September 20, 2024

ಆತ್ಮರಕ್ಷಣೆಯ ಕಲೆಯು ರಾಷ್ಟ್ರ ರಕ್ಷಣೆಗೂ ಉಪಯೋಗವಾಗಬೇಕು

0
೩೭ ನೇ ರಾಷ್ಟ್ರೀಯ ಪೆಂಕಾಕ್ ಸಿಲತ್ ಸ್ಪರ್ಧೆಯಲ್ಲಿ ಚಿಕ್ಕಮಗಳೂರಿನ ಸ್ಪರ್ಧಿಗಳ ತಂಡ

೩೭ ನೇ ರಾಷ್ಟ್ರೀಯ ಪೆಂಕಾಕ್ ಸಿಲತ್ ಸ್ಪರ್ಧೆಯಲ್ಲಿ ಚಿಕ್ಕಮಗಳೂರಿನ ಸ್ಪರ್ಧಿಗಳ ತಂಡ

ಚಿಕ್ಕಮಗಳೂರು:  ಆತ್ಮರಕ್ಷಣೆಯ ಕಲೆಯು ರಾಷ್ಟ್ರ ರಕ್ಷಣೆಗೂ ಉಪಯೋಗವಾಗಬೇಕು. ಯಾವುದೇ ಸಾಹಸದ ಕಲೆ ಕೆಲವರ ಸ್ವತ್ತು ಆಗಬಾರದು. ಅದು ಸಮಾದ ಸ್ವತ್ತು ಆದಾಗ ಭಾರತ ವಿಶ್ವಗುರು ಆಗಬೇಕು ಎನ್ನುವ ಕನಸು ನನಸಾಗುತ್ತದೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು.

೩೭ ನೇ ರಾಷ್ಟ್ರೀಯ ಪೆಂಕಾಕ್ ಸಿಲತ್ ಸ್ಪರ್ಧೆಗಳು ಗೋವಾದಲ್ಲಿ ನಡೆಯಲಿದ್ದು, ಅದರಲ್ಲಿ ಚಿಕ್ಕಮಗಳೂರಿನ ಸ್ಪರ್ಧಿಗಳ ತಂಡ ಭಾಗವಹಿಸುತ್ತಿದೆ. ಈ ಹಿಂದಿನಿಂದಲೂ ಈ ಕಲೆಗೆ ಉತ್ತೇಜನ ನೀಡುತ್ತಾ ಪ್ರೋತ್ಸಾಹಿಸುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪೆಂಕಾಕ್ ಸಿಲಾಕ್ ಸಂಸ್ಥೆಯ ವತಿಯಿಂದ ಸಿ.ಟಿ.ರವಿ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು ನಂತರ ರವಿ ಅವರು ಮಾತನಾಡಿದರು.

ಭಾರತ ಶ್ರೀಮಂತ ರಾಷ್ಟ್ರವೂ ಆಗಬೇಕು. ಅಷ್ಟು ಮಾತ್ರವಲ್ಲ ಜ್ಞಾನದ ಮೂಲಕ ಜಗತ್ತಿಗೆ ಮಾರ್ಗದರ್ಶನ ನೀಡುವಂತಾಗಬೇಕು. ಇದೆಲ್ಲದರ ಸಂರಕ್ಷಣೆ ಆಗುವುದು ಭಾರತೀಯರು ವೀರರಾಗಿ, ಶೂರರಾದಾಗ ಮಾತ್ರ. ಇದಕ್ಕಾಗಿ ಭಾರತ ಸರ್ಕಾರ ಅಗ್ನಿವೀರ್ ಎನ್ನುವ ಒಂದು ಯೋಜನೆಯನ್ನು ತಂದಿದೆ ಎಂದರು.

ಪೆಂಕಾಕ್ ಸಂಸ್ಥೆ ಮೂಲಕ ಕಲಿಯುತ್ತಿರುವ ಪ್ರತಿಯೊಬ್ಬ ಭಾರತೀಯರು ಆತ್ಮ ರಕ್ಷಣೆ ಕಲೆಯ ಜೊತೆಗೆ ಸಂದರ್ಭ ಬಂದಾಗ ರಾಷ್ಟ್ರ ರಕ್ಷಣೆಗೆ ನಿಲ್ಲಬೇಕು. ಇಂದು ಕರ್ನಾಟಕ ಪೆಂಕಾಕ್ ಸಂಸ್ಥೆ ವತಿಯಿಂದ ಚಿಕ್ಕಮಗಳೂರಿನಲ್ಲಿ ಪ್ರದರ್ಶನ ಹಾಗೂ ತರಬೇತಿ ನೀಡುತ್ತಿರುವುದು ಸಂತೋಷದ ಸಂಗತಿ ಎಂದರು.

