September 20, 2024

ಡಿ.ಆರ್ ದುರ್ಗಪ್ಪಗೌಡ ಆರೋಪ ಸತ್ಯಕ್ಕೆ ದೂರ

0
ಮೂಡಿಗೆರೆ ನಿವಾಸಿ ಕೆ.ಮಂಚೇಗೌಡ ಪತ್ರಿಕಾಗೋಷ್ಠಿ

ಮೂಡಿಗೆರೆ ನಿವಾಸಿ ಕೆ.ಮಂಚೇಗೌಡ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಖಾಸಗಿ ಜಮೀನನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವ ರೈತ ಸಂಘದ ಮುಖಂಡ ಡಿ.ಆರ್ ದುರ್ಗಪ್ಪಗೌಡ ತಮ್ಮ ಮೇಲೆ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಮೂಡಿಗೆರೆ ನಿವಾಸಿ ಕೆ.ಮಂಚೇಗೌಡ ಅವರು ಆರೋಪಿಸಿದರು.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚಿಗೆ ರೈತ ಮುಖಂಡ ದುಗ್ಗಪ್ಪಗೌಡ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.

ಮೂಡಿಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಸೆಸ್‌ಮೆಂಟ್ ನಂಬರ್ ೩೧೫/೧ ರಲ್ಲಿ ಸುಮಾರು ೭೫ ವ?ಗಳ ದಾಖಲೆಗಳ ಆಧಾರದಲ್ಲಿ ತಾವು ೨೦೦೩ ರಲ್ಲಿ ಆಗಿನ ಮಾಲೀಕರಾದ ರಮೇಶ್‌ಪ್ರಭು ಮತ್ತು ಸುರೇಶ್‌ಪ್ರಭು ಇವರುಗಳಿಂದ ಕಾನೂನು ರೀತಿಯಲ್ಲಿ ಖರೀದಿ ಮಾಡಿ ಸ್ವಾಧೀನದಲ್ಲಿದ್ದು ಈ ಜಮೀನಿನಲ್ಲಿ ಸುಮಾರು ೯ ಗುಂಟೆ ಜಾಗವನ್ನು ದುಗ್ಗಪ್ಪಗೌಡ ಅಕ್ರಮಿಸಿಕೊಂಡು ಕಾನೂನುಬಾಹಿರವಾಗಿ ಏಕ ನಿವೇಶನವನ್ನಾಗಿ ಅನುಮೋದನೆ ಪಡೆದುಕೊಂಡು ಪತ್ನಿ ಮತ್ತು ಮಗಳ ಹೆಸರಿಗೆ ವಿಭಾಗ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಈ ರೀತಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಬಿಟ್ಟುಕೊಡುವಂತೆ ಹಲವಾರು ಬಾರಿ ಕೇಳಿಕೊಂಡರು ರೈತ ಸಂಘದ ಪ್ರಭಾವ ಬಳಸಿಕೊಂಡು ಅಧಿಕಾರಿಗಳ ಮೇಲೆ ಒತ್ತಡ ತಂದು ಸ್ವಾಧೀನದಲ್ಲಿದ್ದಾರೆ. ಈ ಬಗ್ಗೆ ಸಕಲೇಶಪುರದ ಮಾಜಿ ಶಾಸಕ ವಿಶ್ವನಾಥ್ ಸ್ಥಳೀಯ ಮುಖಂಡರುಗಳಾದ ಬಿ.ಎಸ್ ಜಯರಾಮ್‌ಗೌಡ, ಬಿ.ಕೆ ಲಕ್ಷ್ಮಣಗೌಡ, ಬಿ.ಎಂ ವಿಶ್ವನಾಥಗೌಡ ಇವರುಗಳ ಸಮ್ಮುಖದಲ್ಲಿ ಪಂಚಾಯಿತಿ ನಡೆದು ಅತಿಕ್ರಮಿಸಿಕೊಂಡಿರುವ ಜಮೀನಿಗೆ ಹಣ ನೀಡುವಂತೆ ಪಂಚಾಯಿತಿದಾಸರರು ತೀರ್ಮಾನ ಮಾಡಿದ್ದರೆಂದು ಹೇಳಿದರು.

ಪಂಚಾಯಿತಿಯಲ್ಲಿ ತೀರ್ಮಾನವಾದ ಹಣ ಕೊಡುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ತಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ತಾವು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಕಾನೂನು ಬದ್ಧವಾಗಿ ಮಧ್ಯದ ಅಂಗಡಿಗಳನ್ನು ನಡೆಸುತ್ತಿದ್ದು, ಯಾವುದೇ ಅಕ್ರಮ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಲ. ಹೀಗಿದ್ದರೂ ತಮ್ಮ ಮೇಲೆ ರೌಡಿ ಪಟ್ಟ ಕಟ್ಟಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿದರು.

ಹಲವಾರು ವ?ಗಳಿಂದ ರೈತ ಸಂಘಟನೆಯಲ್ಲಿ ಜವಾಬ್ದಾರಿ ಸ್ಥಾನದಲ್ಲಿದ್ದು, ಅಕ್ರಮ ನಡೆಸುತ್ತ ಫಾರಂ ನಂ. ೫೩ ಯೋಜನೆಯಲ್ಲಿ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ, ಈ ಸಂಬಂಧವಾಗಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ದೂರು ನೀಡಿರುವುದಾಗಿ ತಿಳಿಸಿದರು.

ನಮ್ಮ ಮಾಲೀಕತ್ವದಲ್ಲಿರುವ ಖಾಸಗಿ ಜಮೀನನ್ನು ಅತಿಕ್ರಮಿಸಿಕೊಂಡಿರುವುದರಿಂದ ಹಣ ಕೊಡುವುದನ್ನು ತಪ್ಪಿಸಿಕೊಳ್ಳಲು ಮತ್ತು ತಮ್ಮ ಅಕ್ರಮಗಳನ್ನು ಮರೆಮಾಚಿಕೊಳ್ಳಲು ಇನ್ನಿತರ ರೈತ ಮುಖಂಡರುಗಳಿಗೆ ತಪ್ಪು ಮಾಹಿತಿ ನೀಡಿ ರೈತ ಸಂಘಟನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ತಮ್ಮ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡರೆ ತಾವು ಕೂಡ ಪ್ರತಿ ಚಳುವಳಿ ನಡೆಸುವುದಾಗಿ ಎಚ್ಚರಿಸಿದರು.ಈ ಸಂದರ್ಭದಲ್ಲಿ ಎಚ್.ಟಿ ವಿಶ್ವನಾಥ್‌ಗೌಡ, ಬ್ರಿಜೇಶ್, ಮನೋಜ್ ಉಪಸ್ಥಿತರಿದ್ದರು.

DR Durgappa Gowda’s allegations are far from the truth

About Author

Leave a Reply

Your email address will not be published. Required fields are marked *