September 20, 2024

ಚಿಕ್ಕಮಗಳೂರು ನಗರಸಭೆ ವತಿಯಿಂದ ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ

0
ನಗರಸಭೆ ಸಭಾಂಗಣದಲ್ಲಿ ಪೌರ ಕಾರ್ಮಿಕರು, ಆರೋಗ್ಯ ನಿರೀಕ್ಷಕರು ಇನ್ನಿತರೆ ಸಿಬ್ಬಂದಿಗಳ ಸಭೆ

ನಗರಸಭೆ ಸಭಾಂಗಣದಲ್ಲಿ ಪೌರ ಕಾರ್ಮಿಕರು, ಆರೋಗ್ಯ ನಿರೀಕ್ಷಕರು ಇನ್ನಿತರೆ ಸಿಬ್ಬಂದಿಗಳ ಸಭೆ

ಚಿಕ್ಕಮಗಳೂರು: ರಾಜ್ಯದಲ್ಲೇ ಮೊದಲ ಬಾರಿಗೆ ಚಿಕ್ಕಮಗಳೂರು ನಗರಸಭೆ ವತಿಯಿಂದ ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ ಮಾಡಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.

ನಗರಸಭೆ ಸಭಾಂಗಣದಲ್ಲಿ ಪೌರ ಕಾರ್ಮಿಕರು, ಆರೋಗ್ಯ ನಿರೀಕ್ಷಕರು ಇನ್ನಿತರೆ ಸಿಬ್ಬಂದಿಗಳ ಸಭೆ ನಡೆಸಿ ಮಾತನಾಡಿದ ಅವರು, ಕಳೆದ ೨ ವರ್ಷಗಳಿಂದ ಎಲ್ಲಾ ಪೌರ ಕಾರ್ಮಿಕರಿಗೆ ನಗಸಭೆ ವತಿಯಿಂದ ವಾರ್ಷಿಕ ತಲಾ ೧೧ ಲಕ್ಷ ರೂ.ಗಳ ಆರೋಗ್ಯ ವಿಮೆ ಭರಿಸಲಾಗುತ್ತಿದೆ ಎಂದರು.

ಇದಲ್ಲದೆ ಬರೋಡ ಬ್ಯಾಂಕ್ ಜೊತೆ ಮಾತುಕತೆ ನಡೆಸಿ ಅಪಘಾತ ವಿಮೆ ಮಾಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿಯೊಬ್ಬರಿಗೆ ತಲಾ ೪೦ ಲಕ್ಷ ರೂ.ನ ವಿಮೆ ಇದಾಗಿರುತ್ತದೆ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡುತ್ತೇವೆ ಎಂದರು.

ಕಳೆದ ಮೂರ್‍ನಾಲ್ಕು ದಿನಗಳಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ನಿನ್ನೆ ಇಡೀದಿನ ಅದನ್ನು ಸರಿಪಡಿಸುವ ಕೆಲಸ ಮಾಡಿಸಿದ್ದೇವೆ. ನಗರಸಭೆ ಇಂಜಿನೀಯರುಗಳು, ಸಿಬ್ಬಂದಿಗಳು ಮೋಟಾರ್ ದುರಸ್ಥಿಪಡಿಸುವ ಕೆಲಸ ಮಾಡಿ ನೀರು ಪೂರೈಕೆಗೆ ಕ್ರಮ ಕ್ಯಗೊಂಡಿದ್ದೇವೆ ಎಂದರು.

ನಗರಸಭೆ ಆಯುಕ್ತ ಬಸವರಾಜು ಮಾತನಾಡಿ, ನಗರದ ಸ್ವಚ್ಛತೆ ವಿಚಾರದಲ್ಲಿ ಯಾವುದೇ ಲೋಪವಾಗಬಾರದು ಎಂದು ಪೌರ ಕಾರ್ಮಿಕರು ಮತ್ತಿತರೆ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದೇವೆ ಎಂದರು. ನಿರ್ಮಲಭಾರತಿ ಟ್ರಸ್ಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಪೌರ ಕಾರ್ಮಿಕರು ತಿಳಿಸಿದ್ದಾರೆ. ಈ ಸಂಬಂಧ ಸಂಬಂಧಿಸಿದ ಸಂಸ್ಥೆಗೆ ನೋಟೀಸು ನೀಡಲು ಸೂಚಿಸಿದ್ದೇವೆ ಎಂದರು.

ನಾಳೆಯಿಂದ ಎಲ್ಲಾ ೧೬೨ ಮಂದಿ ಪೌರ ಕಾರ್ಮಿಕರು ನಗರಸಭೆ ಕಚೇರಿಗೆ ಬಂದು ಬಯೋಮೆಟ್ರಿಕ್‌ನಲ್ಲಿ ಹಾಜರಾತಿ ಹಾಕಿ ನಂತರ ಕರ್ತವ್ಯಕ್ಕೆ ಹೋಗಬೇಕು. ನೀರು ಸರಬರಾಜು ಸಿಬ್ಬಂದಿಗಳು ಸಹ ಬೆಳಗ್ಗೆ ೭ ಕ್ಕೆ ಕಚೇರಿಗೆ ಬಂದು ಹಾಜರಾತಿ ಹಾಕಬೇಕು. ಕಂದಾಯ ಶಾಖೆ ಸಿಬ್ಬಂದಿಗಳು ೮ ಗಂಟೆಗೆ ಬಂದು ಬಯೋಮೆಟ್ರಿಕ್ ಹಾಜರಾತಿ ಹಾಕಬೇಕು. ನಿಗಧಿತ ಸಮಯದಲ್ಲಿ ಬಂದು ಹಾಜರಾತಿ ಹಾಕದಿದ್ದಲ್ಲಿ ಅಂದು ಗೈರು ಹಾಜರು ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಲಕ್ಷ್ಮಣ್, ಮುನೀರ್‌ಅಹಮದ್ ಉಪಸ್ಥಿತರಿದ್ದರು.

A meeting of civic workers health inspectors and other staff in the municipal hall

About Author

Leave a Reply

Your email address will not be published. Required fields are marked *