September 20, 2024

ರೈತರು ಸಾಲ ಮರುಪಾವತಿ ಮಾಡುವ ಮೂಲಕ ಬ್ಯಾಂಕ್‌ನ ಬೆಳವಣಿಗೆಗೆ ಸಹಕರಿಸಬೇಕು

0
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ

ಚಿಕ್ಕಮಗಳೂರು: ಸಾಲ ಪಡೆದ ರೈತರು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವ ಮೂಲಕ ಬ್ಯಾಂಕ್‌ನ ಬೆಳವಣಿಗೆಗೆ ಸಹಕರಿಸಬೇಕು ಎಂದು ಚಿಕ್ಕಮಗಳೂರು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಕೋಟೆ ರಂಗನಾಥ್ ತಿಳಿಸಿದರು.

ಅವರು ಬುಧವಾರ ಜಾನಕಿ ಶ್ರೀ ರಾಮ ಸಭಾ ಭವನದಲ್ಲಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ಮಳೆಯಾಗದೆ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ, ರಾಜ್ಯ ಸರ್ಕಾರವು ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಎಲ್ಲಾ ತಾಲ್ಲೂಕುಗಳು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಲಾಗಿದ್ದು, ರೈತರಿಗೆ ಸಿಗಬೇಕಾದ ಅನುದಾನದಲ್ಲಿ ರೈತರ ಸಾಲದ ಬಡ್ಡಿಮನ್ನಾ ಮಾಡಿದರೆ ಅಸಲನ್ನು ರೈತರು ಕಟ್ಟುತ್ತಾರೆಂದು ತಿಳಿಸಿದರು.

ಜಿಲ್ಲೆಯಲ್ಲಿ ಮಳೆ ಇಲ್ಲದೆ ಕೆರೆ-ಕಟ್ಟೆಗಳು ಒಣಗಿದ್ದು, ಯಾವುದೇ ರೀತಿಯ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ, ಹಿಂದಿನ ಅಧ್ಯಕ್ಷರುಗಳು ರೈತರ ಅಭಿವೃದ್ಧಿ ಪರವಾದ ಕೆಲಸಗಳನ್ನು ಮಾಡಿಕೊಂಡು ಬಂದಿದ್ದು ಅದೇ ರೀತಿಯಲ್ಲಿ ಪುಟ್ಟರಾಜು ರವರು ಬ್ಯಾಂಕ್‌ಗಳಿಗೆ ಬೇಟಿ ನೀಡಿ ಸಣ್ಣ-ಪುಟ್ಟ ತಪ್ಪುಗಳನ್ನು ತಿದ್ದುಪಡಿ ಮಾಡಿ ರೈತರಿಗೆ ಬೇಕಾದ ಅನುಕೂಲಗಳನ್ನು ಮಾಡಿಕೊಡುವಂತೆ ತಿಳಿಸಿದರು.

ನಮ್ಮಲ್ಲಿ ಹೆಚ್ಚಿನ ರೈತರಿಗೆ ಸಾಲ ವಿತರಿಸಲು, ಸಾಲ ಪಡೆದವರು ಪ್ರಾಮಾಣಿಕವಾಗಿ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ಹೆಚ್ಚುವರಿ ಸಾಲ ಪಡೆಯುವ ಜೊತೆಗೆ ಇನ್ನಷ್ಟು ಮಂದಿಗೆ ಸಾಲ ಸೌಲಭ್ಯ ಕೊಡಲು ಅವಕಾಶವಾಗುತ್ತದೆ ಎಂದರು.

ಠೇವಣಿ ಇಡುವವರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿಯನ್ನು ನಮ್ಮ ಬ್ಯಾಂಕ್‌ನಲ್ಲಿ ನೀಡಲಾಗುತ್ತಿದೆ. ಅಲ್ಲದೆ ಆನ್‌ಲೈನ್‌ನಲ್ಲಿ ಯಾವುದೇ ದಾಖಲೆಗಳ ಮಾಹಿತಿ ಸೇರ್ಪಡೆಗೊಳ್ಳದ ಕಾರಣ ಹೆಚ್ಚಿನ ತೆರಿಗೆ ತೆರಬೇಕಾಗುತ್ತದೆ ಎನ್ನುವ ಆತಂಕವೂ ಇರುವುದಿಲ್ಲ. ನಬಾರ್ಡ್ ಮತ್ತು ರಿಸರ್ವ್ ಬ್ಯಾಂಕ್‌ಗಳಿಂದಲೂ ಮಾನ್ಯತೆ ಪಡೆದಿರುವುದರಿಂದ ನಮ್ಮಲ್ಲಿ ಠೇವಣಿ ಇಡುವ ಹಣಕ್ಕೆ ಎಲ್ಲಾ ರೀತಿಯ ಭದ್ರತೆ ಇರುತ್ತದೆ. ಸಾಲ ಸಲಭ್ಯವನ್ನು ವಿಳಂಭವಿಲ್ಲದೆ ಮಂಜೂರು ಮಾಡಲಾಗುತ್ತದೆ ಎಂದರು.

