September 20, 2024

ನಗರಸಭೆ ಅಧ್ಯಕ್ಷರ ರಾಜೀನಾಮೆ ಪ್ರಹಸನಕ್ಕೆ ಬಿಜೆಪಿ ಸದಸ್ಯರದಿಂದ ಅವಿಶ್ವಾಸ ನಿರ್ಣಯದ ಅಸ್ತ್ರ

0
ಬಿಜೆಪಿ ಸದಸ್ಯರದಿಂದ ಚಿಕ್ಕಮಗಳೂರು ನಗಸಭೆಯಲ್ಲಿ ನಗರಸಭೆ ಅಧ್ಯಕ್ಷರ ರಾಜೀನಾಮೆ ಪ್ರಹಸನಕ್ಕೆ ಕುರಿತು ಚರ್ಚೆ ನಡೆಸಿದರು

ಬಿಜೆಪಿ ಸದಸ್ಯರದಿಂದ ಚಿಕ್ಕಮಗಳೂರು ನಗಸಭೆಯಲ್ಲಿ ನಗರಸಭೆ ಅಧ್ಯಕ್ಷರ ರಾಜೀನಾಮೆ ಪ್ರಹಸನಕ್ಕೆ ಕುರಿತು ಚರ್ಚೆ ನಡೆಸಿದರು

ಚಿಕ್ಕಮಗಳೂರು:  ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ರಾಜೀನಾಮೆ ಪ್ರಹಸನದಿಂದ ಆಕ್ರೋಶಗೊಂಡಿರುವ ಬಿಜೆಪಿ ನಗರಸಭಾ ಸದಸ್ಯರುಗಳು ಅವಿಶ್ವಾಸ ನಿರ್ಣಯದ ಅಸ್ತ್ರ ಬಳಸಿ ಪದತ್ಯಾಗ ಮಾಡಲು ನಿರ್ಧರಿಸಿದ್ದಾರೆ.

ಕಳೆದ ಆರು ತಿಂಗಳಿಂದ ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರು ರಾಜೀನಾಮೆ ನೀಡುವ ಮಾತನಾಡುತ್ತ, ಸುಮಾರು ಎರಡು ಬಾರಿ ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿ ವಾಪಸ್ ಪಡೆದು ಪಕ್ಷದ ಒಪ್ಪಂದಕ್ಕೆ ಸೆಡ್ಡು ಹೊಡೆದು ನಿಂತಿದ್ದಾರೆ.

ಬಿಜೆಪಿಯಲ್ಲಿ ಪಕ್ಷದ ಆಂತರಿಕ ಒಪ್ಪಂದದಂತೆ ಸುಮಾರು ಒಂದು ವರ್ಷದ ಹಿಂದೆಯೇ ವೇಣುಗೋಪಾಲ್ ಅವರು ಅಧ್ಯಕ್ಷ ಸ್ಥಾನ ಬಿಟ್ಟು ಕೊಡಬೇಕಾಗಿದ್ದು ಇದೀಗ ಕುಂಟು ನೆಪ ಹೇಳುತ್ತಾ ಅಧಿಕಾರದಲ್ಲೇ ಮುಂದುವರೆದಿದ್ದ ವೇಣುಗೋಪಾಲ್ ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಒಂದೇ ಸಾಲಿನ ರಾಜೀನಾಮೆ ಪತ್ರ ನೀಡಿ ವಾಪಸ್ ಪಡೆದಿದ್ದರು.

ಇದಾದ ನಂತರ ಮೊನ್ನೆಯಷ್ಟೇ ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿ ಯಾರಿಗೂ ಗೊತ್ತಾಗದಂತೆ ರಾಜೀನಾಮೆಯನ್ನು ವಾಪಸ್ ಪಡೆದುಕೊಂಡು ಮೊಬೈಲ್ ಫೋನ್ ಸ್ವಿಚ್‌ಆಫ್ ಮಾಡಿಕೊಂಡು ಯಾರ ಕಣ್ಣಿಗೂ ಕಾಣಿಸದಂತೆ ತೆರೆಮರೆಯಲ್ಲಿ ಇದ್ದಾರೆ.

