September 20, 2024
ಬ್ರಹ್ಮಾಕುಮಾರೀಸ್ ಜಿಲ್ಲಾ ಸಂಚಾಲಕರಾದ ಬಿ.ಕೆ. ಭಾಗ್ಯಕ್ಕ ಸುದ್ದಿಗೋಷ್ಠಿ

ಬ್ರಹ್ಮಾಕುಮಾರೀಸ್ ಜಿಲ್ಲಾ ಸಂಚಾಲಕರಾದ ಬಿ.ಕೆ. ಭಾಗ್ಯಕ್ಕ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಕಳಸಾಪುರದಲ್ಲಿ ಸುಮಾರು ೭೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಸ್ಪದರ್ಶನ ಭವನದ ಉದ್ಘಾಟನಾ ಸಮಾರಂಭ ಅ.೨೭ರಂದು ಶುಕ್ರವಾರ ಬೆಳಗ್ಗೆ ೧೧ ಗಂಟೆಗೆ ನಡೆಯಲಿದೆ.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬ್ರಹ್ಮಾಕುಮಾರೀಸ್ ಜಿಲ್ಲಾ ಸಂಚಾಲಕರಾದ ಬಿ.ಕೆ. ಭಾಗ್ಯಕ್ಕ ಇದರ ಅಂಗವಾಗಿ ಅಂದು ಬೆಳಗ್ಗೆ ೯.೩೦ ಕ್ಕೆ ಸದ್ಬಾವನಾ ಶಾಂತಿಯಾತ್ರೆ ನಡೆಯಲಿದ್ದು ಸರ್ವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯವು ೧೯೩೬ರಲ್ಲಿ ಸ್ವಯಂ ನಿರಾಕಾರ ಪರಮಪಿತ ಪರಮಾತ್ಮ ಪಿತಾಶ್ರೀ ಪ್ರಜಾಪಿತ ಬ್ರಹ್ಮಾರವರ ಮೂಲಕ ಸ್ಥಾಪಿಸಿದರು. ಸಂಸ್ಥೆಯ ಪ್ರಧಾನ ಕೇಂದ್ರ ಮೌಂಟ್ ಅಬು, ರಾಜಸ್ಥಾನದಲ್ಲಿದೆ. ಸಂಸ್ಥೆಯು ೨೧ ವರ್ಗಗಳ ಮೂಲಕ ವಿಶ್ವದಾದ್ಯಂತ ೧೪೭ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ೧೦,೦೦೦ ಕ್ಕೂ ಹೆಚ್ಚು ಸೇವಾಕೇಂದ್ರಗಳಿವೆ ಎಂದರು.

ಜಿಲ್ಲಾ ಸೇವಾಕೇಂದ್ರ ಜ್ಞಾನ ಪ್ರಕಾಶ ಭವನ ನಗರದ ಬಸವನಹಳ್ಳಿಯಲ್ಲಿದೆ. ಜಿಲ್ಲೆಯಲ್ಲಿ ೨೧ ಸೇವಾಕೇಂದ್ರಗಳು ವ್ಯಾಪಕವಾಗಿ ಸೇವೆ ಸಲ್ಲಿಸುತ್ತಿದೆ. ಸಂಸ್ಥೆಯು ಗ್ರಾಮ ಉತ್ಥಾನ, ಆರೋಗ್ಯ ಶಿಬಿರಗಳು, ವ್ಯಸನಮುಕ್ತ ಶಿಬಿರ, ದಿವ್ಯಾಂಗ ಸೇವೆ, ವಯೋವೃದ್ಧರ ಸೇವೆ, ಮಹಿಳಾ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆ, ವಿದ್ಯಾರ್ಥಿಗಳಲ್ಲಿ ಚಾರಿತ್ರ ನಿರ್ಮಾಣ, ಮಾನಸಿಕ ಸ್ಥೈರ್ಯ, ಮನೋಬಲ ಹೆಚ್ಚಿಸುವ ಸೇವೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಶಾಖೆ ಏಪ್ರಿಲ್ ೧೦, ೨೦೧೬ ರಲ್ಲಿ ಕಳಸಾಪುರದಲ್ಲಿ ಪ್ರಾರಂಭವಾಯಿತು. ಸಂಸ್ಥೆಯ ಸೇವಾ ಕಾರ್ಯಗಳು ಅಲ್ಲಿನ ಗ್ರಾಮಸ್ಥರಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಶ್ವರೀಯ ಜ್ಞಾನ ಹಾಗೂ ರಾಜಯೋಗ ಶಿಕ್ಷಣ ನೀಡಿ ಅವರ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆ ತರಲಾಗುತ್ತಿದೆ ಎಂದು ಹೇಳಿದರು.

