September 20, 2024

ಅರ್ಹ ಫಲಾನುಭವಿಗಳನ್ನು ತಲುಪಲು ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಅತ್ಯಂತ ಪ್ರಮುಖ

0
ಖಾಸಗಿ ರೆಸಾರ್ಟ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜ್ಞಾನ ಪ್ರಸರಣ ಕಾರ್ಯಕ್ರಮ

ಖಾಸಗಿ ರೆಸಾರ್ಟ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜ್ಞಾನ ಪ್ರಸರಣ ಕಾರ್ಯಕ್ರಮ

ಚಿಕ್ಕಮಗಳೂರು: ಸರ್ಕಾರದ ಅನೇಕ ಕಾರ್ಯಕ್ರಮಗಳು ಯಶಸ್ವಿಯಾಗಿ ಅರ್ಹ ಫಲಾನುಭವಿಗಳನ್ನು ತಲುಪಲು ಸರ್ಕಾರೇತರ ಮತ್ತು ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.

ಸೆಲ್ಕೋ ಸೋಲಾರ್ ಪ್ರೈವೈಟ್ ಲಿಮಿಟೆಡ್ ವತಿಯಿಂದ ಶಿಕ್ಷಣ ಅರಿವಿನ ಆಂದೋಲನ-ಅವಲೋಕನದ ಅಂಗವಾಗಿ ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜ್ಞಾನ ಪ್ರಸರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಚಿಕ್ಕಮಗಳೂರು ಜಿಲ್ಲೆಯ ಗ್ರಾಮಾಂತರ ಪ್ರದೇಶದ ಸುಮಾರು ೨೦೦ ಸರ್ಕಾರಿ ಶಾಲೆಗಳಿಗೆ ಮೆಂಡಾ ಫೌಂಡೇಷನ್ ಸಹಯೋಗದಲ್ಲಿ ವಿದ್ಯುನ್ಮಾನ ಶೈಕ್ಷಣಿಕ ವ್ಯವಸ್ಥೆ (ಡಿಇಪಿ)ಯನ್ನು ಕಲ್ಪಿಸಿಕೊಟ್ಟಿರುವ ಸೆಲ್ಕೋ ಸಂಸ್ಥೆಯ ಕಾರ್ಯ ಶ್ಲಾಘನೀಯ. ಇದರ ಫಲಿತಾಂಶವನ್ನು ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಈಗಾಗಲೇ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಮಕ್ಕಳ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಬ್ರಿಡ್ಜ್ ಕೋರ್ಸ್ ಒಂದನ್ನು ಆರಂಭಿಸಲು ಉದ್ದೇಶಿಸಿದ್ದು ಅದಕ್ಕಾಗಿ ಸೆಲ್ಕೋ ಸಹಯೋಗವನ್ನು ಬಯಸುವುದಾಗಿ ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೆಲ್ಕೋ ಸಂಸ್ಥೆಯ ಸಂಸ್ಥಾಪಕರು ಮತ್ತು ನಿರ್ದೇಶಕರಾದ ಡಾ. ಹರೀಶ್ ಹಂದೆಯವರು, ಭಾರತದಂತಹ ದೇಶದಲ್ಲಿ ಸಮಾಜದ ಎಲ್ಲ ಸ್ಥರಗಳಲ್ಲೂ ಸಮಾನತೆಯನ್ನು ಸಾಧಿಸಲು ಪರಿಹಾರಗಳನ್ನು ಸೃಷ್ಟಿಸುವಂತಹ ಸ್ಮಾರ್ಟ್ ಪ್ರಜೆಗಳನ್ನು ರೂಪಿಸುವ ಅಗತ್ಯವಿದೆ. ಅಂತಹ ಪ್ರಜೆಗಳನ್ನು ಸೃಷ್ಟಿಸಲು ಸ್ಮಾರ್ಟ್ ಕ್ಲಾಸ್ (ವಿದ್ಯುನ್ಮಾನ ಶೈಕ್ಷಣಿಕ ವ್ಯವಸ್ಥೆ) ಒಂದು ಪರಿಣಾಮಕಾರಿ ಸಲಕರಣೆಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಚಿಕ್ಕಮಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಶ್ರೀಮತಿ ವಿಂಧ್ಯಾ ಎನ್.ಎಂ. ಅವರು ಮಾತನಾಡಿ, ಜಿಲ್ಲೆಯಲ್ಲಿ ಗಣಿಗಾರಿಕೆ ಚಟುವಟಿಕೆಗಳಿಂದ ಪ್ರತಿ ವರ್ಷ ಸುಮಾರು ೫೦ ಲಕ್ಷದಷ್ಟು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಸಂಗ್ರಹಣೆಯಾಗುತ್ತಿದ್ದು, ಗ್ರಾಮೀಣ ಪ್ರದೇಶಗಳ ಬಡ ಮಕ್ಕಳು ನಗರಪ್ರದೇಶದ ಮಕ್ಕಳಿಗೆ ಸಿಗುವಂತಹ ವಿದ್ಯುನ್ಮಾನ ಶೈಕ್ಷಣಿಕ ವ್ಯವಸ್ಥೆ (ಡಿಇಪಿ) ಸಿಗುವಂತೆ ಮಾಡುವ ನಿಟ್ಟಿನಲ್ಲಿ ಪ್ರತಿವರ್ಷವೂ ಒಂದಷ್ಟು ಹಣವನ್ನು ವಿನಿಯೋಗಿಸಲು ನಿರ್ಧರಿಸಲಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಮೋಹನ ಭಾಸ್ಕರ ಹೆಗಡೆ ಅವರು, ಬಡತನ ನಿರ್ಮೂಲನೆಗೆ ಸೌರಶಕ್ತಿಯನ್ನು ಒಂದು ಪರಿಣಾಮಕಾರಿ ಸಲಕರಣೆಯನ್ನಾಗಿ ಹೇಗೆ ಉಪಯೋಗಿಸಬಹುದೆಂಬ ಕನಸಿನೊಂದಿಗೆ ಆರಂಭಗೊಂಡ ಸೆಲ್ಕೋ ಸಂಸ್ಥೆಯು ಇಂದು ೧೭೦ಕ್ಕೂ ಹೆಚ್ಚು ಸೌರಶಕ್ತಿಚಾಲಿತ ಜೀವನೋಪಾಯ ಪರಿಕರಂಗಳನ್ನು ಶೋಧಿಸಿದ್ದು ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲೂ ಗಣನೀಯ ಕೆಲ ಮಾಡುತ್ತಿದ್ದೆ ಎಂದರು.

