September 20, 2024

ಭೂ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಆಗ್ರಹಿಸಿ ತಾಲ್ಲೂಕು ಕಚೇರಿ ಎದರು ಪ್ರತಿಭಟನೆ

0
ಭೂ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಆಗ್ರಹಿಸಿ ತಾಲ್ಲೂಕು ಕಚೇರಿ ಎದರು ಪ್ರತಿಭಟನೆ

ಭೂ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಆಗ್ರಹಿಸಿ ತಾಲ್ಲೂಕು ಕಚೇರಿ ಎದರು ಪ್ರತಿಭಟನೆ

ಚಿಕ್ಕಮಗಳೂರು: ಅರಣ್ಯ ಮತ್ತು ಕಂದಾಯ ಇಲಾಖೆ ಗೊಂದಲಗಳಿಂದಾಗಿ ಉದ್ಭವವಾಗಿರುವ ಭೂ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಆಗ್ರಹಿಸಿ ಕಸ್ತೂರಿ ರಂಗನ್ ವರದಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ವತಿಯಿಂದ ತಾಲ್ಲೂಕು ಕಚೇರಿ ಎದರು ಪ್ರತಿಭಟನೆ ನಡೆಯಿತು.

ಸಮಿತಿಯ ಪ್ರಧಾನ ಸಂಚಾಲಕ ಎಸ್.ವಿಜಯಕುಮಾರ್ ಮಾತನಾಡಿ, ಜಿಲ್ಲಾದ್ಯಂತ ಕಂದಯ, ಗೋಮಳ, ಇನಾಂಭೂಮಿ ಹಾಗೂ ಅರಣ್ಯ ಭೂಮಿ ಹಾಗೂ ಅರಣ್ಯ ಭೂಮಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸದ ಕಾರಣ ಸಾವಿರಾರು ರೈತರು ದಾಖಲೆ ಇದ್ದವರೂ ಮತ್ತು ಇಲ್ಲದೆ ಹಲಾವರು ವರ್ಷಗಳಿಂದ ಅನುಭವದಲ್ಲಿರುವ ಅಕ್ರಮ ಸಕ್ರಮ ಇನ್ನಿತರೆ ಯೋಜನೆಯ ಅರ್ಜಿದಾರರು ಸಮಸ್ಯೆಗೊಳಗಾಗಿದ್ದಾರೆ ಎಂದು ದೂರಿದರು.

ಫಾರಂ ೫೦, ೫೩, ೫೭, ೯೪ಸಿ ಅಡಿಯಲ್ಲಿ ಸಹಸ್ರಾರು ಮಂದಿ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಇನ್ನೂ ಕೆಲವರು ಹಕ್ಕುಪತ್ರವನ್ನೂ ಪಡೆದಿದ್ದಾರೆ. ಆದರೆ ೪೦-೫೦ ವರ್ಷಗಳ ಹಿಂದೆ ಮೀಸಲು ಅರಣ್ಯಕ್ಕಾಗಿ ೪(೧) ಘೋಷಣೆ ಮಾಡಿದ್ದು, ಆ ವೇಳೆ ರೈತರು ಇರುವಿಕೆ, ಊರು, ಗ್ರಾಮ ಮತ್ತು ಅಭಿವೃದ್ಧಿಯನ್ನು ಪರಿಗಣಿಸದೆ ಕಚೇರಿಯಲ್ಲೇ ನಕ್ಷೆ ತಯಾರಿಸಿ ಈಗ ಸೆಕ್ಷನ್ ೧೭ ಮೀಸಲು ಅರಣ್ಯ ಅಂತಿಮಗೊಳಿಸಲು ಹೊರಟಿರುವುದರಿಂದ ಹಲವಾರು ಬ್ಲಾಕ್‌ಗಳಲ್ಲಿರುವ ರೈತರಿಗೆ ಸಮಸ್ಯೆ ಆಗುತ್ತಿದೆ ಎಂದು ಆರೋಪಿಸಿದರು.