ವೇಣುಗೋಪಾಲ್ ಅವರ ಈ ನಿರ್ಧಾರದಿಂದ ಕುಪಿತಗೊಂಡಿರುವ ಬಿಜೆಪಿಯ ೧೭ ಮಂದಿ ನಗರ ಸಭೆ ಸದಸ್ಯರಾದ ಟಿ.ರಾಜಶೇಖರ್, ಮಧುಕುಮಾರ್ ಅರಸ್, ಉಮಾ ಕೃಷ್ಣಪ್ಪ, ಕವಿತಾಶೇಖರ್ ಮುಂತಾದ ಸದಸ್ಯರು ನಗರಸಭೆ ಅಧ್ಯಕ್ಷರ ಕಚೇರಿಯಲ್ಲಿ ಸಭೆ ಸೇರಿ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ಮಂಡಿಸುವ ತೀರ್ಮಾನ ಕೈಗೊಂಡು ನಾಳೆ ಜಿಲ್ಲಾಧಿಕಾರಿಗಳಿಗೆ ಅವಿಶ್ವಾಸ ನಿರ್ಣಯ ಮಂಡಿಸುವ ಪತ್ರ ಸಲ್ಲಿಸಲಿದ್ದಾರೆ.

ಬಿಜೆಪಿ ನಗರಸಭಾ ಸದಸ್ಯರ ಸಭೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಟಿ.ರಾಜಶೇಖರ್ ಅವರು ಪಕ್ಷದ ನಿರ್ಧಾರವನ್ನು ಧಿಕ್ಕರಿಸುವ ವೇಣುಗೋಪಾಲ್ ನಡೆಯನ್ನು ಖಂಡಿಸಿದರು.

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವರಸಿದ್ಧಿ ವೇಣುಗೋಪಾಲ್ ಅವರು ಯಾರ ಕಣ್ಣಿಗೂ ಬೀಳದಂತೆ ತಲೆಮರೆಸಿಕೊಂಡಿದ್ದಾರೆ. ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ. ಇಂದು ಬಿಜೆಪಿ ಜಿಲ್ಲಾಧ್ಯಕ್ಷರ ಒಪ್ಪಿಗೆ ಪಡೆದು ನಾಳೆ (ಅ.೧೭) ಜಿಲ್ಲಾಧಿಕಾರಿಗಳಿಗೆ ಅವಿಶ್ವಾಸ ಗೊತ್ತುವಳಿಯನ್ನು ಸಲ್ಲಿಸುವುದಾಗಿ ತಿಳಿಸಿದರು.

ವೇಣುಗೋಪಾಲ್ ಅವರು ಕಾಂಗ್ರೆಸ್ ಪಕ್ಷದ ಸದಸ್ಯರ ಬೆಂಬಲ ಪಡೆದು ಮುಂದುವರೆಯುವುದಾಗಿ ಮಾತುಗಳು ಕೇಳಿ ಬರುತ್ತಿವೆ ತಮ್ಮ ಅಧಿಕಾರವಧಿಯಲ್ಲಿ ದಲಿತ ವಿರೋಧಿ, ಅಲ್ಪಸಂಖ್ಯಾತ ವಿರೋಧಿ, ಓಬಿಸಿ ಸಮುದಾಯದ ವಿರೋಧಿಯಾಗಿದ್ದವರಿಗೆ ಕಾಂಗ್ರೆಸ್ ಸದಸ್ಯರು ಹೇಗೆ ಬೆಂಬಲಿಸುತ್ತಾರೆ ಎಂದು ಪ್ರಶ್ನಿಸಿದರು.

ವೇಣುಗೋಪಾಲ್ ಅವರಿಗೆ ಗೌರವವಿದ್ದರೆ ನಗರಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಅಧಿಕಾರದಲ್ಲಿ ಮುಂದುವರೆಯಬೇಕು ಅಲ್ಲಿಯವರೆಗೆ ನಗರಸಭೆ ವಾಹನವನ್ನು ಬಳಸಲು ಬಿಡುವುದಿಲ್ಲ, ಅಧ್ಯಕ್ಷರ ಸ್ಥಾನದಲ್ಲಿ ಕುಳಿತುಕೊಳ್ಳಲು ಬಿಡುವುದಿಲ್ಲ ಈ ಬಗ್ಗೆ ಪೌರಾಯುಕ್ತರಿಗೂ ತಿಳಿಸಲಾಗಿದೆ ಎಂದು ಎಚ್ಚರಿಸಿದರು.

Discussion by BJP members on Municipal Council Chairman’s resignation farce

About Author

Leave a Reply

Your email address will not be published. Required fields are marked *