September 19, 2024

ಕನ್ನಡಬರೀನುಡಿಯಲ್ಲ; ಜೀವ, ಭಾವ, ಉಸಿರು, ಅಸ್ಮಿತೆ

0
ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ೬೮ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಕ್ಕೆ ಸಚಿವರಾದ ಕೆ.ಜೆ ಜಾರ್ಜ್ ರಿಂದ ಚಾಲನೆ

ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ೬೮ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಕ್ಕೆ ಸಚಿವರಾದ ಕೆ.ಜೆ ಜಾರ್ಜ್ ರಿಂದ ಚಾಲನೆ

ಚಿಕ್ಕಮಗಳೂರು:  ಕನ್ನಡ ಎಂದರೆ ಬರೀ ನುಡಿಯಲ್ಲ ಅದು ಜೀವ, ಭಾವ, ಉಸಿರು ಮತ್ತು ನಮ್ಮ ಅಸ್ಮಿತೆ. ಮಹಾಕವಿ ಕುವೆಂಪು ಅವರು ಹೇಳಿದಂತೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಭಾವನೆ ಎಲ್ಲಾ ಕನ್ನಡಿಗರ ಎದೆಯಲ್ಲಿ ಸದಾ ಹಸಿರಾಗಿರಬೇಕು ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ ಜಾರ್ಜ್ ಅಭಿಪ್ರಾಯಿಸಿದರು.

ಅವರು ಇಂದು ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ೬೮ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶ್ವದ ಸರ್ವ ಕನ್ನಡಿಗರಿಗೆ ರಾಜ್ಯೋತ್ಸವ ಸಂದೇಶ ನೀಡಿದರು. ಎರಡೂವರೆ ಸಾವಿರ ವ?ಗಳ ಹಿರಿಮೆಯನ್ನು ಹೊಂದಿರುವ ನಮ್ಮ ಕನ್ನಡ ನಾಡಿನಲ್ಲಿ ತಾಯಿ ಭುವನೇಶ್ವರಿಯನ್ನು ಕರುನಾಡ ದೇವಿಯಾಗಿ ಆರಾಧಿಸಿಕೊಂಡು ಬರುತ್ತಿದ್ದೇವೆ. ಹಂಪಿಯಲ್ಲಿ ನಾಳೆ ಕನ್ನಡ ಜ್ಯೋತಿ ಬೆಳಗುವ ಮೂಲಕ ರಾಜ್ಯಾದ್ಯಂತ ಒಂದು ವ?ದವರೆಗೆ ನಡೆಯಲಿರುವ ಕನ್ನಡ ಜ್ಯೋತಿ ರಥಯಾತ್ರೆಗೆ ಸಿಎಂ ಚಾಲನೆ ನೀಡಲಿದ್ದಾರೆ ಎಂದರು.

ನಾಡೋಜ ಚನ್ನವೀರ ಕಣವಿ ಅವರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಶೀರ್ಷಿಕೆ ಅಡಿಯಲ್ಲಿ ಕರ್ನಾಟಕ ಸಂಭ್ರಮ-೫೦ ಎಂಬ ಕಾರ್ಯಕ್ರಮವನ್ನು ಇಂದಿನಿಂದ ಒಂದು ವ?ಗಳ ಕಾಲ ಅಂದರೆ ೧ನೇ ನವೆಂಬರ್ ೨೦೨೪ರ ವರೆಗೆ ರಾಜ್ಯದ್ಯಂತ ಕರ್ನಾಟಕ ಸರ್ಕಾರದ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡ-ನುಡಿಗೆ ಸಂಬಂಧಿಸಿದಂತೆ ಯುವ ಜನತೆಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಕುರಿತು ಈಗಾಗಲೇ ಕರ್ನಾಟಕ ಸಂಭ್ರಮ-೫೦ ರ ಲಾಂಛನವನ್ನು ಮುಖ್ಯ ಮಂತ್ರಿಗಳು ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.

