September 19, 2024

ವಿದ್ಯಾರ್ಥಿಗಳು ಮಾನಸಿಕ – ದೈಹಿಕವಾಗಿ ಸದೃಢವಾಗಲು ಕ್ರೀಡಾಕೂಟಗಳು ಸಹಕಾರಿ

0
ರಾಜ್ಯ ಮಟ್ಟದ ಟೆನಿಸ್ ಬಾಲ್ ಪಂದ್ಯಾವಳಿ

ರಾಜ್ಯ ಮಟ್ಟದ ಟೆನಿಸ್ ಬಾಲ್ ಪಂದ್ಯಾವಳಿ

ಚಿಕ್ಕಮಗಳೂರು: ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಲು ಕ್ರೀಡಾಕೂಟಗಳು ಸಹಕಾರಿ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.

ಅವರು ಇಂದು ನಗರದ ನೇತಾಜಿ ಸುಭಾಷ್‌ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ೨೦೨೩-೨೪ ನೇ ಸಾಲಿನ ರಾಜ್ಯ ಮಟ್ಟದ ಟೆನಿಸ್ ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯೆ ಎಷ್ಟು ಮುಖ್ಯವೋ ಅಷ್ಟೇ ಕ್ರೀಡಾ ಚಟುವಟಿಕೆ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸುವುದೂ ಮುಖ್ಯ. ಕೇವಲ ಓದಿಗಾಗಿ ಸೀಮಿತವಾಗದೆ ಓದಿ ಓದಿ ಕೂಚುಬಟ್ಟನಂತೆ ಆಗಬಾರದು ಎಂದು ಕಿವಿ ಮಾತು ಹೇಳಿದರು.

ರಾಜ್ಯ ಮಟ್ಟದ ಈ ಟೆನಿಸ್ ವಾಲೀಬಾಲ್ ಕ್ರೀಡೆ ಹೊಸ ಆಟವಾಗಿದ್ದು, ಚಿಕ್ಕಮಗಳೂರಿನ ಕ್ರೀಡಾಪಟುಗಳು ಇದನ್ನು ನೋಡಿರಲಿಲ್ಲ, ನಾವೂ ಸಹ ಆಡಿರಲಿಲ್ಲ. ಈ ಹೊಸ ಆಟವನ್ನು ಕಾಫಿ ನಾಡಿನ ನಮ್ಮ ಜಿಲ್ಲೆಯಲ್ಲಿ ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದರು.
ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಕಾಫಿ ನಾಡಿನ ಜಿಲ್ಲೆಗೆ ಆಗಮಿಸಿರುವ ಕ್ರೀಡಾಪಟುಗಳು ಈ ರಾಜ್ಯ ಮಟ್ಟದ ಟೆನಿಸ್ ವಾಲೀಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿ, ಇಲ್ಲಿ ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಗೆದ್ದವರಿಗೆ ಅಭಿನಂದನೆ ಸೋತವರಿಗೆ ಮುಂದಿನ ಬಾರಿ ಜಯ ದೊರಕಲಿ ಎಂದು ಶುಭ ಹಾರೈಸಿದರು.

ಕ್ರೀಡಾ ಸ್ಪೂರ್ತಿಯಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳಿಗೆ ತೀರ್ಪುಗಾರರು ಸಮಾನವಾದ ತೀರ್ಪು ನೀಡಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ, ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಪಿ ಉಮಾಮಹೇಶ್ವರಪ್ಪ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಜಿ.ರೇವಣ್ಣ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಎಲ್.ಜೆ ಮಂಜುನಾಥ, ಪ್ರಾಚಾರ್ಯರಾದ ನಾಗರಾಜ್ ರಾವ್ ಕಲ್ಕಟ್ಟೆ, ಚನ್ನಬಸಪ್ಪ, ಜಯಶ್ರೀ, ಥಾಮಸ್, ತಸ್ಲಿಮ, ನಗರಸಭೆ ಸದಸ್ಯರುಗಳಾದ ಮುನೀರ್ ಅಹಮ್ಮದ್, ಶಾದಬ್ ಆಲಂಖಾನ್, ಖಲಂದರ್ ಮತ್ತಿತರರು ಉಪಸ್ಥಿತರಿದ್ದರು.

State Level Tennis Ball Tournament

About Author

Leave a Reply

Your email address will not be published. Required fields are marked *

You may have missed