September 20, 2024

ಅ.28 ಕ್ಕೆ ನಗರದಲ್ಲಿ ಮಿಸ್ ಟ್ರಾನ್ಸ್‌ಫೈಡ್ ಆಫ್ ಕರ್ನಾಟಕ ಪ್ಯಾಷನ್ ಶೋ

0
ಮಿಸ್ ಟ್ರಾನ್ಸ್‌ಫೈಡ್ ಆಫ್ ಕರ್ನಾಟಕ ಪ್ಯಾಷನ್ ಶೋ ಕಾರ್ಯಕ್ರಮದ ಆಯೋಜಕರಾದ ಅರ್ಪಣಾ ವಿನೋದ್ ಸುದ್ದಿಗೋಷ್ಠಿ

????????????????????????????????????

ಚಿಕ್ಕಮಗಳೂರು: ಆಲ್ ಇಂಡಿಯಾ ಹೇರ್ ಆಂಡ್ ಬ್ಯೂಟಿ ಅಸೋಸಿಯೇಷನ್, ಕಲಿಯುಗ್ ಇವೆಂಟ್ಸ್, ಲುಕ್ ಬುಕ್ ಯೂನಿಸೆಕ್ ಪ್ರೊಪೇಷನಲ್ ಸಲೂನ್ ಆಂಡ್‌ಬ್ಯೂಟಿ ಅಕಾಡೆಮಿಯ ಸಹಯೋಗದಲ್ಲಿ ಐಬಾ ಗ್ಲಾಮ್ ಗಾಲಾದ ವೇದಿಕೆಯಲ್ಲಿ ಟ್ರಾನ್ಸ್ ಜಂಡರ್- ಲಿಂಗತ್ವ ಅಲ್ಪಸಂಖ್ಯಾತರಿಗೆ ಮಿಸ್ ಟ್ರಾನ್ಸ್ ಫೈಡ್ ಆಫ್ ಕರ್ನಾಟಕ ಪ್ಯಾಷನ್ ಶೋ ಚಿಕ್ಕಮಗಳೂರಿನಲ್ಲಿ ಏರ್ಪಡಿಸಲಾಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಕ್ರಮದ ಆಯೋಜಕರಾದ ಅರ್ಪಣಾ ವಿನೋದ್ ಅ.೨೮ ರಂದು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಸ್ಪರ್ಧೆ ನಡೆಯಲಿದ್ದು, ರಾಜ್ಯದ ವಿವಿಧೆಡೆಯಿಂದ ಲಿಂಗತ್ವ ಅಲ್ಪಸಂಖ್ಯಾತರು ಈ ಕಾರ್ಯಕ್ರಮಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಹುಬ್ಬಳ್ಳಿ, ಮೈಸೂರು ಸೇರಿದಂತೆ ರಾಜ್ಯದ ಐದು ಕಡೆಗಳಲ್ಲಿ ಈ ಸ್ಪರ್ಧೆಗಳನ್ನು ನಡೆಸಲಾಗಿದ್ದು, ಕೊನೆಯ ಸುತ್ತಿನ ಸ್ಪರ್ಧೆಯನ್ನು ಚಿಕ್ಕಮಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ ಈ ಕಾರ್ಯಕ್ರಮದ ಅಂಗವಾಗಿ ಅ.೨೬ ರಂದು ನಗರದಲ್ಲಿ ವಾಕಥಾನ್- ಸಮಾನತೆಯ ನಡಿಗೆ ಆಯೋಜನೆ ಮಾಡಲಾಗಿದ್ದು, ಬೆಳಿಗ್ಗೆ ೧೦ ಗಂಟೆಗೆ ಹನುಮಂತಪ್ಪ ವೃತ್ತದಿಂದ ಹೊರಟು ಆಜಾದ್ ಪಾರ್ಕ ವೃತ್ತದಲ್ಲಿ ಅಂತ್ಯಗೊಳ್ಳಲಿದೆ ಎಂದು ಹೇಳಿದರು.

ಕಲಿಯುಗ್ ಇವೆಂಟ್ಸ್‌ನ ಮುಖ್ಯಸ್ಥರಾದ ದೀಪಕ್ ಶಾಸ್ತ ಅವರು ಮಾತನಾಡಿ, ಅ.೨೮ ರಂದು ಹೇರ್ ಆಂಡ್ ಬ್ಯೂಟಿ ಕಾಂಟೆಸ್ಟ್, ನಂತರ ಡಾಗ್ ಶೋ, ವೃದ್ಧಾಶ್ರಮದಲ್ಲಿರುವ ಹಿರಿಯ ನಾಗರಿಕರಿಗೆ ರ್‍ಯಾಂಪ್ ವಾಕ್, ಬಳಿಕ ಲಿಂಗತ್ವ ಅಲ್ಪಸಂಖ್ಯಾತರಿಗೆ ಫ್ಯಾಷನ್ ಶೋ ನಡೆಯಲಿದೆ ಎಂದರು.

ಡಾಗ್ ಶೋನಲ್ಲಿ ಬರೋಬರಿ ೨೦ ಕೋಟಿ ಬೆಲೆ ಬಾಳುವ ಬೆಂಗಳೂರಿನ ಸತೀಶ್ ಕೆಡಬಮ್ಸ್ ಅವರ ಡಾಗ್ ಕೆಡಬಮ್ಸ್ ಹೈಡರ್ ಕೂಡ ಭಾಗವಹಿಸುತ್ತಿರುವುದು ವಿಶೇಷ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಗೀತಾ ಶ್ರೀನಿವಾಸ್, ಕವಿತಾ ರಾವ್, ವಿನೋದ್, ಕೀರ್ತಿರಾಜ್ ಉಪಸ್ಥಿತರಿದ್ದರು.

Miss Transfied of Karnataka Passion Show

 

About Author

Leave a Reply

Your email address will not be published. Required fields are marked *