September 19, 2024

ಪಕ್ಷದ ಸಿದ್ಧಾಂತಕ್ಕಾಗಿ ನಗರಸಭೆ ಅಧಿಕಾರ ಕಳೆದುಕೊಳ್ಳಲು ಬಿ.ಜೆ.ಪಿ ಸಿದ್ದ

0
District BJP president HC Kalmarudappa press conference

District BJP president HC Kalmarudappa press conference

ಚಿಕ್ಕಮಗಳೂರು: ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಪಕ್ಷಕ್ಕೆ ಮುಜುಗರ ತರುವಂತೆ ನಡೆದುಕೊಂಡಿರುವುದರಿಂದ ಬಿಜೆಪಿ ಯಾವುದೇ ತ್ಯಾಗಕ್ಕೂ ಸಿದ್ಧವಿದೆ ಅಧಿಕಾರ ಬಿಟ್ಟು ವಿರೋಧ ಪಕ್ಷದಲ್ಲಿ ಕೂರಲು ಹಿಂಜರಿಯುವುದಿಲ್ಲವೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ ಕಲ್ಮರುಡಪ್ಪ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಕ್ಷಕ್ಕೆ ಸಿದ್ಧಾಂತ, ನಿ?, ವೈಚಾರಿಕತೆ ಮುಖ್ಯ ಪಕ್ಷದ ಸಿದ್ಧಾಂತಕ್ಕಾಗಿ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧ ರಾಜ್ಯ ಸರ್ಕಾರವನ್ನೇ ಕಳೆದುಕೊಂಡಿದ್ದೇವೆ ನಗರಸಭೆಯನ್ನು ಕಳೆದುಕೊಳ್ಳಲು ಯೋಚನೆ ಮಾಡುವುದಿಲ್ಲ ಎಂದು ಹೇಳಿದರು.

ಕಳೆದ ೬ ತಿಂಗಳಿಂದ ಅಧ್ಯಕ್ಷ ವರಿಸಿದ್ದಿ ವೇಣುಗೋಪಾಲ್‌ಅವರು ಪಕ್ಷದ ಸೂಚನೆಗಳನ್ನು ಧಿಕ್ಕರಿಸುವ ಮೂಲಕ ಬಿಜೆಪಿ ಪಕ್ಷಕ್ಕೆ ಮುಜುಗರಕ್ಕೀಡಾಗುವ ಪರಿಸ್ಥಿತಿ ತಂದಿದ್ದಾರೆ. ಈ ಕಾರಣಕ್ಕಾಗಿ ೧೭ ಮಂದಿ ಬಿ.ಜೆ.ಪಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಅವಿಶ್ವಾಸದಲ್ಲಿ ಸೋಲಾದರೆ ಬಿಜೆಪಿ ಪಕ್ಷ ನಗರಸಭೆ ಅಧಿಕಾರಕ್ಕೆ ಪ್ರಯತ್ನ ಪಡುವುದಿಲ್ಲ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಜನರ ಕೆಲಸ ಮಾಡುವ ಮೂಲಕ ಪಕ್ಷ ಸಂಘಟನೆ ಮಾಡುವುದಾಗಿ ಸ್ಪಷ್ಠಡಿಸಿದರು.

ನಗರಸಭೆಯ ಅಧಿಕಾರಕ್ಕಾಗಿ ಎಸ್.ಡಿ.ಪಿ.ಐ ಸದಸ್ಯರ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು ಯಾವುದೇ ಕಾರಣಕ್ಕೂ ಎಸ್.ಡಿ.ಪಿ.ಐ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಠಪಡಿಸಿದರು.

ಅವಿಶ್ವಾಸ ನಿರ್ಣಯ ಪತ್ರಕ್ಕೆ ಎಸ್.ಡಿ.ಪಿ.ಐ ಸದಸ್ಯರಿಂದ ಸಹಿ ಹಾಕಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ನಗರಸಭಾ ಸದಸ್ಯರು ಆಗಿರುವ ಬಿಜೆಪಿ ಜಿಲ್ಲಾ ವಕ್ತಾರ ಟಿ.ರಾಜಶೇಖರ್ ಪ್ರತಿಕ್ರಿಯೆ ನೀಡಿ ಅವಿಶ್ವಾಸ ನಿರ್ಣಯ ಪತ್ರಕ್ಕೆ ಬಿಜೆಪಿ ವತಿಯಿಂದ ಮನವಿ ನೀಡಿಲ್ಲ ನಗರಸಭಾ ಸದಸ್ಯರುಗಳು ಅರ್ಜಿ ಸಲ್ಲಿಸಿದ್ದು ಹಿಂದಿನಿಂದಲೂ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ವಿರುದ್ಧ ಭ್ರ?ಚಾರದ ಆರೋಪ ಮಾಡುತ್ತಿದ್ದ ಎಸ್.ಡಿ.ಪಿ.ಐ ಸದಸ್ಯರು ಅವಿಶ್ವಾಸ ಪತ್ರಕ್ಕೆ ಸಹಿಹಾಕಿದ್ದಾರೆ ಅದನ್ನು ಹೊರತುಪಡಿಸಿ ಬಿಜೆಪಿ ಮತ್ತು ಎಸ್.ಡಿ.ಪಿ.ಐ ಸದಸ್ಯರ ನಡುವೆ ಯಾವುದೇ ಹೊಂದಾಣಿಕೆ ಇಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಗರೀಬಿ ಕಲ್ಯಾಣ ಯೋಜನೆಯಡಿ ೫ಕೆ.ಜಿ ಅಕ್ಕಿ ವಿತರಿಸುವ ಯೋಜನೆಯನ್ನು ೫ ವರ್ಷದವರಗೆ ಮುಂದುವರೆಸಿರುವುದಕ್ಕೆ ಬಿಜೆಪಿ ಜಿಲ್ಲಾ ಘಟಕ ಪ್ರಧಾನಿ ನರೇಂದ್ರ ಮೋದಿಯವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಪು?ರಾಜ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಮಾಜಿ ತಾ.ಪಂ. ಅಧ್ಯಕ್ಷ ಕನಕ ರಾಜ್ ಅರಸ್ ಮುಖಂಡ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.

District BJP president HC Kalmarudappa press conference

About Author

Leave a Reply

Your email address will not be published. Required fields are marked *

You may have missed