September 20, 2024

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡಲು ಗುರಿ

0
ಐಡಿಎಸ್‌ಜಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ

ಐಡಿಎಸ್‌ಜಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ

ಚಿಕ್ಕಮಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುವಂತೆ ಯುವ ಪ್ರತಿಭೆಗಳಿಗೆ ತರಬೇತಿ, ವಿ?ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲು ಗುರಿ ಹೊಂದಲಾಗಿದೆ ಎಂದು ಕೃಷಿಕ ಸರ್ವೋದಯ ಫೌಂಡೇಶನ್ ಸಂಸ್ಥೆಯ ಗೌರವ ಕಾರ್ಯದರ್ಶಿ ಟಿ.ತಿಮ್ಮೇಗೌಡ ತಿಳಿಸಿದರು.

ಅವರು ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಕೃಷಿಕ್ ಸರ್ವೋದು ಪೌಂಡೇಶನ್ ವತಿಯಿಂದ ಏರ್ಪಡಿಸಲಾಗಿದ್ದ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಐಎಎಸ್, ಕೆಎಎಸ್ ಇನ್ನೂ ಮುಂತಾದ ವೃತ್ತಿ ಕೋರ್ಸ್‌ಗಳಿಗೆ ತರಬೇತಿ ನೀಡಲು ಈ ಸಂಸ್ಥೆಯನ್ನು ೧೯೯೨ ರಲ್ಲಿ ಪ್ರಾರಂಭಿಸಲಾಗಿ ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದರ ಸೇವೆ ಲಭ್ಯವಿದೆ ಎಂದು ಮಾಹಿತಿ ನೀಡಿದರು.

ಈ ಕೃಷಿಕ್ ಸರ್ವೋದಯ ಫೌಂಡೇಶನ್ ವತಿಯಿಂದ ಸಂದರ್ಶನಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಮರ್ಪಕವಾದ ವಿ?ಯಗಳನ್ನು ತರಬೇತಿ ಅವಧಿಯಲ್ಲಿ ನೀಡಲಾಗುತ್ತಿದೆ. ಈ ಬಗ್ಗೆ ಕೆಪಿಎಸ್‌ಸಿ ಪರೀಕ್ಷಾ ಕೇಂದ್ರಗಳು ಪ್ರಾಮಾಣಿಕತೆ ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸಂಸ್ಥೆಯ ವತಿಯಿಂದ ಬೆಂಗಳೂರು ಕೇಂದ್ರೀಯ ಕಚೇರಿಯಲ್ಲಿ ಐಎಎಸ್, ಕೆಎಎಸ್ ಬ್ಯಾಂಕಿಂಗ್ ಮತ್ತು ಇನ್ನಿತರೆ ನಾಗರೀಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಬೆಂಗಳೂರು, ತುಮಕೂರು, ಮೈಸೂರು, ಹಾಸನದಲ್ಲಿ ಜಿಲ್ಲಾ ಶಾಖೆಗಳನ್ನು ತೆರೆದು ತರಬೇತಿಗಳನ್ನು ನೀಡಲಾಗುತ್ತಿದೆ. ಕೇಂದ್ರ ಕಚೇರಿಯಲ್ಲಿ ಹಾಗೂ ಜಿಲ್ಲಾ ಶಾಖೆಗಳಲ್ಲಿ ಗ್ರಂಥಾಲಯಗಳನ್ನು ತೆರೆದು ಅಧ್ಯಯನ ಗ್ರಂಥಗಳು, ಆಧುನಿಕ ತಂತ್ರಜ್ಞಾ, ಅಂತರ್ಜಲ ಸೇವೆ ಮತ್ತು ಗಣಕ ಯಂತ್ರಗಳನ್ನು ಅಳವಡಿಸಿರುತ್ತೇವೆ ಎಂದು ವಿವರಿಸಿದರು.

ಕಳೆದ ಹತ್ತು ವ?ಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪದವಿ ಸ್ನಾತಕೋತ್ತರ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದೇವೆ. ೨೦೨೩-೨೪ನೇ ಸಾಲಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಯನ್ನು ಕರೆಯಲಾಗಿದೆ. ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ೧೦ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದರು.