ಕರುನಾಡು ಎಂಬ ಪದ ಎತ್ತರದ ಭೂಭಾಗ ಎನ್ನುವ ಅರ್ಥವನ್ನು ನೀಡುತ್ತದೆ. ಕರ್ನಾಟಕದ ಜನತೆ ನಿಜಕ್ಕೂ ಎಲ್ಲಾ ಅರ್ಥದಲ್ಲೂ ಎತ್ತರದ, ಗೌರವದ ಸ್ಥಾನಮಾನಗಳಿಗೆ ಸದಾ ಅರ್ಹರಾಗಿದ್ದಾರೆ. ಕ್ರಿಸ್ತ ಪೂರ್ವದಿಂದಲೂ ಕನ್ನಡ ಭಾ? ಅಸ್ತಿತ್ವ ಪಡೆದಿರುವ ಬಗ್ಗೆ ಹಲವಾರು ದಾಖಲೆಗಳಿವೆ. ಕನ್ನಡ ನುಡಿ ಮೊದಲು ಬೆಳಕಿಗೆ ಬಂದಿದ್ದು ಚಿಕ್ಕಮಗಳೂರು ಸಮೀಪವೇ ಇರುವ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮದ ಶಾಸನದಲ್ಲಿ. ಕನ್ನಡದ ಮೊದಲ ಶಾಸನವೆಂದೇ ಪ್ರಸಿದ್ಧಿಯಾಗಿದೆ. ಈ ಶಾಸನವು ಚಿಕ್ಕಮಗಳೂರು ತಾಲ್ಲೂಕಿಗೆ ಸೇರಿದ ಮುಗುಳುವಳಿಯನ್ನೂ ಹೆಸರಿಸಿದೆ ಎಂದರು.

ಮಹಾಕಾವ್ಯಗಳ ರಚನೆಗೆ ಸಂಸ್ಕೃತವನ್ನು ಬಿಟ್ಟು ಕನ್ನಡವನ್ನು ಆಯ್ದುಕೊಂಡ ಕನ್ನಡದ ಧೀಮಂತ ಕವಿಗಳಾದ ಪಂಪ, ಪೊನ್ನ, ರನ್ನ ರಂತಹ ರತ್ನತ್ರಯರು; ಕನ್ನಡ ಭಾ?ಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಪ್ರಕಾರಗಳು ವಿಶೇ? ಮೆರಗನ್ನು ತಂದುಕೊಟ್ಟಿವೆ. ಕನ್ನಡಕ್ಕೆ ಹೊಸ ಕಾಯಕಲ್ಪ ನೀಡಲು ದುಡಿದ ಗೋವಿಂದ ಪೈ, ಪಂಜೆ ಮಂಗೇಶರಾಯರು, ಬಿ.ಎಂ.ಶ್ರೀ, ಅಂಬಳೆ ಕೃ?ಶಾಸ್ತ್ರಿ ಹಾಗೂ ಕನ್ನಡಕ್ಕೆ ದೇಶದಲ್ಲಿಯೇ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಗೌರವ ತಂದುಕೊಟ್ಟ ಕುವೆಂಪು, ದರಾಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿನಾಯಕ ಕೃ? ಗೋಕಾಕ್, ಯು.ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಹಾಗೂ ಚಂದ್ರಶೇಖರ ಕಂಬಾರರು ಕನ್ನಡಿಗರನ್ನು ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ರೆವರೆಂಡ್ ಫರ್ಡಿನಾಂಡ್ ಕಿಟಲ್ ಅವರು ಕರ್ನಾಟಕದ ಮಂಗಳೂರು, ಮಡಿಕೇರಿ ಮತ್ತು ಧಾರವಾಡದಲ್ಲಿ ಕನ್ನಡ ಭಾ? ಅಧ್ಯಯನವನ್ನು ಕೈಗೊಂಡು, ೧೮೯೪ರಲ್ಲೇ ಸುಮಾರು ೭೦,೦೦೦ ಪದಗಳ ಕನ್ನಡ ಇಂಗ್ಲಿ? ನಿಘಂಟನ್ನು ತಯಾರಿಸಿ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಕನ್ನಡದ ನಿತ್ಯೋತ್ಸವ ಕವಿಯೆಂದೇ ಪ್ರಸಿದ್ಧಿ ಪಡೆದ ಪ್ರೊ.. ಕೆ.ಎಸ್ ನಿಸಾರ್ ಅಹಮದ್ ಅವರು ಬರೆದ ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಎಂಬ ನಿತ್ಯೋತ್ಸವದ ಪದ್ಯವು ಎಂದೆಂದಿಗೂ ಜನಪ್ರಿಯವಾದದ್ದು. ಇವರುಗಳು ಕನ್ನಡ ನಾಡು-ನುಡಿಗಾಗಿ ಸಲ್ಲಿಸಿರುವ ಅವಿಸ್ಮರಣೀಯ ಸೇವೆಯನ್ನು ಈ ಸಂದರ್ಭದಲ್ಲಿ ನಾವೆಲ್ಲರೂ ಸ್ಮರಿಸಿಕೊಳ್ಳಬೇಕಾಗುತ್ತದೆ ಎಂದರು.

