September 20, 2024

ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಜನಾಂಗದ ಸಹಕಾರ ಅಗತ್ಯ

0
ಅರಸು ಭವನದಲ್ಲಿ ಜಿಲ್ಲಾ ಅರಸು ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ವಿತರಣೆ

ಅರಸು ಭವನದಲ್ಲಿ ಜಿಲ್ಲಾ ಅರಸು ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ವಿತರಣೆ

ಚಿಕ್ಕಮಗಳೂರು:  ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಜನಾಂಗದ ಸಹಕಾರ ಅಗತ್ಯ- ಮಧುಕುಮಾರ್ ರಾಜ್ ಅರಸ್ಚಿಕ್ಕಮಗಳೂರು- ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಿ ಜನಾಂಗದ ಮತ್ತು ಸಮಾಜ ಸೇವೆ ಕೆಲಸ ಮಾಡಲು ಎಲ್ಲಾ ಸದಸ್ಯರ ಸಲಹೆ ಸಹಕಾರ ಅತಿ ಮುಖ್ಯವೆಂದು ಜಿಲ್ಲಾ ಅರಸು ಸಂಘದ ಅಧ್ಯಕ್ಷರಾದ ಮಧುಕುಮಾರ್ ರಾಜ್ ಅರಸ್ ತಿಳಿಸಿದರು.

ಭಾನುವಾರ ನಗರದ ತೇಗೂರು ರಸ್ತೆಯಲ್ಲಿ ಇರುವ ಅರಸು ಭವನದಲ್ಲಿ ಜಿಲ್ಲಾ ಅರಸು ಸಂಘದ ಸರ್ವ ಸದಸ್ಯರ ಸಭೆ ಮತ್ತು ಜನಾಂಗದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿ ಜಿಲ್ಲಾ ಅರಸು ಸಂಘದವರು ಸಂಘಟಿತರಾಗಿ ಉತ್ತಮ ಸಲಹೆ ಸಹಕಾರ ನೀಡಿ ಜನಾಂಗದ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ ರಾಜ್ಯದಲ್ಲಿಯೆ ನಮ್ಮ ಅರಸು ಸಂಘ ಮಾದರಿಯಾಗಿದೆ ಎಂದರು.

ಜನಾಂಗದ ಹಿರಿಯರ ಮಾರ್ಗದರ್ಶನದಿಂದ ಅರಸು ಸಮುದಾಯ ಭವನ ನಿರ್ಮಾಣಗೊಂಡಿದೆ, ಈ ಭವನ ನಿರ್ಮಾಣಗೊಳ್ಳಲು ಎಲ್ಲರು ಸಹಕಾರ ನೀಡಿದ್ದಾರೆ, ನಮ್ಮ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರತೀ ವರ್ಷ ಗೌರವಿಸಲಾಗುವುದು, ಮುಂದಿನ ಜೀವನದಲ್ಲಿ ಮತ್ತಷ್ಟು ಸಾಧನೆ ಮಾಡಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ಜನಾಂಗದ ಅಭಿವೃದ್ಧಿಗು ಸಹಕಾರ ನೀಡಬೇಕೆಂದು ತಿಳಿಸಿದರು.

ಸಂಘಕ್ಕೆ ಅಗತ್ಯವಿರುವ ನಾಲ್ಕು ನೂತನ ಕೊಠಡಿಗಳನ್ನು ಮಾಡಲಾಗಿದೆ, ಗ್ರಾಮದ ಸಮೀಪದಲ್ಲಿಯೇ ಮೆಡಿಕಲ್ ಕಾಲೇಜು ಆಗುತ್ತಿದೆ, ಅವರಿಗೆ ಅನುಕೂಲವಾಗುವಂತಹ ಪಿಜಿಗಳನ್ನು ಮಾಡಲು ಸಂಘದ ಸದಸ್ಯರುಗಳಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ವೈಧ್ಯರಾದ ಡಾ. ಸಂತೋಷ್ ರಾಜ್ ಅರಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅರಸು ಸಮುದಾಯ ಭವನ ನಿರ್ಮಾಣ ಮಾಡಲು ಅನೇಕ ವರ್ಷಗಳಿಂದ ಯೋಜನೆಯನ್ನು ಹಾಕಿಕೊಳ್ಳಲಾಯಿತು, ಈ ಸಮುದಾಯ ನಿರ್ಮಾಣ ಮಾಡಲು ಜನಾಂಗದ ಪ್ರತಿಯೊಬ್ಬರು ಸಹಕಾರ ನೀಡಿದ್ದಾರೆ, ಮುಂದಿನ ದಿನಗಳಲ್ಲಿ ಜನಾಂಗದ ಅಭಿವೃದ್ಧಿಗಾಗಿ ಸಹಕಾರ ಸಂಘ, ಶಿಕ್ಷಣ ಸಂಸ್ಥೆಗಳು ಮತ್ತು ವಸತಿ ನಿಲಯಗಳನ್ನು ಪ್ರಾರಂಭಿಸಲು ಚರ್ಚಿಸಲಾಗಿದೆ, ಜನಾಂಗದವರು ಇದಕ್ಕೂ ಹೆಚ್ಚಿನ ಸಹಕಾರ ನೀಡಿ ರಾಜ್ಯದಲ್ಲಿಯೆ ನಮ್ಮ ಅರಸು ಸಂಘ ಮಾದರಿಯಾಗುವಂತೆ ಒಗ್ಗಟ್ಟಿನಿಂದ ಕೆಲಸ ಮಾಡೊಣ ಎಂದರು.

ಇದೆ ಸಂದರ್ಭದಲ್ಲಿ ಮೈಸೂರಿನಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಹೇಮಂತ್ ರವರು ವಿಜೇತರಾಗಿದ್ದರು, ಸಂಘದಿಂದ ಅವರನ್ನು ಸನ್ಮಾನಿಸಲಾಯಿತು, ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು,

ಈ ಸಂದರ್ಭದಲ್ಲಿ ಕಾರ್ಯದರ್ಶಿ ದಶರಥ ರಾಜ್ ಅರಸ್, ಉಪಾಧ್ಯಕ್ಷರಾದ ಯಶೋಧರಾಜ್ ಅರಸ್, ಖಜಾಂಚಿಗಳಾದ ಸುಂದರರಾಜ್ ಅರಸ್, ನಿರ್ದೇಶಕರಾದ ಮಂಜುನಾಥ್ ರಾಜ್ ಅರಸ್, ಮಲ್ಲರಾಜ್ ಅರಸ್, ನಾಗೇಶ್ ರಾಜ್ ಅರಸ್ ಇತರರು ಉಪಸ್ಥಿತರಿದ್ದರು. ಸತ್ಯನಾರಾಯಣರಾಜ್ ಅರಸ್ ಸ್ವಾಗತಿಸಿ, ಭರತ್ ರಾಜ್ ಅರಸ್ ನಿರೂಪಿ, ಯಶೋಧರಾಜ್ ಅರಸ್ ವಂಧಿಸಿದರು.

Distribution of Pratibha Puraskar

About Author

Leave a Reply

Your email address will not be published. Required fields are marked *