September 20, 2024

ಅ.20ರಂದು ನಗರದಲ್ಲಿ ಮಹಿಷಾ ದಸರಾ ಆಚರಣಾ ಕಾರ್ಯಕ್ರಮ

0
ಅ.20ರಂದು ನಗರದಲ್ಲಿ ಮಹಿಷಾ ದಸರಾ ಆಚರಣಾ ಕಾರ್ಯಕ್ರಮ

ಅ.20ರಂದು ನಗರದಲ್ಲಿ ಮಹಿಷಾ ದಸರಾ ಆಚರಣಾ ಕಾರ್ಯಕ್ರಮ

ಚಿಕ್ಕಮಗಳೂರು: ಮಹಿಷಾ ದಸರ ಆಚರಣಾ ಸಮಿತಿ ಮತ್ತು ಪ್ರಗತಿಪರ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಅ.೨೦ರಂದು ನಗರದಲ್ಲಿ ಮಹಿಷಾ ದಸರಾ ಆಚರಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮುಖಂಡ ದಂಟರಮಕ್ಕಿ ಶ್ರೀನಿವಾಸ್ ತಿಳಿಸಿದರು.

ನಗರದಲ್ಲಿಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿವಿಧ ದಲಿತಪರ ಸಂಘಟನೆಗಳು, ಅಂಬೇಡ್ಕರ್ ಸಂಘಟನೆಗಳ ಸಹಯೋಗದೊಂದಿಗೆ ಅ.೨೦ರಂದು ಮಧ್ಯಾಹ್ನ ೨.೩೦ಕ್ಕೆ ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಚಿಂತಕರು ಮತ್ತು ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕೆ.ಎಸ್ ಭಗವಾನ್‌ರವರು ಉದ್ಘಾಟಿಸಲಿದ್ದು ಮುಖ್ಯ ಭಾಷಣಕಾರರಾಗಿ ವಿಚಾರವಾದಿಗಳು ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಮಹೇಶ್‌ಚಂದ್ರಗುರು ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀರಾಮಸೇನೆಯ ಮಹಿಳಾ ಮುಖಂಡರು ಮತ್ತು ಕೆಲ ಬಿಜೆಪಿಯ ನಾಯಕರು ಪ್ರಾಧ್ಯಾಪಕ ಕೆ.ಎಸ್ ಭಗವಾನ್‌ರವರ ಮುಖಕ್ಕೆ ಮಸಿ ಬಳಿಯುವ, ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಹೇಳಿಕೆ ನೀಡಿದ್ದು ಇಂತಹ ಹೇಳಿಕೆಯನ್ನು ನೀಡಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ ಅವರು ಕಾರ್ಯಕ್ರಮದಲ್ಲಿ ಯಾವುದೇ ವ್ಯತ್ಯಾಸಗಳಾದರೂ ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಹೇಳಿದರು.

ಬಿಎಸ್‌ಪಿ ಮುಖಂಡ ವಕೀಲ ಪರಮೇಶ್ವರ್ ಮಾತನಾಡಿ ಈ ಕಾರ್ಯಕ್ರಮದಲ್ಲಿ ಮೂಲನಿವಾಸಿಗಳ ಇತಿಹಾಸ ಅರಿತು ಪ್ರಸ್ತುತ ಮೂಲನಿವಾಸಿಗಳ ಕುರಿತಾಗಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಡಿಎಸ್‌ಎಸ್ ಮುಖಂಡ ಮರ್ಲೆ ಅಣ್ಣಯ್ಯ ಮಾತನಾಡಿ ಜಿಲ್ಲೆಯ ದಲಿತ ಸಂಘಟನೆಗಳಿಗೆ ಸುಮಾರು ೫೦ ವರ್ಷಗಳ ಇತಿಹಾಸವಿದ್ದು ಈವರೆಗೂ ದಲಿತ ಸಂಘಟನೆಗಳು ಯಾವುದೇ ಸಂಘರ್ಷಕ್ಕೆ ಇಳಿದಿಲ್ಲ ಆದರೆ ನಮ್ಮ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ತೊಂದರೆ ನೀಡುವ ಯತ್ನ ಮಾಡಿದರೆ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಂಪಾದಕ ಡಾ.ಕೆ.ಸಿ ಶಿವರೆಡ್ಡಿಯವರ ಕುವೆಂಪು ಸಮಗ್ರ ಗದ್ಯ ಸಂಪುಟ ೨ರ ವೈಚಾರಿಕ ಸಾಹಿತ್ಯ ಸಂದರ್ಶನ ಕೃತಿಯಲ್ಲಿ ಕುವೆಂಪುರವರು ಒಕ್ಕಲಿಗ ಸಮುದಾಯದ ಬಗ್ಗೆ ಹೇಳಿರುವ ಮಾತನ್ನೇ ಪ್ರೊ.ಭಗವಾನ್‌ರವರು ಪುನರುಚ್ಚರಿಸಿದ್ದಾರೆಯೇ ವಿನಃ ವೈಯುಕ್ತಿಕವಾಗಿ ಅವರೇನು ಹೇಳಿಲ್ಲ ಭಗವಾನ್‌ರವರನ್ನು ವಿರೋಧಿಸುವವರು ಕುವೆಂಪುರವರ ಕೃತಿಯನ್ನು ಅಧ್ಯಯನ ಮಾಡಲಿ.

ದಂಟರಮಕ್ಕಿ ಶ್ರೀನಿವಾಸ್. ಈ ಗೋಷ್ಠಿಯಲ್ಲಿ ಮುಖಂಡರಾದ ದೇವಿಪ್ರಸಾದ್, ಹುಣಸೇಮಕ್ಕಿ ಲಕ್ಷ್ಮಣ್, ಮರ್ಲೆ ಅಣ್ಣಯ್ಯ, ಜಗದೀಶ್ ಚಿದಾನಂದ, ರಾಜಣ್ಣ ಸೇರಿದಂತೆ ಹಲವರಿದ್ದರು.

News conference on Mahisha Dasara celebration program in the city on 20th A.D

About Author

Leave a Reply

Your email address will not be published. Required fields are marked *