ಕನ್ನಡದ ಗಾಯತ್ರಿ ಎಂದೇ ಖ್ಯಾತವಾದ ಜನಪದ ಸಾಹಿತ್ಯ ಒಂದು ಕನ್ನಡ ಪರಂಪರೆಯ ಅಮೂಲ್ಯ ಆಸ್ತಿ. ಎರಡುವರೆ ಸಾವಿರ ವ?ಗಳ ಘನ ಇತಿಹಾಸದ ಹೆಗ್ಗಳಿಕೆಯನ್ನು ಹೊಂದಿರುವ ಕನ್ನಡಕ್ಕೆ ಶಾಸ್ತ್ರೀಯ ಭಾ? ಎಂದು ಗೌರವ ಸಿಕ್ಕಿರುವುದು ನಮ್ಮ ಹೆಮ್ಮೆ. ಆದರೆ ಭಾ? ನಿರಂತರವಾಗಿ ಬಳಕೆಯಾಗುತ್ತಿದ್ದರೆ ಮಾತ್ರವೇ ಅದರ ಸೊಬಗು, ಸೌಂದರ್ಯ ಅದರ ಅಭಿಮಾನ ಹೆಚ್ಚಾಗುವುದು ಮತ್ತು ಈ ಭಾ?ಯನ್ನು ಸಮೃದ್ಧವಾಗಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರೆ ನೀಡಿದರು.

ನಿಸರ್ಗ ದೇವಿಯ ಪರಮ ಕೃಪೆಗೆ ಪಾತ್ರವಾಗಿ ಅಪಾರವಾದ ನೈಸರ್ಗಿಕ ಚೆಲುವನ್ನು ಪಡೆದು ಹಸಿರು ಸಿರಿಯಿಂದ ಕಂಗೊಳಿಸುತ್ತಿರುವ ನಮ್ಮ ಚಿಕ್ಕಮಗಳೂರು ಜಿಲ್ಲೆಗೆ ವಿದ್ಯಾದೇವತೆ ಶಾರದಾಂಬೆ ಮತ್ತು ಅನ್ನ ನೀಡುವ ಅನ್ನಪೂರ್ಣೇಶ್ವರಿಯ ಕೃಪೆ ಸದಾ ಇದೆ ಎಂದು ಹೇಳಿದರು.