ನಮ್ಮ ಬ್ಯಾಂಕ್‌ಗಳಲ್ಲಿ ಪಡೆದ ಗೃಹ ಸಾಲವನ್ನು ಪಡೆದು ಸುಸ್ತಿ ಆದವರಿಂದ ಹೇಗಾದರೂ ಸರಿ ಸಾಲ ವಸೂಲು ಮಾಡಲೇ ಬೇಕು ಎಂದು ಕೇಂದ್ರ ಬ್ಯಾಂಕ್ ನಿರ್ದೇಶನ ನೀಡಿದೆ. ನಬಾರ್ಡ್‌ನವರು ನಮಗೆ ಸಾಲ ಕೊಡುತ್ತಾರೆ. ಅದಕ್ಕೆ ರಾಜ್ಯ ಸಕಾರ ಜಾಮೀನು ಕೊಟ್ಟಿರುತ್ತದೆ. ಆ ಹಣವನ್ನು ನಾವು ರೈತರಿಗೆ ಹಂಚುತ್ತೇವೆ. ನಿಯಮದ ಪ್ರಕಾರ ಶೇ.೮೦ ರಷ್ಟು ವಸೂಲಾತಿ ಆದರೆ ಮಾತ್ರ ಹೊಸದಾಗಿ ಸಾಲ ಮಂಜೂರಾಗಲು ಸಾಧ್ಯವಾಗುತ್ತದೆ ಎಂದರು.

ಬ್ಯಾಂಕು ೧೯೩೯ ರಲ್ಲಿ ಪ್ರಾರಂಭವಾಗಿರುವ ಬ್ಯಾಂಕು ರಾಜ್ಯದ ೧೩೮ ಶಾಖೆಗಳ ಪೈಕಿ ೩ನೇ ಸ್ಥಾನದಲ್ಲಿದೆ. ಬ್ಯಾಂಕ್‌ನ ಅಮೃತ ಮಹೋತ್ಸವದ ಸ್ಮರಣಾರ್ಥವಾಗಿ ಸುಸಜ್ಜಿತವಾದ ರೈತ ಭವನ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.

ಆಡಳಿತ ಮಂಡಳಿ ಹಾಗೂ ಎಲ್ಲಾ ಸದಸ್ಯರ ಸಹಕಾರ, ಸಲಹೆ, ಸೂಚನೆ ಮೇರೆಗೆ ಒಳ್ಳೆಯ ಬ್ಯಾಂಕ್ ವತಿಯಿಂದ ಉತ್ತಮ ಕೆಲಸ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಈಶ್ವರಹಳ್ಳಿ ಮಹೇಶ್, ಉಪಾಧ್ಯಕ್ಷರಾದ ಕೆ.ಪಿ.ಸತೀಶ್ ಗೌಡ, ನಿದೇಶಕರುಗಳಾದ ಹೆಚ್.ಪಿ.ಬಸವೇಶ್, ಎ.ಎನ್.ರವೀಶ್. ಎಂ.ಸಿ.ಪ್ರಕಾಶ್, ದಾನಿಹಳ್ಳಿ ಮಂಜುನಾಥ್, ಎಂ.ಬಿ.ರುದ್ರೇಗೌಡ, ಕರಾಳಮ್ಮ, ಜಾನಕಮ್ಮ, ಎಸ್.ಇ.ರಮೇಶ್, ,ಮಲ್ಲೇಶಯ್ಯ, ಹೂವಪ್ಪಶೆಟ್ಟಿ, ರಾಜ್ಯ ಬ್ಯಾಂಕಿನ ಪ್ರತಿನಿಧಿ ಪುಟ್ಟರಾಜು, ವ್ಯವಸ್ಥಾಪಕರಾದ ಚಂದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.

Annual General Meeting of All Members of PLD Bank

About Author

Leave a Reply

Your email address will not be published. Required fields are marked *