ಇದರಲ್ಲಿ ನಮ್ಮ ಪಾತ್ರವೇನಿಲ್ಲ. ಗಿರೀಶ್ ಮತ್ತು ಅವರ ತಂಡ ತಪಸ್ಸಿನ ರೀತಿ ಪ್ರಯತ್ನ ಮಾಡಿದ ಕಾರಣಕ್ಕೆ ಯಶಸ್ಸು ಸಿಕ್ಕಿದೆ. ಉಳಿದದ್ದೆಲ್ಲ ನಿಮಿತ್ತ ಮಾತ್ರ. ಭಾರತ ಎಂದರೆ ಒಂದು ಕಾಲದಲ್ಲಿ ಶ್ರೀಮಂತಿಕೆ ಜೊತೆಗೆ ಜ್ಞಾನ, ಔರ್ಯದ ರಾಷ್ಟ್ರವಾಗಿತ್ತು. ಅಷ್ಟೇ ಕ್ಷಣ ಮಾತ್ರದಲ್ಲಿ ತ್ಯಾಗಕ್ಕೂ ಸಿದ್ಧವಾಗಿದ್ದ ರಾಷ್ಟ್ರವಾಗಿತ್ತು. ಸಿದ್ಧಾರ್ಥನಾದ ಬುದ್ಧ ರಾಜನಾಗಿದ್ದ ಒಂದೇ ಕ್ಷಣದಲ್ಲಿ ತ್ಯಾಗ ಮೂರ್ತಿಯಾಗಿ ನಿಂತ. ಭಾಹುಬಲಿ ಅಣ್ಣನನ್ನೂ ಜಯಿಸಿದ ಸಾಮ್ರಾಜ್ಯಾಧಿಪತಿಯಾಗಿದ್ದ. ಕ್ಷಣ ಮಾತ್ರದಲ್ಲಿ ವೈರಾಗ್ಯದ ಮೂರ್ತಿಯಾಗಿ ನಿಂತ ಈ ಪರಂಪರೆ ಸಿಗುವುದು ಭಾರತದಲ್ಲಿ ಮಾತ್ರ ಎಂದರು.

ಚಿಕ್ಕಮಗಳೂರು ಪೆಂಕಾಕ್ ಸಿಲತ್ ಸಂಸ್ಥೆ ಮುಖ್ಯಸ್ಥ ಗಿರೀಶ್ ಮಾತನಾಡಿ, ಚಿಕ್ಕಮಗಳೂರು ಪೆಂಕಾಕ್ ಸಿಲತ್ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಸ್ಪರ್ಧೆ ನೀಡುವಂತಾಗಲು ಮಾಜಿ ಶಾಸಕ ಸಿ.ಟಿ.ರವಿ ಅವರ ಪ್ರೋತ್ಸಾಹವೇ ಕಾರಣ ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ ಎಂದು ಭಾವುಕರಾಗಿ ಮಾತನಾಡಿದರು.

ಸಂಸ್ಥೆಯ ಎಲ್ಲಾ ಬೆಳವಣಿಗೆಗೆ ಕಳೆದ ೨೦ ವರ್ಷಗಳಿಂದ ಸಿ.ಟಿ.ರವಿ ಅವರು ಜೊತೆಯಾಗಿ ನಿಂತಿದ್ದಾರೆ. ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರವೇಶ ಪಡೆಯುವುದು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಶ್ರಮ ಬೇಕಾಗುತ್ತದೆ. ಅದರ ಜೊತೆಗೆ ಸಿ.ಟಿ.ರವಿ ಅವರಂತಹ ಸಹಕಾರವೂ ಬೇಕಾಗುತ್ತದೆ. ಖೋಲಾ ಇಂಡಿಯಾ, ಕುವೆಂಪು ವಿವಿಗಳಲ್ಲಿ ಟ್ವೈಕ್ವಂಡೋ ಸ್ಪರ್ಧೆಗಳು ಅರ್ಹತೆ ಪಡೆಯಲು ರವಿ ಅವರು ಕಾರಣರಾಗಿದ್ದಾರೆ. ಇದರಿಂದ ಬಹಳಷ್ಟು ಬಡ ವಿದ್ತಾರ್ಥಿಗಳು ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.

ಕರ್ನಾಟಕ ಪೆಂಕಾಕ್ ಸಂಸ್ಥೆ ವತಿಯಿಂದ ಚಿಕ್ಕಮಗಳೂರು ನಗರದಲ್ಲಿ ರಾಷ್ಟ್ರೀಯ ಸ್ಪರ್ಧೆಯ ಕ್ಯಾಂಪ್ ನಡೆಯುತ್ತಿದೆ. ಅದಕ್ಕೆ ೧೨ ಮಂದಿ ಆಯ್ಕೆ ಆಯ್ಕೆಯಾಗಿದ್ದಾರೆ. ಅದರಲ್ಲಿ ಪೊಲೀಸ್ ಇಲಾಖೆಯಿಂದ ನಾನು ಸೇರಿದಂತೆ ಒಬ್ಬರು ಇನ್ಸ್‌ಪೆಕ್ಟರ್ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ೮ ಜನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅದರ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ. ಅಕ್ಟೋಬರ್ ೨೩ ರಿಂದ ನವೆಂಬರ್ ೯ ರ ವರೆಗೆ ಗೋವಾದಲ್ಲಿ ನಡೆಯುವ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ನಾವು ಭಾಗವಹಿಸಲಿದ್ದೇವೆ ಎಂದು ತಿಳಿಸಿದರು.

The art of self-defense should also be useful for national defense

About Author

Leave a Reply

Your email address will not be published. Required fields are marked *