September 20, 2024

ಅ.30 ಶ್ರೀರಾಮಸೇನೆಯಿಂದ ದತ್ತಮಾಲಾ ಅಭಿಯಾನ

0
ಅಪರ ಜಿಲ್ಲಾಧಿಕಾರಿಗಳಿಗೆ ಶ್ರೀರಾಮಸೇನೆ ಮನವಿ

ಅಪರ ಜಿಲ್ಲಾಧಿಕಾರಿಗಳಿಗೆ ಶ್ರೀರಾಮಸೇನೆ ಮನವಿ

ಚಿಕ್ಕಮಗಳೂರು: ಶ್ರೀರಾಮಸೇನೆ ಜಿಲ್ಲಾ ಘಟಕದ ವತಿಯಿಂದ ಅ.೩೦ ರಿಂದ ೭ ದಿನಗಳ ಕಾಲ ದತ್ತಮಾಲಾ ಅಭಿಯಾನ ಆಯೋಜಿಸಲಾಗಿದೆ ನ.೫ ರಂದು ದತ್ತಾತ್ರೇಯ ಪೀಠದಲ್ಲಿ ಸಮರೋಪ ಸಮಾರಂಭ ನಡೆಯಲಿದೆ ಎಂದು ಸೇನೆಯ ಜಿಲ್ಲಾಧ್ಯಕ್ಷ ಜ್ಞಾನೇಂದ್ರ ಜೈನ್ ತಿಳಿಸಿದ್ದಾರೆ.

ಅವರು ಇಂದು ಈ ಸಂಬಂಧ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಈ ವಿಷಯ ತಿಳಿಸಿದ್ದು ಈ ದತ್ತಮಾಲಾ ಅಭಿಯಾನದಲ್ಲಿ ನಾಡಿನ ಪ್ರಮುಖ ಸಾಧು ಸಂತರು ಭಾಗವಹಿಸಲಿದ್ದಾರೆ ಎಂದಿದ್ದಾರೆ.

ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ನೇತೃತ್ವದಲ್ಲಿ ದತ್ತಾತ್ರೇಯ ಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಮಾಡಿ ಶ್ರೀ ಗುರು ದತ್ತಾತ್ರೇಯ ಹೋಮ, ಪೂಜೆ ಹಾಗೂ ಸಾಧು ಸಂತರ ಸಾನಿಧ್ಯದಲ್ಲಿ ಧಾರ್ಮಿಕ ಸಭೆ, ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಸಲಾಗುವುದು. ಆದ್ದರಿಂದ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ಕೊಡುವಂತೆ ಮನವಿ ಮಾಡಿದ್ದಾರೆ.

ಹಿಂದೂಗಳ ಪವಿತ್ರ ಯಾತ್ರ ಕೇಂದ್ರಗಳಲ್ಲಿ ಒಂದಾಗಿರುವ ದತ್ತಪೀಠವನ್ನು ಇಸ್ಲಾಮಿಕರಣದಿಂದ ವಿಮುಕ್ತಗೊಳಿಸಿ ಹಿಂದೂಗಳ ಪವಿತ್ರ ಯಾತ್ರಾ ಕೇಂದ್ರವಾಗಿಸಲು ಕೈಗೊಂಡಿರುವ ಹೋರಾಟದ ಭಾಗವಾಗಿ ಕಳೆದ ೨೦ ವ?ಗಳಿಂದ ಶ್ರೀರಾಮ ಸೇನೆಯು ದತ್ತಮಾಲೆ ಅಭಿಯಾನದ ಮೂಲಕ ಅವಿರತ ಹೋರಾಟ ನಡೆಸುತ್ತಿದೆ ಎಂದಿದ್ದಾರೆ.

ದತ್ತಪೀಠ ವಿವಾದವನ್ನು ರಾಜ್ಯ ಸರ್ಕಾರವೇ ಬಗೆಹರಿಸುವಂತೆ ಸುಪ್ರೀಂ ಕೋರ್ಟ್ ಕಳೆದ ವ?ವೇ ತೀರ್ಪು ನೀಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ದತ್ತಪೀಠದಲ್ಲಿರುವ ಗೋರಿಗಳನ್ನು ಅಲ್ಲಿಂದ ೧೪ ಕಿ.ಮೀ. ದೂರದಲ್ಲಿರುವ ನಾಗೇನಹಳ್ಳಿ ಬಾಬಾ ಬುಡನ್ ದರ್ಗಕ್ಕೆ ಸ್ಥಳಾಂತರಿಸಿ ದತ್ತಪೀಠವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ವಿಭಾಗಾಧ್ಯಕ್ಷ ರಂಜಿತ್ ಶೆಟ್ಟಿ, ಜಿಲ್ಲಾ ಗೌರವ ಅಧ್ಯಕ್ಷ ಅನಿಲ್ ಆನಂದ್, ಸಮಸ್ತ ವಿಶ್ವಧರ್ಮ ರಕ್ಷ ಸೇವಾ ಸಂಸ್ಥಾನದ ಯೋಗಿಶ್ ಸಂಜಿತ್ ಸುವರ್ಣ, ದತ್ತಾಶ್ರಯ ಅರ್ಚಕ ರಾಜೇಂದ್ರ ಕುಮಾರ್, ಜಿಲ್ಲಾ ದುರ್ಗ ಸೇನೆ ಅಧ್ಯಕ್ಷೆ ಶ್ರೀಮತಿ ನವೀನ್‌ರಂಜಿತ್, ಆಟೋ ಸೇನೆ ಜಿಲ್ಲಾಧ್ಯಕ್ಷ ವೆಂಕಟೇಶ್ ,ತಾಲೂಕು ಅಧ್ಯಕ್ಷ ನಂದನ್ ಮತ್ತಿತರರಿದ್ದರು.

A.30 Dattamala Abhiyan by Sri Ram Sena

About Author

Leave a Reply

Your email address will not be published. Required fields are marked *