ಕೇಂದ್ರ ಸಂಘವು ಚಿಕ್ಕಮಗಳೂರು ಜಿಲ್ಲೆಯಲ್ಲಿ, ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘ ಮತ್ತು ಶ್ರೀ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದೊಂದಿಗೆ ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯ ಜೆ.ವಿ.ಎಸ್ ಬಿ.ಸಿ.ಬಿ ನಿಲಯದಲ್ಲಿ ಜ.೧೮ ರಂದು ಕಚೇರಿಯನ್ನು ತೆರೆದಿರುತ್ತೇವೆ ಎಂದು ಹೇಳಿದರು.

ಫೌಂಡೇಶನ್‌ನ ಜಿಲ್ಲಾ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಡಾ|| ಸಿ.ಕೆ ಸುಬ್ಬರಾಯ ಮತ್ತು ೧೨ ಜನ ಸದಸ್ಯರು ಸಮಿತಿಯಲ್ಲಿ ಇರುತ್ತಾರೆ. ಫೆ.೪ ಮತ್ತು ಜೂ.೨೮ ರಂದು ಎ.ಐ.ಟಿ ಕಾಲೇಜಿನಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಿರುವುದಾಗಿ ತಿಳಿಸಿದರು.

ಸಂಸ್ಥೆಯ ಮುಖಂಡ ರಾಮಚಂದ್ರ ಮಾತನಾಡಿ ದೇಶದ ಆರ್ಥಿಕ ಮಟ್ಟ ಸುಧಾರಿಸಬೇಕಾದರೆ ಬ್ಯಾಂಕಿಂಗ್ ವ್ಯವಸ್ಥೆ ಸದೃಢವಾಗಿರಬೇಕು ಈ ಹಿನ್ನೆಲೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ, ಹಾಲಿ ಬ್ಯಾಂಕ್‌ಗಳಲ್ಲಿ ಹೊರ ರಾಜ್ಯದ ಕನ್ನಡಿಗರಲ್ಲದ ನೌಕರರು ಸೇವೆ ಸಲ್ಲಿಸುತ್ತಿರುವುದರಿಂದ ಗ್ರಾಹಕರಿಗೆ ತೊಂದರೆ ಆಗುತ್ತಿದೆ ಎಂದು ವಿ?ಧಿಸಿದರು.

ಈ ಸಂದರ್ಭದಲ್ಲಿ ಕೃಷಿಕ್ ಸರ್ವೋದಯ ಪೌಂಡೇಶನ್ ಅಧ್ಯಕ್ಷರಾದ ಡಾ. ಸಿ.ಕೆ.ಸುಭರಾಯ, ಗೌರವ ಕಾರ್ಯದರ್ಶಿ ಸಿ.ಟಿ.ಜಯದೇವ್, ಕಾಲೇಜಿನ ಪ್ರಾಂಶುಪಾಲರಾದ ಕೆ.ಸಿ.ಚಾಂದಿನಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಮಹಿಳಾ ಸಂಘದ ಅಧ್ಯಕ್ಷೆ ಸವಿತಾರಮೇಶ್, ಸಿಇಓ ಕುಳ್ಳೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ ಗೌರವ ಕಾರ್ಯದರ್ಶಿ ೯೪೪೮೬೬೫೭೧೧, ಜಿಲ್ಲಾ ಸಂಯೋಜಕರು ೯೪೪೮೫೩೦೦೫೬, ಜೆವಿಎಸ್ ಕಚೇರಿ ೯೪೮೩೩೯೯೦೩೧, ಎಐಟಿ ಕಚೇರಿ ೯೧೪೧೧೩೩೬೯೭, ಅಧ್ಯಕ್ಷರು ೯೪೪೮೪೮೦೩೪೩ ಸಂಪರ್ಕಿಸಬಹುದಾಗಿದೆ ಎಂದರು.

Training program for students in IDSG College

About Author

Leave a Reply

Your email address will not be published. Required fields are marked *