September 20, 2024

ಇತಿಹಾಸ ಪ್ರಸಿದ್ದ ಶ್ರೀ ಮೈಲಾರಲಿಂಗಸ್ವಾಮಿ ದಸರಾ ಕಾರ್ಣಿಕದ ನುಡಿಮುತ್ತುಗಳು

0
ಇತಿಹಾಸ ಪ್ರಸಿದ್ದ ಶ್ರೀ ಮೈಲಾರಲಿಂಗಸ್ವಾಮಿ ದಸರಾ ಕಾರ್ಣಿಕದ ನುಡಿಮುತ್ತುಗಳು

ಇತಿಹಾಸ ಪ್ರಸಿದ್ದ ಶ್ರೀ ಮೈಲಾರಲಿಂಗಸ್ವಾಮಿ ದಸರಾ ಕಾರ್ಣಿಕದ ನುಡಿಮುತ್ತುಗಳು

ಬೀರೂರು : ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ  ಸುರರು ಅಸೂರರು ಕಾದಾಡಿದರು, ಭಕ್ತ ಕೋಟಿಗೆ ಮಂಗಳವಾಯಿತು,॒  ಶಾಂತಿಯ ಮಂತ್ರ ಪಠಿಸಿದರು. ಸರ್ವರು ಎಚ್ಚರದಿಂದರಬೇಕು ಇದು ಬೀರೂರಿನ ಶ್ರೀ ಮೈಲಾರಲಿಂಗ ಸ್ವಾಮಿಯ ದಶರಥರ ಪೂಜಾರಾರ ಬಾಯಿಂದ ಬಂದಂತಹ ಭವಿಷ್ಯ ವಾಣಿ ಈ ಬಾರಿಯ ಕಾರ್ಣಿಕದ ನುಡಿಮುತ್ತುಗಳು.
ಬೀರೂರು ಪಟ್ಟಣದ ಸರಸ್ವತಿಪುರಂ ಬಡಾವಣೆಯಲ್ಲಿ ನೆಲೆಸಿರುವ ಕಾರ್ಣೀಕದೊಡೆಯ ಇತಿಹಾಸ ಪ್ರಸಿದ್ದ ಶ್ರೀ ಮೈಲಾರಲಿಂಗಸ್ವಾಮಿ ದಸರಾ ಕಾರ್ಣಿಕದ ನುಡಿಮುತ್ತುಗಳು ಬುಧವಾರ ಬೆಳಗ್ಗಿನ ಜಾವ ೪-೪೫ಕ್ಕೆ ಜರುಗಿದವು.
ವಿಜಯದಶಮಿಯ ಸಡಗರ ಸಂಭ್ರಮದ ನಡುವೆ ಸಂಪ್ರದಾಯದಂತೆ ಸರಸ್ವತಿಪುರಂ ಬಡಾವಣೆಯಲ್ಲಿ ಪ್ರತಿವರ್ಷವೂ ಕಾರ್ಣಿಕವು ನಡೆಯುತ್ತದೆ. ಕಾರ್ಣಿಕದ ದೈವ ಮೈಲಾರಲಿಂಗಸ್ವಾಮಿಯವರ ಉತ್ಸವ ಮೂರ್ತಿಯನ್ನು ಮಂಗಳವಾರ ರಾತ್ರಿ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಸ್ಥಾಪಿಸಿ ದೇವಾಲಯದ ಬಳಿಯಿಂದ ರಾತ್ರಿ ೧೦-೩೦ ಕ್ಕೆ ಸುಮಾರಿಗೆ ಹೊರಟು ಬೀರೂರು ಪಟ್ಟಣದ ಹೊರವಲಯದ ಗಾಳಿಹಳ್ಳಿ ಬಳಿಯ ಸ್ವಾಮಿಯ ಮೂಲ ಪಾದದಕೆರೆಯಲ್ಲಿ ಇರುವ ಸ್ವಾಮಿಯ ಪಾದಗಳನ್ನು ಪೂಜಿಸಿದ ಭಕ್ತರು ಸ್ವಾಮಿಗೆ ಗಣಂಗಳ ಸೇವೆ ಮತ್ತು ಗೊರವಪ್ಪರೊಂದಿಗೆ ೧೦೧ ದೋಣಿ ಸೇವೆ ಎಡೆ ಸಲ್ಲಿಸಿ ಬಳಿಕ ಬನ್ನಿಮುಡಿದು ” ಮೆರವಣಿಗೆಯಲ್ಲಿ ಮಹಾನವಮಿ ಬಯಲಿಗೆ ಬುಧವಾರ ನಸುಕಿನ ಜಾವ ೪-೧೦ರ ವೇಳೆಗೆ ಆಗಮಿಸಿತು. ಈ ವೇಳೆಗಾಗಲಿ, ಆದಿದೈವ ವೀರಭದ್ರಸ್ವಾಮಿ, ಬೀರಲಿಂಗೇಶ್ವರ ಸ್ವಾಮಿ ಮತ್ತು ಹಿರಿಯಂಗಳದ ರುದ್ರಸ್ವಾಮಿ ದೇವರ ಉತ್ಸವ ಮೂರ್ತಿಗಳು ಮಹಾನವಮಿ ಬಯಲಿನಲ್ಲಿ ಸ್ಥಾಪಿತವಾಗಿದ್ದವು.