ಚಿಕ್ಕಮಗಳೂರು ರಾಜ್ಯದ ಜಲ ಸಂಪನ್ಮೂಲದ ತವರು ಕೂಡ ೭ ಪ್ರಮುಖ ನದಿಗಳಾದ ತುಂಗ, ಭದಾ, ನೇತ್ರಾವತಿ, ಹೇಮಾವತಿ, ಯಗಚಿ, ವೇದಾ, ಆವತಿ ನದಿಗಳು ಹುಟ್ಟುವುದು ಈ ಜಿಲ್ಲೆಯ ಪ್ರಸಿದ್ಧ ಪಶ್ಚಿಮ ಘಟ್ಟಗಳಲ್ಲಿ ಮತ್ತು ಚಂದ್ರದ್ರೋಣ ಪರ್ವತದ ಶಿಖರಗಳಲ್ಲಿ. ಈ ನದಿಗಳ ಜೊತೆಗೆ ೩೦ಕ್ಕೂ ಅಧಿಕ ಉಪನದಿಗಳು ಹೆಸರೇ ಇಲ್ಲದ ನೂರಾರು ಹಳ್ಳ, ತೊರೆ, ಝರಿಗಳು ಹುಟ್ಟುವ ಪ್ರದೇಶ ನಮ್ಮದು. ನಮ್ಮ ರಾಜ್ಯದ ಹತ್ತಾರು ಜಿಲ್ಲೆಗಳಿಗೆ ನೀರುಣಿಸಿ ಆಂಧ್ರ, ತಮಿಳುನಾಡುಗಳಿಗೂ ಜಲಧಾರೆ ಹರಿಸುವ ಭಾಗ್ಯ ಇಲ್ಲಿನ ನದಿಗಳದ್ದು. ಆದುದರಿಂದ ಇಲ್ಲಿನ ಪಶ್ಚಿಮ ಘಟ್ಟಗಳಲ್ಲಿನ ಪ್ರಕೃತಿ ಸಮತೋಲನವನ್ನು ಕಾಪಾಡಿಕೊಂಡು ಈ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವ ಅನನ್ಯ ಹೊಣೆಗಾರಿಕೆಯನ್ನು ಪ್ರತಿಯೊಬ್ಬ ಕನ್ನಡಿಗನು ವಹಿಸಿಕೊಳ್ಳಲೇಬೇಕಾಗಿದೆ ಎಂದು ಹೇಳಿದರು.

ಹಿರೇಮಗಳೂರು ಕಣ್ಣನ್ ಅವರು ಕನ್ನಡದ ಸಾಂಸ್ಕೃತಿಕ ರಾಯಭಾರಿ ಎನಿಸಿ, ಜಿಲ್ಲೆಯ ಹೆಮ್ಮೆಯಾಗಿದ್ದಾರೆ. ಇಂತಹ ಅನೇಕ ಸಾಹಿತ್ಯ ಸಾಂಸ್ಕೃತಿಕ ಚೇತನಗಳಿಂದ ನಮ್ಮ ಜಿಲ್ಲೆ ವಿಶೇ?ವಾದ ಕೀರ್ತಿ ಪಡೆದಿದೆ. ಈ ಜಿಲ್ಲೆಯ ನಮ್ಮ ಅಂಬಳೆ ಕೃ?ಶಾಸ್ತ್ರಿಗಳು ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಅಗ್ರ ಮಾನ್ಯತೆ ಸಿಗಲೇಬೇಕೆಂದು ಜೀವನವಿಡಿ ದುಡಿದವರು. ಅವರು ಹೇಳಿರುವ ’ಕನ್ನಡಿಗರಿಗೆ ಕನ್ನಡ ನಾಡಿನಲ್ಲಿ ಹಿರಿಯ ಆಸ್ತಿಯಾಗಿ ಉಳಿದಿರುವುದು ಅವರ ಕನ್ನಡ ಭಾ? ಕನ್ನಡವನ್ನು ಎಲ್ಲರೂ ಒಂದಾಗಿ ಕಾಪಾಡಿಕೊಂಡು ಬಂದರೆ ಅದು ತಾಯಿ ನುಡಿಯಾಗಿ ಉಳಿಯುತ್ತದೆ ಬೆಳೆಯುತ್ತದೆ. ಕನ್ನಡಿಗರಿಗೆ ಕನ್ನಡದಿಂದಲೇ ಭುಕ್ತಿ, ಕನ್ನಡದಿಂದಲೇ ಮುಕ್ತಿ’ ಎಂಬ ಮಾತುಗಳನ್ನು ನಾವು ಸದಾ ಮನನ ಮಾಡಿಕೊಳ್ಳುತ್ತಿರಬೇಕು.

ನಮ್ಮ ರಾ?ಕವಿ ಕುವೆಂಪು ಹೇಳಿದಂತೆ
ಎಲ್ಲಾದರೂ ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು

ಎನ್ನುವಂತೆ ನಾವೆಲ್ಲರೂ ಕನ್ನಡತನ ಉಳಿಸಿಕೊಳ್ಳಲು ಕಂಕಣಬದ್ಧರಾಗೋಣ ಎಂದರು.

