September 19, 2024

ಆದಿವಾಸಿ ಸಮುದಾಯದಲ್ಲಿ ಸಾಂಸ್ಕೃತಿಕ ಪುನರುಜ್ಜೀವನ ಮತ್ತು ಧಾರ್ಮಿಕ ಬದಲಾವಣೆಗೆ ಬಿರ್ಸಾಮುಂಡಾ ಕೊಡುಗೆ ಮಹತ್ವ

0
ಭಗವಾನ್ ಶ್ರೀ ಬಿರ್ಸಾಮುಂಡಾ ಅವರ ಜಯಂತಿ ಉದ್ಘಾಟನೆ

ಭಗವಾನ್ ಶ್ರೀ ಬಿರ್ಸಾಮುಂಡಾ ಅವರ ಜಯಂತಿ ಉದ್ಘಾಟನೆ

ಚಿಕ್ಕಮಗಳೂರು: ಆದಿವಾಸಿ ಸಮುದಾಯದಲ್ಲಿ ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ಪುನರುಜ್ಜೀವನ ಮತ್ತು ಧಾರ್ಮಿಕ ಬದಲಾವಣೆಗಳನ್ನು ತರಲು ಬಿರ್ಸಾಮುಂಡಾ ಅವರ ಕೊಡುಗೆ ಮಹತ್ವ ಪೂರ್ಣವಾದದ್ದು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದ್ದಾರೆ.

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗವಾನ್ ಶ್ರೀ ಬಿರ್ಸಾಮುಂಡಾ ಅವರ ಜಯಂತಿ ಹಾಗೂ ಜನಜಾತಿಯ ಗೌರವ್ ದಿವಸ್ ಆಚರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು.

ಆದಿವಾಸಿಗಳ ಆಚಾರ ವಿಚಾರ ಮತ್ತು ಅವರ ಸಂಕೇತಗಳನ್ನು ಉಪಯೋಗಿಸಿಕೊಂಡು ಅವರಲ್ಲಿ ಸ್ವಾಭಿಮಾನ ಮೂಡುವಂತೆ ಮಾಡಿದ ಇವರು ಬ್ರಿಟಿಷ್‌ರ ವಿರುದ್ಧ ಹೋರಾಟಕ್ಕೆ ಆದಿವಾಸಿಗಳಲ್ಲಿ ಹೊಸ ಚೈತನ್ಯ್ ಮೂಡಿಸಿ ಆದಿವಾಸಿಗಳ ಸಮುದಾಯಕ್ಕೆ ತಾನೇ ದೇವರೆಂದು ಘೋಷಿಸಿಕೊಂಡು ಹೊಸ ಧರ್ಮದಲ್ಲಿ ಪ್ರಕೃತಿಯೇ ದೇವರೆಂದು ಸಮಾನ ಸಮಾಜವೇ ನೀತಿಯೆಂದು ಹೇಳುವುದರ ಜೊತೆಗೆ ಸುಳ್ಳು, ವ್ಯಭಿಚಾರ, ಕಳ್ಳತನ, ಭಿಕ್ಷಾಟನೆ ಕಪಟತನಕ್ಕೆ ಅವಕಾಶವಿಲ್ಲವೆಂದು ಹೇಳಿದ ಇವರು ಬಿರ್ಸಾಮುಂಡಾರವರ ಮುಂದಿನ ಈ ಹೊಸಧರ್ಮದ ಎಲ್ಲ ನೀತಿಗಳು ಆದಿವಾಸಿಗಳ ಸಾಂಸ್ಕೃತಿಯೊಂದಿಗೆ ಅವರ ಸಮಸ್ಯೆಗಳಿಗೆ ಪರಿಹರಿಸುತ್ತಾ ಹೆಚ್ಚಿನ ಜನಪ್ರಿಯತೆಯೊಂದಿಗೆ ದೇವಮಾನವನಾಗಿ ಬುಡಕಟ್ಟು ಸಮುದಾಯದ ಆರಾಧ್ಯ ದೇವರಾಗಿ ಹಲವಾರು ಕ್ರಾಂತಿಕಾರಿ ಸಾಮಾಜಿಕ ಕೆಲಸಗಳನ್ನು ಮಾಡಿದರು.

