದರು.

ಸನಾತನ ಹಿಂದೂ ಸಮಾಜದ ವಿರುದ್ಧ ದ್ವೇ?ಪೂರ್ಣ ಭಾ?ಣ ಮಾಡಿ ಸನಾತನ ಹಿಂದು ಧರ್ಮವನ್ನು ವಿದ್ವೇಶಕ್ಕೆ ಒಳಪಡಿಸುವ ಸನಾತನ ಹಿಂದೂ ಸಮಾಜದ ವಿರುದ್ಧ ದ್ವೇ?ದ ವಾತಾವರಣ ನಿರ್ಮಾಣ ಮಾಡುವ ಭಾ?ಣ ಮಾಡಿರುವ ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ವಿ.ಎಚ್.ಪಿ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಪೈ, ಕಾರ್ಯದರ್ಶಿ ರಂಗನಾಥ್ ಜಿಲ್ಲಾ ಸಂಯೋಜಕ ಸಿ.ಡಿ ಶಿವಕುಮಾರ್, ಶಾಮ್, ಯೋಗೀಶ್‌ರಾಜ್‌ಅರಸ್, ದಿಲೀಪ್ ಶೆಟ್ಟಿ, ಸುನಿಲ್ ಆಚಾರ್ಯ ಭಾಗವಹಿಸಿದ್ದರು.

VHP Protests Condemn Insults About Sanatana Hindu Dharma

About Author

Leave a Reply

Your email address will not be published. Required fields are marked *