September 20, 2024

ಅ.20ರಂದು ಜಿಲ್ಲಾ ಒಕ್ಕಲಿಗರ ಸಂಘದಿಂದ ಪ್ರತಿಭಟನೆ

0
ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಪತ್ರಿಕಾಗೋಷ್ಠಿ

ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಒಕ್ಕಲಿಗರ ಸಮುದಾಯ ಕುರಿತು ಅವಹೇಳನ ಕಾರಿ ಹೇಳಿಕೆ ನೀಡಿರುವ ಪ್ರೊ ಕೆ.ಎಸ್ ಭಗವಾನ್ ರವರನ್ನು ಜಿಲ್ಲೆಗೆ ಆಗಮಿಸಬಾರದೆಂದು ಆಗ್ರಹಿಸಿ ಅ.೨೦ರಂದು ಜಿಲ್ಲಾ ಒಕ್ಕಲಿಗರ ಸಂಘದಿಂದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಅಂದು ಬೆಳಗ್ಗೆ ೧೨:೩೦ಕ್ಕೆ ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಕಾಂಗ್ರೆಸ್, ಸಿಪಿಐ, ಜೆಡಿಎಸ್ ಹಾಗೂ ಪ್ರಗತಿಪರ ಸಂಘಟನೆಗಳು ಈ ಪ್ರತಿಭಟನೆಯನ್ನು ಬೆಂಬಲಿಸಿ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಲು ಸಹಕರಿಸಬೇಕೆಂದು ಮನವಿ ಮಾಡಿದರು.

ಸಮಾಜದ ಸ್ವಾಸ್ಥ್ಯಹಾಳು ಮಾಡಲು ಮುಂದಾಗಿರುವ ಭಗವಾನ್ ವಿರುದ್ಧ ನಮ್ಮ ಹೋರಾಟವೆ ಹೊರತು ದಲಿತ ಸಂಘ? ಸಮಿತಿ ಆಯೋಜಿಸಿರುವ ಕಾರ್ಯಕ್ರಮದ ಬಗ್ಗೆ ಅಲ್ಲ ಡಾ|| ಬಿ.ಆರ್ ಅಂಬೇಡ್ಕರ್ ಬಗ್ಗೆ ನಮಗೂ ಗೌರವವಿದೆ ಆದರೆ ಬೆದರಿಕೆ ಒಡ್ಡುವ ಅಗತ್ಯ ಇಲ್ಲ ಅದಕ್ಕೆ ಹೆದರುವುದೂ ಇಲ್ಲ ಎಂದು ಹೇಳಿದರು.

ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿ?ಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದೇವೆ ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕುರಿತು ಶಾಸಕರಾದ ಹೆಚ್.ಡಿ ತಮ್ಮಯ್ಯ, ಟಿ.ಡಿ ರಾಜೇಗೌಡ ಸರ್ಕಾರದ ಮೇಲೆ ಒತ್ತಡ ತಂದು ಒಂದು ತಿಂಗಳ ಕಾಲ ಬಂಧಿಸಿ ಸೋಮೋಟೋ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.

ಒಕ್ಕಲಿಗ ಸಮುದಾಯ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಪ್ರಭಾವಗಳ ಹಿನ್ನೆಲೆಯಿದ್ದು, ಈ ಜನಾಂಗವನ್ನು ಪ್ರಚಾರದ ಹುಚ್ಚಿನಿಂದ ನಿಂದಿಸಿರುವುದು ಅವರಿಗೆ ಶೋಭೆ ತರುವುದಿಲ್ಲ. ಸಮಾಜದ ಸ್ವಾಸ್ಯ ಹಾಳು ಮಾಡುವಂತಹ ಹೇಳಿಕೆ ನೀಡಿರುವ ಅವರನ್ನು ಗಡಿಪಾರು ಮಾಡಲು ಒತ್ತಾಯಿಸಿದ್ದರು.

ಅ.೨೦ ರಂದು ಚಿಕ್ಕಮಗಳೂರಿಗೆ ಆಗಮಿಸುತ್ತಿರುವವುದಕ್ಕೆ ಖಂಡಿಸಿ ಅಂದು ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಅವರು ಬಂದಲ್ಲಿ ಅವರ ವಿರುದ್ಧ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.

ರಾಜ್ಯದ ಜನರ ಭಾವನೆಗಳಿಗೆ ಧಕ್ಕೆ ತರುವುದು ವಿವಿಧ ಜಾತಿಗಳ ನಿಂದನೆ ಮಾಡಿರುವ ಆರೋಪ ಮತ್ತು ಹಿಂದೂ ಧರ್ಮವನ್ನು, ಹಿಂದೂ ದೇವತೆಗಳನ್ನು ಹಿಯಾಳಿಸುವ, ನಿಂದಿಸುವ ಮನಸ್ಥಿತಿ ಹೊಂದಿರುವ ಇವರು ಚಿಕ್ಕಮಗಳೂರು ಗಡಿ ಪ್ರವೇಶಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಮಹಿಳಾ ಅಧ್ಯಕ್ಷೆ ಸವಿತಾ ರಮೇಶ್, ಉಪಾಧ್ಯಕ್ಷ ಮೂಗ್ತಿಹಳ್ಳಿ ರವಿ, ಐ.ಕೆ ಓಂಕಾರೇಗೌಡ, ನಂದಕುಮಾರ್, ಸುಚಿತ್, ಎಂ.ಬಿ.ಸತೀಶ್, ಸಿ.ಇ.ಓ ಕುಳ್ಳೇಗೌಡ. ವ್ಯವಸ್ಥಾಪಕ ರಾಜು ಇದ್ದರು.

On 20th A. protest by District Okkaligar Association

About Author

Leave a Reply

Your email address will not be published. Required fields are marked *