September 19, 2024

ಏಷಿಯನ್ ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ -ಬೆಳ್ಳಿ ಪದಕ ಪಡೆದ ಅಂಧ ಮಕ್ಕಳಿಗೆ ಸನ್ಮಾನ

0
ಏಷ್ಯನ್ ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು ಬೆಳ್ಳಿ ಪದಕ ಪಡೆದ ವಿದ್ಯಾರ್ಥಿಗಳಿಗೆ ಗೌರವ

ಏಷ್ಯನ್ ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು ಬೆಳ್ಳಿ ಪದಕ ಪಡೆದ ವಿದ್ಯಾರ್ಥಿಗಳಿಗೆ ಗೌರವ

ಚಿಕ್ಕಮಗಳೂರು: ಚೀನಾ ದೇಶದಲ್ಲಿ ನಡೆದ ಏಷಿಯನ್ ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಹಾಗೂ ಬೆಳ್ಳಿ ಪದಕವನ್ನು ಪಡೆದ ಅಂಧ ಮಕ್ಕಳ ಪಾಠಶಾಲೆಯ ವಿದ್ಯಾರ್ಥಿಗಳಿಗೆ ನವೆಂಬರ್ ೧೭ ರಂದು ಕುವೆಂಪು ಕಲಾಮಂದಿರದಲ್ಲಿ ಗೌರವ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಮಂಜುಳಾ ಹುಲ್ಲಹಳ್ಳಿ ತಿಳಿಸಿದರು.

ಅವರು ಈ ಕುರಿತು ನಗರದ ಜೆಪಿ ಕೃಷ್ಣೇಗೌಡರ ನಿವಾಸದಲ್ಲಿ ಚೀನಾ ದೇಶದಲ್ಲಿ ನಡೆದ ಏಷ್ಯನ್ ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು ಬೆಳ್ಳಿ ಪದಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಏಷಿಯನ್ ಪ್ಯಾರಾ ಒಲಂಪಿಕ್‌ನಲ್ಲಿ ಅಂಧ ಮಕ್ಕಳ ಪಾಠಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ರಕ್ಷಿತಾ, ಕುಮಾರಿ ರಾಧ ಬಂಗಾರದ ಪದಕ ಪಡೆದಿದ್ದು, ಆಶಾಕಿರಣ ಅಂಧ ಮಕ್ಕಳ ಪಾಠಶಾಲೆಗೆ ಕೀರ್ತಿ ತಂದಿದ್ದಾರೆ ಎಂದರು.

ಇವರ ಜೊತೆಗೆ ಶರತ್ ಎಂಬ ವಿದ್ಯಾರ್ಥಿ ಬೆಳ್ಳಿ ಪದಕ ಪಡೆದಿದ್ದು, ಕೇಶವಮೂರ್ತಿ, ಹನುಮಂತ್ ಸಹ ಸ್ಪರ್ಧೆ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಅಂದು ಗೌರವ ಅಭಿನಂದನೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

ರಾಜ್ಯದ ಜಿಲ್ಲೆಯ ಈ ೪ ಆಶಾಕಿರಣ ಶಾಲೆಯ ಮಕ್ಕಳು ಭಾಗವಹಿಸಿರುವ ಜೊತೆಗೆ ದೊಡ್ಡ ಸಾಧನೆ ಮಾಡಿರುವುದರ ಹಿಂದೆ ಡಾ. ಜೆ.ಪಿ ಕೃಷ್ಣೇಗೌಡರ ಅಪಾರವಾದ ಪರಿಶ್ರಮವಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಾಧನೆ ಮಾಡಿದ ವಿದ್ಯಾರ್ಥಿಗಳ ಬೆನ್ನೆಲುಬಾಗಿ ನಿಂತ ಶಿಕ್ಷಕರಾದ ರಾಹುಲ್, ತಬರೀಶ್ ಪರಿಶ್ರಮದಿಂದ ಮತ್ತು ತರಬೇತಿ ನೀಡಿ ಕಣ್ಣು ರೆಪ್ಪೆಯಂತೆ ಜತನದಿಂದ ರಕ್ಷಿಸುತ್ತಿದ್ದಾರೆ. ರಾಹುಲ್ ಪತ್ನಿ ಸೌಮ್ಯ ಸಹ ಈ ವಿದ್ಯಾರ್ಥಿಗಳಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಅಭಿನಂದಿಸಿದರು.

ಅಂಧ ಮಕ್ಕಳ ಪಾಠಶಾಲೆಯ ಅಧ್ಯಕ್ಷ ಡಾ.ಜೆ.ಪಿ ಕೃಷ್ಣೇಗೌಡ ಮಾತನಾಡಿ ಅಂಧರ ಬಾಳಿಗೆ ಆಶಾಕಿರಣವಾಗಿರುವ ಈ ನಮ್ಮ ಶಾಲೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ. ಏಷಿಯಾದಲ್ಲಿ ೫೨ ದೇಶಗಳಿವೆ, ಚೀನಾದಲ್ಲಿ ನಡೆದ ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ ಬಹಾಳ ವೈಭವಯುತವಾಗಿ ಶಾಲೆ ವಿದ್ಯಾರ್ಥಿಗಳು ಪ್ರದರ್ಶನ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಈ ೪ ನಮ್ಮ ಶಾಲೆಯ ವಿದ್ಯಾರ್ಥಿಗಳು ಪದಕಗಳನ್ನು ಗೆಲ್ಲುವ ಮೂಲಕ ದೊಡ್ಡ ಸಾಧನೆ ಮಾಡಿದ್ದು, ಏಷಿಯನ್ ಚಾಂಪಿಯನ್ ಆಗಿದ್ದಾರೆ. ಈ ಸಂಬಂಧ ಅಧಿಕಾರಿ ಮಂಜುಳಾ ಅವರು ಅರ್ಥಪೂರ್ಣವಾಗಿ ಪರಿಚಯಿಸಿ ವಿಶ್ಲೇಷಿಸಿದರೆಂದು ಹೇಳಿದರು.

Honoring students who won Gold Medal and Silver Medal in Asian Paralympic Games

About Author

Leave a Reply

Your email address will not be published. Required fields are marked *

You may have missed