ಬ್ರಿಟಿಷರು ಮಾತ್ರವಲ್ಲ ಅವರೊಂದಿಗೆ ಕೈ ಜೋಡಿಸಿದ್ದ ಲೇವಾದೇವಿಗಾರರು, ಭೂ ಮಾಲೀಕರು, ಗುತ್ತಿಗೆದಾರರಿಗೆ, ಬಿರ್ಸಾನ ದಾಳಿಗೆ ಗುರಿಯಾಗಿದ್ದರು. ಬಿರ್ಸಾಮುಂಡಾನಿಗೆ ೧೩ ವರ್ಷಗಳಲ್ಲಿಯೇ ಹಲವಾರು ಹೋರಾಟಗಳನ್ನು ಮಾಡಿದ್ದರು. ಬ್ರಿಟಿಷರು ಅಪಾರ ಸಂಸತ್ತಿನ ಬೀಡಾಗಿದ್ದ ಭಾರತ ಮಧ್ಯ ಭಾಗದಲ್ಲಿದ್ದ ಕಾಡುಗಳ ಮೇಲೆ ತಮ್ಮ ಅಧಿಕಾರ ಸ್ಥಾಪಿಸಲು ಹೊರಟಿದ್ದರು ಅದನ್ನು ವಿರೋಧಿಸಿ ಆ ಕಾಡುಗಳಲ್ಲಿ ವಾಸಿಸುತ್ತಿದ್ದ ಆದಿವಾಸಿಗಳಿಗೆ ಸೇರಿದ್ದು ಎಂಬುದರ ಹೋರಾಟ ಮಾಡುತ್ತಿದ್ದ ಅವರು ತನ್ನ ಸುಮಾರು ಇಪ್ಪತ್ತೈದು ವರ್ಷಗಳಲ್ಲಿ ಮರಣ ಹೊಂದಿದರು ಎಂದ ಅವರು ಅವರ ಆದರ್ಶಗಳು ಯುವ ಜನರಿಗೆ ಮಾದರಿ ಚಿಕ್ಕ ವಯಸ್ಸಿನಲ್ಲೇ ಹೋರಾಟ ಮಾಡಿ ದೇಶಕ್ಕಾಗಿ ಮಡಿದ ಇವರು ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಅನೇಕ ಹಿರಿಯರು ಹಾಕಿಕೊಟ್ಟಿರುವ ಸಂದೇಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಅವರ ಆದರ್ಶಗಳು ಎಂದೆಂದಿಗೂ ಮರೆಯಬಾರದು ಎಂದ ಅವರು ಬುಡಕಟ್ಟು ಜನರ ಸಮಸ್ಯೆಗಳನ್ನು ಹಂತಹಂತವಾಗಿ ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸುವುದಾಗಿ ಹೇಳಿದರು.

ಬುಡಕಟ್ಟಿನ ಕೃಷಿಕರ ಸಂಘದ ವಿಠ್ಠಲ್ ಬಿರ್ಸಾಮುಂಡಾ ಅವರ ಜೀವನ ಕುರಿತು ಮಾತನಾಡಿ ಬಿರ್ಸಾಮುಂಡಾ ಅವರ ಜಯಂತಿ ಕಾರ್ಯಕ್ರಮಗಳಲ್ಲಿ ಅವರ ಆಚಾರ ವಿಚಾರಗಳನ್ನು ಒಂದು ಸಮುದಾಯಕ್ಕೆ ಸೀಮಿತವಾಗದೇ ಸರ್ವ ಜನಾಂಗಕ್ಕೆ ಅವರ ಚಿಂತನೆಗಳು ಆದರ್ಶಗಳು ತಿಳಿಸಬೇಕು ಅವರ ಸರ್ವಕಾಲಿಕ ಬದುಕು ಎಲ್ಲರಿಗೂ ಮಾದರಿಯಾಗಿದೆ ಸರ್ಕಾರಗಳು ಬುಡಕಟ್ಟಿನ ಜನರ ಸಾಮಾಜಿಕ ನ್ಯಾಯವನ್ನು ಹೆಚ್ಚು ಮಾಡಬೇಕು ಎಂದರು.

ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ್, ಸಮುದಾಯದ ಮುಖಂಡ ಕೆ.ಟಿ. ರಾಧಕೃಷ್ಣ ಅವರುಗಳು ಸಮಾರಂಭದಲ್ಲಿ ಮಾತನಾಡಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಬಿ. ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ, ಆದಿವಾಸಿ ರಕ್ಷಣಾ ಪರಿಷತ್ ಕಾರ್ಯದರ್ಶಿ, ರಾಜಮ್ಮ, ಆದಿವಾಸಿ ಪರಿಷತ್ ಜಿಲ್ಲಾ ಅಧ್ಯಕ್ಷ ರಾಜೇಶ್, ವಿವಿಧ ಸಂಘಟನೆಗಳು ಹಾಗೂ ಸಮುದಾಯದ ಮುಖಂಡರುಗಳಾದ ಶಂಕರ್, ಮರಿಯಪ್ಪ, ಸೀತಾಮ್ಮ, ಗೋಪಾಲಕೃಷ್ಣ ಮತ್ತಿತರರು ವೇದಿಕೆಯಲ್ಲಿದ್ದರು.

ಯೋಜನಾ ಸಮನ್ವಯಾಧಿಕಾರಿ ಹೆಚ್.ಪಿ. ಭಾಗೀರಥಿ ಸ್ವಾಗತಿಸಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಸೋಮಶೇಖರ್ ವಂದಿಸಿದರು.

Jayanti of Lord Sri Birsamunda

About Author

Leave a Reply

Your email address will not be published. Required fields are marked *

You may have missed