September 20, 2024

ವಿದ್ಯಾರ್ಥಿಗಳು ಸದಾ ಕ್ರಿಯಾಶೀಲತೆಯಾಗಿರಲು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು

0
ಅಣುವ್ರತ್ ಕ್ರಿಯೋಟಿವಿಟಿ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ ಸಮಾರಂಭ

ಅಣುವ್ರತ್ ಕ್ರಿಯೋಟಿವಿಟಿ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ ಸಮಾರಂಭ

ಚಿಕ್ಕಮಗಳೂರು: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ವಿವಿಧ ಕ್ರೀಡೆ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಹೆಚ್ಚು ಕ್ರಿಯಾಶೀಲರಾಗಿ ಇರುತ್ತಾರೆಂದು ಬಿ.ಜೆ.ಪಿ ಮುಖಂಡರಾದ ಪಲ್ಲವಿ.ಸಿ.ಟಿ.ರವಿ ತಿಳಿಸಿದರು.

ನಗರದ ತೆರಾಪಂಥ್ ಭವನದಲ್ಲಿ ಅಣುವ್ರತ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಅಣುವ್ರತ್ ಕ್ರಿಯೋಟಿವಿಟಿ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ಸ್ಪರ್ಧೆ ಏರ್ಪಟ್ಟಿದೆ, ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನಿಟ್ಟುಕೊಂಡು ಸಾಧನೆ ಮಾಡಬೇಕೆಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಕ್ರೀಡೆ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಹಲವು ಅವಕಾಶಗಳಿವೆ, ಗುರುಗಳ ಮಾರ್ಗದರ್ಶನದೊಂದಿಗೆ ತಮ್ಮ ಜೀವನದ ಗುರಿ ಮುಟ್ಟಿ, ಇತರರಿಗೆ ಮಾರ್ಗದರ್ಶಕರಾಗಬೇಕೆಂದು ತಿಳಿಸಿದರು.

ಅಣುವ್ರತ್ ಸಮಿತಿಯವರು ಸಮಾಜ ಸೇವೆ ಕೆಲಸಗಳ ಜೊತೆಗೆ ನಗರದ ವಿವಿಧ ಶಾಲಾ ಮಕ್ಕಳಿಗೆ ಪ್ರಬಂಧ, ಚಿತ್ರ ಕಲೆ, ಸಂಗೀತ, ಭಾಷಣ ಸ್ಪರ್ಧೆ ಏರ್ಪಡಿಸಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಲು ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.

ಅಣುವ್ರತ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರಾದ ರಾಜೇಶ್ ಚಾವಂತ್ ಮಾತನಾಡಿ ಅಣುವ್ರತ್ ಸಮಿತಿ ವತಿಯಿಂದ ಎಲ್ಲಾ ಜಿಲ್ಲೆಗಳಲ್ಲಿಯೂ ಶಾಲಾ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದ ಮಕ್ಕಳಿಗೆ ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದರು.

ಅಣುವ್ರತ್ ಸಮಿತಿ ಅಧ್ಯಕ್ಷರಾದ ಮಂಜುಬಾಯಿ ಬನ್ಸಾಲಿ ಮಾತನಾಡಿ ನಮ್ಮ ಸಮಾಜದವರು ಸಮಾಜಸೇವೆ ಕೆಲಸಗಳ ಮೂಲಕ ಗುರುತಿಸಿಕೊಂಡಿದ್ದೇವೆ, ನಮ್ಮ ಗುರುಗಳ ಮಾರ್ಗದರ್ಶನದಂತೆ ಸಮಾಜ ಸೇವೆ ಕೆಲಸಗಳನ್ನು ಮಾಡುವುದರ ಜೊತೆಗೆ ಶಾಲಾ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಿಂದ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ, ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅಣುವ್ರತ್ ದಕ್ಷಿಣಚಲ್ ಪ್ರಭಾರಿ ಸುಭದ್ರ ಲೂಟಾವತ್, ರಾಜ್ಯ ಪ್ರಭಾರಿ ಲಾಭೇಶ್ ಕಾಂಸವಾ, ಸಂಯೋಜಕರಾದ ಮದನ್‌ಚಂದ್ ಗಾಧಿಯಾ, ತೆರಾಪಂಥ್ ಸಭಾ ಅಧ್ಯಕ್ಷ ತಾರಾಚಂದ್‌ಜಿ ಸೇಠಿಯಾ, ತೆರಾಪಂಥ್ ಟ್ರಸ್ಟ್ ಅಧ್ಯಕ್ಷ ಅಶೋಕ್‌ಜೀ ದೋಸಿ, ಮಹಾ ಸಭಾ ಕಾರ್ಯಕಾರಿಣಿ ಸದಸ್ಯ ಮಾಣಿಕ್ ಚಂದ್ ಗಾಧಿಯಾ, ತೆರಾಪಂಥ್ ಸಭಾ ಅಧ್ಯಕ್ಷ ಭರತ್ ಬರ್‍ಲೋಟಾ, ಮೂತಿ ಪೂಜಕ್ ಸಂಘದ ಉಪಾಧ್ಯಕ್ಷ ಸಜನ್ ರಾಜ್ ಪಿರಗಲ್, ಅಣುವ್ರತ್ ಸಮಿತಿಯ ಮಾಜಿ ಅಧ್ಯಕ್ಷ ಲಾಲ್ ಚಂದ್‌ಜೀ ಬನ್ಸಾಲಿ, ಮಹಿಳಾ ಮಂಡಲ ಅಧ್ಯಕ್ಷೆ ಗುಣವತಿನಹರ್, ಮಾಜಿ ಅಧ್ಯಕ್ಷೆ ಸಂಗೀತ ಗಾಧಿಯಾ, ಮುಖಂಡರಾದ ಗೌತಮ್ ಆಚಾ, ಕೊಶೋರ್ ಆಚಾ, ನಗರಸಭೆ ಸದಸ್ಯ ವಿಫುಲ್‌ಕುಮಾರ್ ಜೈನ್ ಉಪಸ್ಥಿತರಿದ್ದರು.

Prize distribution ceremony for school children

About Author

Leave a Reply

Your email address will not be published. Required fields are marked *