September 19, 2024

ಯುವಜನತೆಗೆ ಭಾಷಾಭಿಮಾನ ಮೂಡಿಸುವುದು ಅತ್ಯಗತ್ಯ

0
ಕಸಾಪ ತಾಲ್ಲೂಕು ಹಮ್ಮಿಕೊಂಡಿದ್ದ ನುಡಿನಿತ್ಯೋತ್ಸವ

ಕಸಾಪ ತಾಲ್ಲೂಕು ಹಮ್ಮಿಕೊಂಡಿದ್ದ ನುಡಿನಿತ್ಯೋತ್ಸವ

ಚಿಕ್ಕಮಗಳೂರು: ಪುರಾತನ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಕಂಪನ್ನು ಪ್ರಸ್ತುತ ಯುವಜನತೆಯ ಮನಸ್ಸಿನಲ್ಲಿ ಹೆಚ್ಚು ನೆರೆಯೂರುವಂತೆ ಮಾಡುವುದು ಅತ್ಯಗತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಹೇಳಿದರು.

ತಾಲ್ಲೂಕಿನ ಮುಗುಳುವಳ್ಳಿ ಗ್ರಾಮದ ವ್ಯವಸಾಯೋತ್ಪನ್ನ ಭವನದಲ್ಲಿ ಕಸಾಪ ತಾಲ್ಲೂಕು ಹಾಗೂ ಹೋಬಳಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ’ಹಸಿರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ನುಡಿನಿತ್ಯೋತ್ಸವ ಸಂಭ್ರಮದ ಐದನೇ ದಿನದ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಮೊದಲ ಶಾಸನ ಖ್ಯಾತಿ ಪಡೆದಿರುವ ಹಲ್ಮ್ಮಿಡಿ ಶಾಸನದಲ್ಲಿ ಮುಗುಳುವಳ್ಳಿ ಗ್ರಾಮದ ಇತಿಹಾಸವಿರು ವುದು ಕೆಲವರಿಗೆ ತಿಳಿಯದ ವಿಚಾರವಾಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಕಲೆ ಅಮೂಲ್ಯವಾಗಿದ್ದು ಪ್ರತಿಯೊಬ್ಬರಿಗೂ ತಿಳುವಳಿಕೆ ಮೂಡಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ಮಾಡಿದರು.

ನಾಡಿನ ಭಾಷೆಯು ಪ್ರತಿಯೊಬ್ಬರ ಉಸಿರು ಹಾಗೂ ಜೀವನವಿದ್ದಂತೆ. ಅನೇಕ ಕವಿಗಳು ಕನ್ನಡ ಸಾಹಿತ್ಯದ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿರುವ ಪರಿಣಾಮ ಬೇರ್‍ಯಾವ ರಾಜ್ಯಕ್ಕೆ ಸಿಗದ ಎಂಟು ಜ್ಞಾನಪೀಠ ಪ್ರಶಸ್ತಿ ಮೊದಲ ಬಾರಿ ಕರ್ನಾಟಕ್ಕೆ ಲಭಿಸಿರುವುದು ಕನ್ನಡಿಗರು ಹೆಮ್ಮೆಪಡುವಂತದದ್ದು ಎಂದು ಹೇಳಿದರು.

ಕನ್ನಡ ಭಾಷಾ ಶಿಕ್ಷಕಿ ಎ.ಪಿ.ಚೈತ್ರ ಉಪನ್ಯಾಸ ನೀಡಿ ಮಾತನಾಡಿ ದೇಶದಲ್ಲಿ ನೂರಾರು ಭಾಷೆಗಳಿದ್ದು ಅವುಗಳದೇಯಾದ ವಿಶೇಷತೆ ಹೊಂದಿದೆ. ರಾಜ್ಯದ ಕನ್ನಡ ಭಾಷೆಯ ಇತರೆ ಭಾಷೆಗಳಿಗಿಂತ ಸಮೃದ್ದವಾಗಿ ಹರಡಿ ಕೊಂಡಿರುವ ಪರಿಣಾಮ ನಟರು, ಗಾಯಕರು ಹಾಗೂ ಸಾಮಾನ್ಯ ವ್ಯಕ್ತಿ ಸೇರಿದಂತೆ ಹಲವಾರು ಮಂದಿ ರಾಜ್ಯ ದಿಂದ ಬದುಕು ರೂಪಿಸಿಕೊಂಡಿದ್ದಾರೆ ಎಂದರು.