ಇದನ್ನು ಇತ್ಯರ್ಥಪಡಿಸಬೇಕಿರುವ ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳು ಕಾಟಾಚಾರಕ್ಕೆ ಸೆಕ್ಷನ್ ೫ ಹೊರಡಿಸಿ ವರ್ಷಗಟ್ಟಲೆಯಾದರೂ ರೈತರ ಸಮಸ್ಯೆ ಬಗೆಹರಿಸುತ್ತಿಲ್ಲ. ಡೀಮ್ಡ್ ಸಮಸ್ಯೆ ಇಂದ ಜಿಲ್ಲೆಯಲ್ಲಿ ಜನರು ನಲುಗುಹೋಗಿದ್ದಾರೆ. ಇತ್ತೀಚೆಗೆ ಕೇಂದ್ರ ಡೀಮ್ಡ್ ಎಂಬ ಪದವನ್ನು ಕೈಬಿಡಲಾಗಿದೆ ಎಂದು ಗೆಜೆಟ್‌ನಲ್ಲಿ ಘೋಷಿಸಿದ್ದರು ಈ ಬಗ್ಗೆ ರಾಜ್ಯದ ಅಧಿಕಾರಿಗಳು ಸೂಕ್ತ ನಿಲುವನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸುತ್ತಿಲ್ಲ. ಇದರಿಂದ ಗೊಂದಲದಲ್ಲೇ ಜನರು ಕಾಲ ಕಳೆಯುವಂತಾಗಿದೆ ಎಂದು ತಿಳಿಸಿದರು.

ಕಸ್ತೂರಿ ರಂಗನ್ ವರದಿ ವಿರೋಧಿಸಿ ಹೋರಾಟಗಳು ನಡೆದು ಹಲವು ವರ್ಷಗಳು ಕಳೆದರೂ ಕೇಂದ್ರ ಸಕಾರದಿಂದ ನಿಯೋಜಿಸಲಾಗಿದ್ದ ೫ ಜನರ ಸಮಿತಿ ಈ ವರೆಗೂ ನಮ್ಮ ಪ್ರದೇಶಗಳಿಗೆ ಭೇಟಿ ನಈಡಿ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಇನ್ನೊಂದೆಡೆ ಯಥಾಸ್ಥಿತಿಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.

ಇದೇ ರೀತಿ ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಯೋಜನೆಯನ್ನು ಸಹ ಗ್ರಾಮಸ್ಥರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಏಕಮುಖವಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗುತ್ತಿದೆ. ಸರ್ಕಾರಿ ಜಮೀನುಗಳಲ್ಲಿ ರೈತರಿಗೆ ಮಂಜೂರಾಗಿರುವ ಜಮೀನುಗಳಲ್ಲಿ ಪೋಡಿ ಮಾಡಲು ೧ ರಿಂದ ೫ ಮಾಡುವಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆರೋಪಿಸಿದರು.

ಇಂತಹ ಹತ್ತುಹಲವು ಸಮಸ್ಯೆಗಳು ಜಿಲ್ಲೆಯ ಜನರನ್ನು ಕಾಡುತ್ತಿರುವ ಬಗ್ಗೆ ಹಲವು ವರ್ಷಗಳಿಂದ ಸರ್ಕಾರದ ಗಮನಕ್ಕೆ ತಂದು ಹೋರಾಟ ಮಾಡುತ್ತಿದ್ದರೂ ಸಕಾರಾತ್ಮಕವಾದ ಸ್ಪಂದನೆ ಸಿಗುತ್ತಿಲ್ಲ. ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಿ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್.ಡಿ.ತಮ್ಮಯ್ಯ ಮನವಿ ಸ್ವೀಕರಸಿ ಮಾತನಾಡಿ, ಅರಣ್ಯ ಸಚಿವ ಈಶ್ವರಖಂಡ್ರೆ ಅವರು ಸೆ.೨೪ ರಂದು ನಗರಕ್ಕೆ ಆಗಮಿಸಲಿದ್ದಾರೆ ಅಂದು ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗುವುದು. ಯಾರನ್ನೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ರೈತರು ಯಾವುದೇ ಕಾರಣಕ್ಕೂ ಭಯಪಡಬಾರದು ಎಂದು ಭರವಸೆ ನೀಡಿದರು.

ತಹಶೀಲ್ದಾರ್ ಸುಮಂತ್, ಎ.ಸಿ.ಎಫ್ ಅವರು ಮನವಿ ಸ್ವೀಕರಿಸಿದರು. ಹೋರಾಟ ಸಮಿತಿಯ ಸಂಚಾಲಕರಾದ ಕೆ.ಕೆ.ರಘು, ವಾಸುಪೂಜಾರಿ, ಶಾಂತಕುಮಾರ್, ಚಂದ್ರೇಗೌಡ, ಮುಸಾದಿಕ್ ಪಾಷಾ, ಕೃಷ್ಣಪ್ಪ, ಪ್ರವೀಣ್ ಇತರರು ಭಾಗವಹಿಸಿದ್ದರು.

A protest was held in front of the taluk office demanding the settlement of land issues

About Author

Leave a Reply

Your email address will not be published. Required fields are marked *