ಮೈಲಾರಲಿಂಗಸ್ವಾಮಿಯ ಅರ್ಚಕ ದಶರಥ ಪೂಜಾರರು ಉತ್ಸವದಲ್ಲಿ ಬಂದು ಬಾಳೆಮರದ ಅಂಬನ್ನು ಮೂರುಬಾರಿ ಪ್ರದಕ್ಷಿಣೆ ನಡೆಸಿ ನಂತರ ಬೆಣ್ಣೆ ಮೆತ್ತಿದ ದೊಡ್ಡಬಿಲ್ಲಯ್ಯನನ್ನು ೪-೪೫ಕ್ಕೆ ಏರಿ ತನ್ನ ಕೈಯಲ್ಲಿದ್ದ ಗಂಟೆಯನ್ನು ಬಾರಿಸಿದ ಕೂಡಲೇ ನೆರೆದಿದ್ದ ಜನರಲ್ಲಿ ಗಾಢ ಮೌನ ಆವರಿಸಿತು.
ನಂತರ ತನ್ನ ತ್ರಿಶೂಲದಲ್ಲಿ ಸ್ವಾಮಿಯು ಮುಂದಿನ ಭವಿಷ್ಯದ ನುಡಿಗಳನ್ನು ತೂಕ ಹಾಕಿದಾಗ ನುಡಿದದ್ದೆ. ಇಟ್ಟರಾಮನ ಬಾಣಕ್ಕೆ ಹುಸಿಯಿಲ್ಲ.  ಸುರರು ಅಸೂರರು ಕಾದಾಡಿದರು, ಭಕ್ತ ಕೋಟಿಗೆ ಮಂಗಳವಾಯಿತು ॒ಶಾಂತಿಯ ಮಂತ್ರ ಪಠಿಸಿದರು. ಸರ್ವರು ಎಚ್ಚರದಿಂದರಬೇಕು ಎಂದು ನುಡಿಯುವ ಮೂಲಕ ಬಿಲ್ಲಪ್ಪನಿಂದ ಜಾರಿ ತಮ್ಮ ಕಾರ್ಣಿಕದ ನುಡಿಮುತ್ತುಗಳಿಗೆ ಸಮರ್ಪಣೆಗೊಳಿಸಿದರು.
ಸ್ಥಳದಲ್ಲಿದ್ದ ಗೊರವರು ಗಂಟೆ ಮತ್ತು ಡಮರುಗಳ ಸಪ್ಪಳದೊಂದಿಗೆ ಏಳುಕೋಟಿಗೆ ಪರಾಕ್ ಎನ್ನುವ ಸದ್ದು ಮರ್ಧಾನಿಸಿತು. ನೆರದಿದ್ದ ಭಕ್ತರು ಹರ್ಷಧ್ಗೋರದೊಂದಿಗೆ ಕಾರ್ಣಿಕದ ನುಡಿಮುತ್ತುಗಳನ್ನು ಸವಿದರು.
ಕಾರ್ಣಿಕದ ಬಳಿಕ ವೀರಭದ್ರಸ್ವಾಮಿಯ ಗುರಿಕಾರ ಅಂಬುಹೊಡೆಯುವ ಸಲುವಾಗಿ ನೆಟ್ಟಿದ್ದ ಬಾಳೆಕಂದಿ ಬಾಣಹೂಡಿ ಕತ್ತರಿಸಿದ ನಂತರ ಭಕ್ತರು ಉತ್ಸವಮೂರ್ತಿಗಳೊಂದಿಗೆ ತೆರಳಿದರು.
ಪಲ್ಲಕ್ಕಿ ಹೊತ್ತ ಶಾಸಕ ಕೆ.ಎಸ್.ಆನಂದ್ :  ವಿಜಯದಶಮಿಯ ಮಂಗಳವಾರ  ರಾತ್ರಿ  ದೇವಾಲಯಕ್ಕೆ ಆಗಮಿಸಿ ಭಕ್ತರೊಂದಿಗೆ ಸ್ವಾಮಿ ಬನ್ನಿ ಮುಡಿಯಲು ಹೊರಟ ಕ್ಷಣವೇ ಹೂವಿನ ಪಲ್ಲಕ್ಕಿಯನ್ನು ಹೊತ್ತು ಹರಕೆ ಸಲ್ಲಿಸಿದ ಅವರು ಕ್ಷೇತ್ರದ ಜನತೆಯ ರೈತಾಪಿ ವರ್ಗವನ್ನು ನೆಮ್ಮದಿ ಕರುಣಿಸುವಂತೆ ವಿಶೇಷ ಪೂಜೆ ಸಲ್ಲಿಸಿದರು.
ಕಾರ್ಣಿಕ ನೋಡಲು ಆಗಮಿಸಿದ್ದ ಭಕ್ತರು  ನುಡಿದ ಮೈಲಾರಲಿಂಗನ ಕಾರ್ಣಿಕದ ನುಡಿಮುತ್ತಗಳ ದೃಶ್ಯಾವಳಿಗಳನ್ನು ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರು.
ಬುಧವಾರ ಸಂಜೆ ದೇವಸ್ಥಾನದ ಆವರಣದೊಳಗೆ ಮೈಲಾರಲಿಂಗನೆ ಪ್ರಿಯವಾದ ಭಕ್ತರಿಗೆ ದೋಣಿ ಸೇವೆ ಜರುಗಿತು.
Dasara Karnika speeches of the famous Sri Mailaralingaswamy

About Author

Leave a Reply

Your email address will not be published. Required fields are marked *