ಕರ್ನಾಟಕದ ಶೈಕ್ಷಣಿಕ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಗೆ ಕಾರಣವಾಗುತ್ತಿರುವ ಡಿಇಪಿ ವ್ಯವಸ್ಥೆಯನ್ನು ಸಾವಿರಾರು ಶಾಲೆಗಳಿಲ್ಲಿ ಅಳವಡಿಸಲು ನೆರವಾಗುತ್ತಿರುವ ಮೆಂಡಾ ಫೌಂಡೇಷನ್ ಕಾರ್ಯ ಬೆಲೆ ಕಟ್ಟಲಾಗದ್ದು ಎಂದರು.

ಡಿಇಪಿ ವ್ಯವಸ್ಥೆಗೆ ಪಠ್ಯಕ್ರಮವನ್ನು ರೂಪಿಸಿಕೊಟ್ಟಿರುವ ನೆಕ್ಸ್ಟ್ ಎಜುಕೇಶನ್ ಸಂಸ್ಥೆಯ ಉಪಾಧ್ಯಕ್ಷರಾದ ಉಷಾರಾಣಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೆಂಡಾ ಫೌಂಡೇಷನ್ ನ ಸಲಹೆಗಾರ ಚೆತುರ್ ಮೆಂಡಾ ಅವರನ್ನು ಸೆಲ್ಕೋ ಸಂಸ್ಥೆ ಮತ್ತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪರವಾಗಿ ಸನ್ಮಾನಿಸಲಾಯಿತು. ಡಿಇಪಿ ವ್ಯವಸ್ಥೆಯಿಂದ ತಮಗೆ ಆಗುತ್ತಿರುವ ಅನುಕೂಲವನ್ನು ಮಲ್ಲಂದೂರು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಕರಾದ ಶ್ರೀ ಸುಂದರೇಶ್ ಮತ್ತು ೧೦ನೇ ತರಗತಿಯ ವಿದ್ಯಾರ್ಥಿ ಶ್ರೀ ಅಭಿಶೇಕ್ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಣಾಧಿಕಾರಿ ಸೆಲ್ಕೋ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು

Knowledge Dissemination Programme

About Author

Leave a Reply

Your email address will not be published. Required fields are marked *