September 20, 2024

ಡಿಸೆಂಬರ್ 24 ರಿಂದ 26ರವರೆಗೆ 3 ದಿನಗಳ ಕಾಲ ದತ್ತ ಜಯಂತಿ

0
ವಿ.ಎಚ್.ಪಿ ಜಿಲ್ಲಾ ಕಾರ್ಯದರ್ಶಿ ರಂಗನಾಥ್ ಟಿ. ಪತ್ರಿಕಾಗೋಷ್ಠಿ

ವಿ.ಎಚ್.ಪಿ ಜಿಲ್ಲಾ ಕಾರ್ಯದರ್ಶಿ ರಂಗನಾಥ್ ಟಿ. ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ವಿಶ್ವ ಹಿಂದು ಪರಿ?ತ್ ಬಜರಂಗದಳ ವತಿಯಿಂದ ಡಿಸೆಂಬರ್ ೨೪ ರಿಂದ ೨೬ ರವರೆಗೆ ೩ ದಿನಗಳ ಕಾಲ ದತ್ತ ಜಯಂತಿ ನಡೆಯಲಿದೆ ಎಂದು ವಿ.ಎಚ್.ಪಿ ಜಿಲ್ಲಾ ಕಾರ್ಯದರ್ಶಿ ರಂಗನಾಥ್ ಟಿ. ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ ದತ್ತ ಜಯಂತಿಯನ್ನು ನಾಡ ಉತ್ಸವವನ್ನಾಗಿ ಆಚರಿಸುತ್ತಿದ್ದು ಡಿಸೆಂಬರ್ ೧೭ರಂದು ಸ್ಕಂದ ಪಂಚಮಿ ಭಾನುವಾರ ಶ್ರೀ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ದತ್ತಮಾಲ ಧಾರಣೆ ಕಾರ್ಯಕ್ರಮದ ಮೂಲಕ ದತ್ತ ಜಯಂತಿಗೆ ಚಾಲನೆ ನೀಡಲಾಗುವುದೆಂದು ಹೇಳಿದರು.

ಈ ಬಾರಿಯ ದತ್ತ ಜಯಂತಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ಸಂಘಟನೆಯು ತೀರ್ಮಾನಿಸಿದ್ದು ದತ್ತ ಜಯಂತಿ ಉತ್ಸವದ ಪ್ರಯುಕ್ತ ದತ್ತಪೀಠದಲ್ಲಿ ಡಿಸೆಂಬರ್ ೨೪ರಂದು ಅನುಸೂಯ ದೇವಿ ಪೂಜೆಯ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ಬೆಳಗ್ಗೆ ೯:೩೦ಕ್ಕೆ ಮಹಿಳೆಯರಿಂದ ನಗರದಲ್ಲಿ ಸಂಕೀರ್ತನ ಯಾತ್ರೆ ನಡೆಯಲಿದ್ದು ನಂತರ ಮಾತೆಯರು ದತ್ತಪೀಠಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ ಎಂದರು.

ಡಿಸೆಂಬರ್ ೨೫ರಂದು ದತ್ತಪೀಠದಲ್ಲಿ ದತ್ತ ಹೋಮ ಮತ್ತು ರುದ್ರ ಹೋಮ ನಡೆಯಲಿದ್ದು ಇದೇ ದಿನ ಮಧ್ಯಾಹ್ನ ನಗರದಲ್ಲಿ ಭವ್ಯ ಶೋಭಾ ಯಾತ್ರೆ ಹಾಗೂ ಅಜಾದ್ ವೃತ್ತದಲ್ಲಿ ಧಾರ್ಮಿಕ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಡಿಸೆಂಬರ್ ೨೬ರಂದು ದತ್ತಪೀಠದಲ್ಲಿ ದತ್ತ ಪಾದುಕೆ ದರ್ಶನ ಹಾಗೂ ದತ್ತ ಜಯಂತಿಯ ಅಂಗವಾಗಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ೨೫ ಸಾವಿರಕ್ಕೂ ಹೆಚ್ಚು ದತ್ತ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಈ ಬಾರಿಯ ಉತ್ಸವವನ್ನು ಸಾರ್ವಜನಿಕರ ಸಹಕಾರದಿಂದ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹಿಂದು ಸಮಾಜ ನಮ್ಮೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಚಿರತೆ ಚರ್ಮ ಹೊಂದಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ದತ್ತ ಪೀಠದ ಶಾಖಾದ್ರಿಯವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ ಅವರು ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿ.ಹೆಚ್.ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಸಹ ಕಾರ್ಯದರ್ಶಿ ಶರತ್, ಅಮಿತ್, ಸುನಿಲ್ ಆಚಾರ್ ಇದ್ದರು.

Datta Jayanti for 3 days from 24th to 26th December

About Author

Leave a Reply

Your email address will not be published. Required fields are marked *