ಸ್ವಾತಂತ್ರ್ಯ ಪೂರ್ವದ ಮೊದಲಿನಿಂದಲೂ ಕನ್ನಡ ಏಕಿಕರಣಕ್ಕಾಗಿ ಹಲವಾರು ಹೋರಾಟಗಳನ್ನು ಮಾಡಲಾ ಗುತ್ತಿದೆ. ಅಂದಿನ ಸಮಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೧೫ ರಲ್ಲಿ ಕಸಾಪ ಸ್ಥಾಪಿಸಿ ಭಾಷೆಯ ಬೆಳವಣಿಗೆಗೆ ಒತ್ತು ನೀಡಿದ್ದು ಇಂದಿನವರೆಗೂ ಕಸಾಪ ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ರೂಪಿಸಿ ಭಾಷಾಭಿಮಾನ ವನ್ನು ಎಲ್ಲೆಡೆ ಪಸರಿಸುತ್ತಿದೆ ಎಂದರು.

ಮೂಲತ ಕನ್ನಡ ಭಾಷೆಗೆ ೨೦೦೮ರಲ್ಲಿ ಶಾಸ್ತ್ರೀಯ ಸ್ಥಾನಮಾನ ದೊರೆಯಿತು. ಇದಕ್ಕೂ ಮೊದಲು ೧೯೫೬ರಲ್ಲಿ ಮೈಸೂರು ರಾಜ್ಯ ಸ್ಥಾಪನೆಗೊಂಡು ಕನ್ನಡ ಭಾಷೆ ಉದಯವಾಯಿತು. ಬಳಿಕ ಕಾಲಕ್ರಮೇಣ ಅಕ್ಕಪಕ್ಕದ ಕನ್ನಡಿಗರ ರಾಜ್ಯಗಳನ್ನು ಒಟ್ಟುಗೂಡಿಸಿ ೧೯೭೩ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಪರಿವರ್ತಿಸಿದ ಪರಿಣಾಮ ೫೦ರ ಸುವರ್ಣ ಮಹೋತ್ಸವ ಹಾಗೂ ೬೮ರ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು.

ಕಸಾಪ ತಾಲ್ಲೂಕು ಸಂಚಾಲಕ ಎಂ.ಯು.ಹಾಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಹಬ್ಬವಾದ ರಾಜ್ಯೋ ತ್ಸವನ್ನು ಕೇವಲ ನವೆಂಬರ್ ತಿಂಗಳಿಗೆ ಸೀಮಿತಗೊಳಿಸದೇ ವರ್ಷಪೂರ್ತಿ ಆಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕನ್ನಡ ಬಳಕೆಗೆ ಹೆಚ್ಚು ಒತ್ತು ನೀಡಿದರೆ ಭಾಷೆ ಉಳಿಸಿ ಎನ್ನುವ ಬದಲು ಬೆಳೆಸುವಂತಾಗಲೀ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಅಂಬಳೆ ಹೋಬಳಿ ಘಟಕದ ಅಧ್ಯಕ್ಷ ಎಂ.ಆರ್. ಚಂದ್ರಶೇಖರ್ ಮುಗುಳುವಳ್ಳಿ ಶಾಲೆಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚು ಅಧ್ಯಯನ ನಡೆಸಿ ಚೈತ್ರ ಸೇರಿದಂತೆ ಅನೇಕ ಮಂದಿ ಉನ್ನತ ಮಟ್ಟದಲ್ಲಿ ಯಶಸ್ಸು ಗಳಿಸಿದ್ದಾರೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಂಗ್ಲಭಾಷೆಯ ಜೊತೆಗೆ ಹೆಚ್ಚು ಆದ್ಯತೆಯನ್ನು ಕನ್ನಡಕ್ಕೆ ನೀಡಿದರೆ ಮುಂದಿನ ಬದುಕು ಹಸನಾಗುವುದರಲ್ಲೇ ಸಂಶಯವಿಲ್ಲ ಎಂದರು.

ಈ ಸಂದರ್ಭದಲ್ಲ ಕಸಾಪ ಪ್ರಧಾನ ಕಾರ್ಯದರ್ಶಿ ಕಾಂರಾಜ್, ಹಾಲು ಒಕ್ಕೂಟದ ಸಂಘದ ನಿರ್ದೇಶಕ ಎಂ.ಎಸ್.ದಿನೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪರಮೇಶ್ವರಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ರಘು ಉಪಸ್ಥಿತರಿದ್ದರು. ಗ್ರಾಮದ ಕು.ರಂಜಿತ್ ಸ್ವಾಗತಿಸಿದರು. ಕು.ಕಾವ್ಯ ನಿರೂಪಿಸಿದರು. ಕು.ನಿವೇದಿತ ಪ್ರಾರ್ಥಿಸಿದರು. ಕು.ತೃಪ್ತಿ ವಂದಿಸಿ ದರು.

Daily festival held in Kasapa taluk

About Author

Leave a Reply

Your email address will not be published. Required fields are marked *

You may have missed