September 19, 2024
ಪ್ರೇಮರಾಜ್ ರೋಷನ್ ಸಿಕ್ವೇರ ಸುದ್ದಿಗೋಷ್ಟಿ

ಪ್ರೇಮರಾಜ್ ರೋಷನ್ ಸಿಕ್ವೇರ ಸುದ್ದಿಗೋಷ್ಟಿ

ಚಿಕ್ಕಮಗಳೂರು: ಮಂಗಳೂರು ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್, ಅರಸು ಫ್ರೆಂಡ್ಸ್ ಬಳಗ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಅಳಕೆ ಫ್ರೆಂಡ್ಸ್ ಟ್ರಸ್ಟ್ ವತಿಯಿಂದ ಡಿ.೨೮ರ ಗುರುವಾರ ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ವಿವಾಹ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರೇಮರಾಜ್ ರೋಷನ್ ಸಿಕ್ವೇರ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡಾ, ರಕ್ತದಾನ, ಆರೋಗ್ಯ, ಪರಿಸರ ಸಂರಕ್ಷಣೆ ಸೇರಿದಂತೆ ಅನೇಕ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ ಎಂದ ಅವರು, ಈ ವರ್ಷ ೧೨ ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸುವ ತೀರ್ಮಾನ ಕೈಗೊಳ್ಳಲಾಗಿದ್ದು, ಇದುವರೆಗೂ ಆರು ಜೋಡಿಗಳು ಸಾಮೂಹಿಕ ವಿವಾಹಕ್ಕೆ ನೋಂದಣಿಯಾಗಿವೆ. ಸಾಮೂಹಿಕ ವಿವಾಹ ದಲ್ಲಿ ವಿವಾಹವಾಗುವರು ಹೆಸರು ನೋಂದಾಯಿಸಿಕೊಳ್ಳಬೇಕು. ಡಿ.೧೫ ನೋಂದಣಿಗೆ ಕೊನೆಯ ದಿನವಾಗಿದೆ ಎಂದರು.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧುವರರಿಗೆ ಒಂದು ಪವನ್ ಚಿನ್ನದ ಕರಿಮಣಿ, ಉಡುಪು ನೀಡಲಾಗುವುದು ಹಾಗೂ ಇದೇ ವೇಳೆ ಮನೆ ಇಲ್ಲದ ಕಡು ಬಡವರಿಗೆ ನಿರ್ಮಿಸಿರುವ ನೂತನ ಮನೆಗಳನ್ನು ಬಡ ಕುಟುಂಬಗಳ ಸದಸ್ಯರಿಗೆ ಹಸ್ತಾಂತರಿಸಲಾಗುವುದು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಪಂತ್ಯ ಜೀವನಕ್ಕೆ ಕಾಲಿಡಲು ಭಯಸುವ ಆಸಕ್ತರು ೯೮೪೪೦೩೧೬೩೬ ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದಾಗಿದೆ ಹೇಳಿದರು.

ಟ್ರಸ್ಟ್‌ನಿಂದ ಕೋವಿಡ್ ಸಂದರ್ಭದಲ್ಲಿ ೮೫ಕ್ಕೂ ಹೆಚ್ಚು ಶವ ಸಂಸ್ಕಾರ ಮಾಡಲಾಗಿದೆ. ೫೦೦ ಜನರನ್ನು ನೇತ್ರದಾನಕ್ಕೆ ನೋದಂಣಿ ಮಾಡಿಸಲಾಗಿದೆ. ಮನೆ ಇಲ್ಲದ ೩೪ ಜನರಿಗೆ ಮನೆ ನಿರ್ಮಿಸಿಕೊಡಲಾಗಿದೆ. ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಗಳಿಗೆ ಸಹಾಯಹಸ್ತ ನೀಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಯೋಗೀಶ್ ರಾಜ್ ಅರಸ್, ತುಡಕೂರು ಮಂಜು ಇದ್ದರು.

Mass wedding in Mangalore on December 28

About Author

Leave a Reply

Your email address will not be published. Required fields are marked *

You may have missed