ಆರ್ಥಿಕವಾಗಿ ಹಿಂದುಳಿದವರ ಮತ್ತು ದೀನ ದಲಿತರ ಸಬಲೀಕರಣಕ್ಕಾಗಿ ಅವರನ್ನು ಆರ್ಥಿಕವಾಗಿ ಮುನ್ನೆಲೆಗೆ ತರುವ ದೃಷ್ಟಿಯಿಂದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರಕ್ಕೆ ಆಡಳಿತದ ಚುಕ್ಕಾಣಿ ಹಿಡಿಯಲು ಕನ್ನಡದ ಜನತೆ ನಮಗೆ ಆಶೀರ್ವಾದ ನೀಡಿದ್ದಾರೆ ಅವರ ಶ್ರೀ ರಕ್ಷೆಯಿಂದ ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದೆ ಎಂದು ವಿವರಿಸಿದರು.

ಮೊದಲನೆಯದಾಗಿ ಶಕ್ತಿ ಯೋಜನೆ ಅಡಿಯಲ್ಲಿ ನಮ್ಮ ರಾಜ್ಯದ ಬೇರೆ ಬೇರೆ ಭಾಗಗಳಿಂದ ನಮ್ಮ ಜಿಲ್ಲೆಗೆ ಬಸ್ ಮೂಲಕ ಉಚಿತ ಸಂಚಾರ ಭಾಗ್ಯದ ಈ ಯೋಜನೆಯಲ್ಲಿ ಇದುವರೆಗೂ ಒಟ್ಟು ೧,೫೪,೧೦,೦೪೮ ಹೆಣ್ಣುಮಕ್ಕಳು ವಿಶೇ? ಪ್ರಯೋಜನ ಪಡೆದಿದ್ದಾರೆ. ಈ ಬಾಬ್ತು ರೂ. ೫೨,೮೫,೨೫,೭೯೪-/ ವೆಚ್ಚವಾಗಿರುತ್ತದೆ. ಅಲ್ಲದೆ ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಸ್ಥಳಗಳಿಗೆ ಮತ್ತು ಪ್ರವಾಸಿ ತಾಣಗಳಿಗೆ ಬರುವ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿಯೂ ಗಣನೀಯವಾಗಿ ಹೆಚ್ಚಳವಾಗಿದೆ. ಈ ಮೂಲಕ ರಾಜ್ಯದ ಆರ್ಥಿಕ ಚಟುವಟಿಕೆಯು ಸಹ ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ ಎಂದರು.

ಎರಡನೆಯದಾಗಿ ೨೦೦ ಯೂನಿಟ್‌ಗಿಂತ ಕಡಿಮೆ ಗೃಹ ವಿದ್ಯುತ್ ಬಳಕೆದಾರರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವ ಗೃಹಜ್ಯೋತಿ ಯೋಜನೆಯನ್ನು ಇದೇ ವ?ದ ಜುಲೈ ತಿಂಗಳಿಂದ ಜಾರಿಗೆ ತರಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೆ ೨,೮೪,೦೦೦ ಕುಟುಂಬಗಳು ಪ್ರಯೋಜನ ಪಡೆಯುತ್ತಿದ್ದು, ಪ್ರತಿ ತಿಂಗಳಿಗೆ ಅಂದಾಜು ೯ ಕೋಟಿಗಳ ಉಚಿತ ವಿದ್ಯುತ್ ಒದಗಿಸಲಾಗುತ್ತದೆ. ವಾರ್ಷಿಕ ೧೦೮ ಕೋಟಿ ಮೌಲ್ಯದ ವಿದ್ಯುತ್ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಇ-ಆಫೀಸ್ ಮೂಲಕ ಕಡತಗಳನ್ನು ವಿಲೇವಾರಿ ಮಾಡಲಾಗುತ್ತಿದ್ದು, ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ, ಉಪ ವಿಭಾಗಾಧಿಕಾರಿಗಳ ಕಚೇರಿ, ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳು ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಇ-ಆಫೀಸ್ ಅನ್ನು ಅನು?ನಗೊಳಿಸುವ ಮೂಲಕ ತ್ವರಿತಗತಿಯಲ್ಲಿ ಆಡಳಿತ ನೀಡಲು ಕ್ರಮವಹಿಸಲಾಗಿದೆ ಎಂದರು.

ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಪಾಡಲು ಅನುವಾಗುವಂತೆ ಇ-ಆಫೀಸನ್ನು ಚಿಕ್ಕಮಗಳೂರು ಜಿಲ್ಲಾಡಳಿತ ಪ್ರಾರಂಭ ಮಾಡಿರುವುದು ಶ್ಲಾಘನೀಯ. ಇದರಿಂದ ಸಮಯದ ಉಳಿತಾಯದ ಜೊತೆಗೆ ಕಾಗದ ರಹಿತ ಆಡಳಿತ ನೀಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಪ್ರಸ್ತುತ ಮಳೆಯ ಕೊರತೆಯಿಂದ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಬರ ಘೋ?ಣೆಯಾಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಕೊರತೆಯಾಗದಂತೆ ಕ್ರಮವಹಿಸಲಾಗುತ್ತಿದೆ ಮತ್ತು ಅದಕ್ಕೆ ಸಂಬಂಧಿಸಿದ ಅನುದಾನವನ್ನು ಸಹ ಸರ್ಕಾರವು ಒದಗಿಸುತ್ತಿದೆ ಎಂದು ಹೇಳಿದರು. ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಪೂರ್ಣ ಪ್ರಮಾಣದಲ್ಲಿ ಸ್ಪಂದಿಸುತ್ತಿದ್ದು, ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದರು.

ಇದಕ್ಕೂ ಮುನ್ನ ಭುವನೇಶ್ವರಿ ಭಾವಚಿತ್ರದೊಂದಿಗೆ ವಿವಿಧ ಸ್ಥಬ್ದ ಚಿತ್ರಗಳ ಮೆರವಣಿಗೆ ತಾಲೂಕು ಕಚೇರಿಯಿಂದ ಆರಂಭಗೊಂಡು ಎಂ.ಜಿ ರಸ್ತೆ ಮೂಲಕ ಸಾಗಿ, ನೇತಾಜಿ ಸುಭಾ?ಚಂದ್ರಬೋಸ್ ಜಿಲ್ಲಾ ಆಟದ ಮೈದಾನ ತಲುಪಿತು.

ಪೊಲೀಸ್ ಹಾಗೂ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಆಕ?ಕ ಪಥಸಂಚಲನ ನಡೆಯಿತು. ಸ್ಥಬ್ದಚಿತ್ರ ಮೆರವಣಿಗೆ ನೋಡುಗರ ಮನಸೂರೆಗೊಂಡವು, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಶಾಸಕರುಗಳಾದ ಎಚ್.ಡಿ ತಮ್ಮಯ್ಯ, ಟಿ.ಡಿ ರಾಜೇಗೌಡ, ನಗರಸಭಾಧ್ಯಕ್ಷ ವರದಿ ವೇಣುಗೋಪಾಲ್, ಉಪಾಧ್ಯಕ್ಷ ಅಮೃತೇಶ್, ಸದಸ್ಯರುಗಳಾದ ಲಕ್ಷ್ಮಣ್, ಶಾದಬ್ ಅಲಂಖಾನ್, ಜಿಲ್ಲಾಧಿಕಾರಿ ಮೀನಾನಾಗರಾಜ್, ಅಪರ ಜಿಲ್ಲಾಧಿಕಾರಿ ಕನಕರಡ್ಡಿ ನಾರಾಯಣರಡ್ಡಿ, ಜಿ.ಪಂ ಸಿ.ಇ.ಓ ಡಾ|| ಬಿ.ಗೋಪಾಲಕೃ? ಉಪಸ್ಥಿತರಿದ್ದರು.

Kannada is not just a word it is life spirit breath identity

About Author

Leave a Reply

Your email address will not be published. Required fields are marked *

You may have missed