September 20, 2024

ಶ್ರೀ ಕೃಷ್ಣನ ಗುಣಗಾನ ಇಂದಿಗೂ ಪ್ರಸ್ತುತ. ಆತನ ನಡೆ ಎಂದೆಂದಿಗೂ ಜೀವಂತ

0
ಸಂಸ್ಕಾರ ಭಾರತಿ ಮತ್ತು ಗಾಯತ್ರಿ ಮಹಿಳಾ ಮಂಡಳಿ ವತಿಯಿಂದ ನಗರದ ರಂಗಣ್ಣನವರ ಛತ್ರದಲ್ಲಿ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಠಮಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟನೆ

ಸಂಸ್ಕಾರ ಭಾರತಿ ಮತ್ತು ಗಾಯತ್ರಿ ಮಹಿಳಾ ಮಂಡಳಿ ವತಿಯಿಂದ ನಗರದ ರಂಗಣ್ಣನವರ ಛತ್ರದಲ್ಲಿ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಠಮಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟನೆ

ಚಿಕ್ಕಮಗಳೂರು: ೫೩೦೦ ವರ್ಷಗಳನ್ನು ದಾಟಿರುವ ಶ್ರೀ ಕೃಷ್ಣನ ಗುಣಗಾನ ಇಂದಿಗೂ ಪ್ರಸ್ತುತ. ಆತನ ನಡೆ ಎಂದೆಂದಿಗೂ ಜೀವಂತ ಎಂದು ಸಂಸ್ಕಾರ ಭಾರತಿ ಸಂಸ್ಥೆಯ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ರಾಮಚಂದ್ರ ತಿಳಿಸಿದರು.

ಸಂಸ್ಕಾರ ಭಾರತಿ ಮತ್ತು ಗಾಯತ್ರಿ ಮಹಿಳಾ ಮಂಡಳಿ ವತಿಯಿಂದ ನಗರದ ರಂಗಣ್ಣನವರ ಛತ್ರದಲ್ಲಿ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಠಮಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀಕೃಷ್ಣ ಜನ್ಮಾಷ್ಠಮಿ ಸಂಸ್ಕಾರ ಭಾರತಿಯ ಪ್ರಮುಖ ೬ ಉತ್ಸವಗಳಲ್ಲಿ ಒಂದಾಗಿದೆ. ಕೃಷ್ಣ ಎನ್ನುವ ಹೆಸರೇ ಹೇಳುವಂತೆ ಆಕರ್ಷಕ ಎಂದರ್ಥ ಮತ್ತು ಎಲ್ಲರಿಗೂ ಆಕರ್ಶಣೀಯವಾದದ್ದು. ಶಿಶು, ಬಾಲಕ, ವೃದ್ಧಾಪ್ಯದ ವರೆಗೆ ಎಲ್ಲರನ್ನೂ ಸೆಳೆಯುವ ಶಕ್ತಿ ಶ್ರೀಕೃಷ್ಣನಿಗಿದೆ. ರೂಪದಲ್ಲಿರಬಹುದು, ಗುಣ, ನಡೆ, ನುಡಿ, ಆಚಾರ, ವಿಚಾರ ಎಲ್ಲದರಲ್ಲೂ ಎಲ್ಲರನ್ನೂ ಆಕರ್ಷಿಸುವ ಆದರ್ಶ ವ್ಯಕ್ತಿತ್ವ ಎಂದರೆ ಅದು ಶ್ರೀಕೃಷ್ಣ ಎಂದರು.

ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಎಲ್ಲರೂ ಕೃಷ್ಣನನ್ನು ನೋಡಿ, ಕೇಳಿ ಸಂಭ್ರಮಿಸುತ್ತಾರೆ. ಇದು ಕೃಷ್ಣನ ಶಕ್ತಿಗಿರುವ ಶಕ್ತಿ. ಮಕ್ಕಳ ಹುಮ್ಮಸ್ಸನ್ನು ಗಮನಿಸಿದಾಗ ಕೃಷ್ಣ ಇಂದಿಗೂ ಎಷ್ಟು ಪ್ರಸ್ತುತ ಎನ್ನುವುದು ಗೊತ್ತಾಗುತ್ತದೆ ಎಂದರು.