ಶಿವರಾತ್ರಿ, ರಕ್ಷಾಬಂಧನ, ನವರಾತ್ರಿ ಮುಂತಾದ ಹಬ್ಬಗಳಲ್ಲಿ ವಿಶೇಷವಾಗಿ ಪರಮಾತ್ಮನ ಸಂದೇಶ ಮನೆ-ಮನೆಗಳಲ್ಲಿ, ಕಚೇರಿಗಳಲ್ಲಿ, ಜಾತ್ರಾ ಮಹೋತ್ಸವಗಳಲ್ಲಿ ಹಾಗೂ ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಸಂಸ್ಥೆಯು ಶ್ರಮಿಸುತ್ತಿದೆ. ಸುತ್ತ-ಮುತ್ತಲಿನ ಹಳ್ಳಿಗಳಲ್ಲಿನ ಜನಸಾಮಾನ್ಯರು ಮನೋಬಲ, ಕಾರ್ಯಕುಶಲತೆ ಹಾಗೂ ಶ್ರೇಷ್ಠ ಜೀವನ ರೂಪಿಸುವಲ್ಲಿ ಸಂಸ್ಥೆಯು ಸಹಕಾರಿಯಾಗಿದೆ ಎಂದು ತಿಳಿಸಿದರು.

ಇದುವರೆಗೆ ಕಳಸಾಪುರದಲ್ಲಿ ಶಾಖೆಯು ಬಾಡಿಗೆ ಕಟ್ಟಡದಲ್ಲಿದ್ದು ಸೇವೆ ನಿರಂತರವಾಗಿ ಮಾಡುತ್ತಾ ಸರ್ವರ ಸಹಯೋಗದಿಂದ ಈಗ ಹೊಸ ಸೇವಾ ಕಛೇರಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಹೌಸಿಂಗ್ ಬೋರ್ಡ್, ಆನಂದ ಸರೋವರ ಕೋಟ್ ಕೊಪ್ಪ, ಕಳಸ, ಮೂಡಿಗೆರೆ, ನರಸಿಂಹರಾಜಪುರ, ಸಖರಾಯಪಟ್ಟಣ, ಅಜ್ಜಂಪುರ, ತರೀಕೆರೆ, ಲಿಂಗದಹಳ್ಳಿ, ಅಮೃತಾಪುರ, ಬೆಟ್ಟದಹಳ್ಳಿ, ಬರ್ಗೇನಹಳ್ಳಿ, ಕಳಸಾಪುರ, ಚೌಳಹಿರಿಯೂರು, ಕಡೂರು, ಬೀರೂರಿನಲ್ಲಿ ಸೇರಿ ಒಟ್ಟು ೨೧ ಸೇವಾಕೇಂದ್ರಗಳಿದ್ದು ಸ್ವಂತ ಕಟ್ಟಡದಲ್ಲಿ ಸೇವೆಸಲ್ಲಿಸುತ್ತಿವೆ. ಶೃಂಗೇರಿ ಬಾಳೇಹೊನ್ನೂರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಸೇವೆಸಲ್ಲಿಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಳಸಾಪುರ ಶಾಖೆಯ ಸಂಚಾಲಕರಾದ ಬಿ.ಕೆ ಲೀಲಕ್ಕ, ಲಿಂಗಪ್ಪಣ್ಣ, ನಂದನ್‌ಕುಮಾರ್, ಸಚಿನ್, ಗಂಗಾಧರ್ ಶ್ರದ್ಧಾ ಉಪಸ್ಥಿತರಿದ್ದರು

Inauguration ceremony of Spadarshan Bhavan on 27th

About Author

Leave a Reply

Your email address will not be published. Required fields are marked *