ಸಂಸ್ಕಾರ ಭಾರತಿಯ ಸಚ್ಚಿದಾನಂದ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಕಾರ ಭಾರತಿ ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ, ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಂಸ್ಥೆಯಾಗಿದೆ. ದೇಶದಲ್ಲಿ ೬೪ ಕಲೆಗಳಿವೆ. ಕಲಾ ಪ್ರಕಾರಗಳ ಮೂಲಕವೇ ನಮ್ಮಲ್ಲಿ ಸಂಸ್ಕಾರ ಉಳಿದು ಬಂದಿದೆ ಎಂದು ನಮ್ಮ ಹಿರಿಯರು ಮನಗಂಡು ಸಂಸ್ಕಾರ ಭಾರತಿ ಸಂಸ್ಥೆಯನ್ನು ರಾಷ್ಟ್ರಮಟ್ಟದಲ್ಲಿ ಹುಟ್ಟು ಹಾಕಿ. ಇಲ್ಲಿರುವ ಎಲ್ಲಾ ಕಲೆ ಹಾಗೂ ಕಲಾವಿದರನ್ನು ಉಳಿಸಿ, ಬೆಳಸಿ ಅವರಿಗೆ ಸೂಕ್ತವಾದ ವಾತಾವರಣ ಕಲ್ಪಿಸಿ, ನವ ಪೀಳಿಗೆಗೆ ಹೊಸ ಆಯಾಮ ಮತ್ತು ಅವಕಾಶವನ್ನು ಕಲ್ಪಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದರು.

ಯುಗಾದಿಯಿಂದ ನಮ್ಮ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ. ನಂತರ ಗುರುಪೂರ್ಣಿಮೆ, ನಂತರ ಶ್ರೀಕೃಷ್ಣ ಜನ್ಮಾಷ್ಠಾಮಿ ಆಚರಿಸಲಾಗುತ್ತಿದೆ. ಮೊದಲನೆ ಜಗದ್ಗುರು ಎನ್ನಿಸಿಕೊಂಡಿರುವುದು ಶ್ರೀ ಕೃಷ್ಣ. ಮನುಷ್ಯನಿಗೆ ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಯಾವ ರೀತಿ ಅದನ್ನು ಎದುರಿಸಬೇಕು ಎಂದು ಯೋಚಿಸಿದಾಗ ಕೃಷ್ಣನ ಜೀವನ ಚರಿತ್ರೆಯನ್ನು ನೀಡಿದರೆ ಆತ ಹುಟ್ಟಿನಿಂದಲೇ ಕಷ್ಟ ಪ್ರಾರಂಭವಾಗುತ್ತದೆ. ಜೈಲಿನಲ್ಲಿ ಹುಟ್ಟಿದ ಕ್ಷಣದಿಂದಲೇ ಮನುಷ್ಯ ಎದುರಿಸುವ ಎಲ್ಲಾ ಕಷ್ಟಗಳನ್ನು ಎದುರಿಸುವುದನ್ನು ಆತನ ಜೀವನ ಚರಿತ್ರೆಯಲ್ಲಿ ಕಾಣಬಹುದು ಎಂದರು.

ಕಷ್ಟದ ಸಂದರ್ಭದಲ್ಲಿ ಸಾಮಾನ್ಯ ಮನುಷ್ಯರು ಕುಗ್ಗಿಹೋಗುತ್ತಾರೆ. ಆದರೆ ಓರ್ವ ಸ್ಥಿತ ಪ್ರಜ್ಞನಾದ ಜ್ಞಾನಿಯಾದ ಮನುಷ್ಯ ಅದನ್ನು ಎದುರಿಸಿ ಸಮಸ್ಯೆ, ಸವಾಲುಗಳನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಂಡು ಜೀವನ ನಡೆಸಬಹುದು ಎನ್ನುವ ಆದರ್ಶ ಕೃಷ್ಣನ ಜೀವನ ಚರಿತ್ರೆಯಲ್ಲಿ ಸಿಗುತ್ತದೆ ಎಂದರು.

ಸಂಸ್ಕಾರ ಭಾರತಿಯ ಮಹಾ ಪೋಷಕರಾದ ಚಂದ್ರಮೌಳಿ, ಸಂಸ್ಕಾರ ಭರತಿ ಅಧ್ಯಕ್ಷರಾದ ದಿನೇಶ್ ಪಟೇಲ್, ಶ್ರೀ ಗಾಯತ್ರಿ ಮಹಿಳಾ ಮಂಡಳಿ ಅಧ್ಯಕ್ಷೆ ಬನಶಂಕರಿ ಜೋಶಿ ವೇದಿಕೆಯಲ್ಲಿದ್ದರು. ರತ್ನಾ ಭಾಸ್ಕರ್ ಸ್ವಾಗತಿಸಿದರು. ಶ್ರೀ ಕೃಷ್ಣನ ವೇಷ ಧರಿಸಿದ ಚಿಣ್ಣರು ಸಂಭ್ರಮಿಸಿದರು.

Krishna Janmashtami celebration program

About Author

Leave a Reply

Your email address will not be published. Required fields are marked *