September 19, 2024

Teacher Eligibility Test: ಶಿಕ್ಷಕರ ಆರ್ಹತಾ ಪರೀಕ್ಷೆಗೆ 212 ಅಭ್ಯರ್ಥಿಗಳು ಗೈರು

0

ಚಿಕ್ಕಮಗಳೂರು: ಶಿಕ್ಷಕರ ಆರ್ಹತಾ ಪರೀಕ್ಷೆಗೆ ೧೫೦೭ ಅಭ್ಯರ್ಥಿಗಳು ಹಾಜರಾದರೇ ೨೧೨ ಅಭ್ಯರ್ಥಿಗಳು ಗೈರು ಹಾಜರಾದರು. ಬಸ ವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಲೆನಾಡು ವಿದ್ಯಾಸಂಸ್ಥೆ, ವಿಜಯಪುರ ಜೆವಿಎಸ್ ಶಾಲೆ, ಸಂತ ಜೋಸೆಫ್ ಶಾಲೆ, ಬೇಲೂರು ರಸ್ತೆಯಲ್ಲಿರುವ ಪದವಿ ಪೂರ್ವ ಕಾಲೇಜು, ಟಿಎಂಎಸ್ ಶಾಲೆ ಪರೀಕ್ಷ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

ಪರೀಕ್ಷೆ ಹಿನ್ನಲೆಯಲ್ಲಿ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆಯನ್ನು ವಿಧಿಸಲಾಗಿತ್ತು. ಅಭ್ಯರ್ಥಿಗಳನ್ನು ತಪಾಸಣೆಗೊಳಪಡಿಸಿ ಪರೀಕ್ಷ ಕೇಂದ್ರದೊಳಗೆ ಬಿಡಲಾಯಿತು. ಬಸವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ೨೬೦ ಅಭ್ಯರ್ಥಿಗಳು ಹಾಜ ರಾಗಿದ್ದು, ೨೭ ಅಭ್ಯರ್ಥಿಗಳು ಗೈರು ಹಾಜರಾದರು. ಎಂ.ಇಎಸ್ ಕಾಲೇಜು ಪರೀಕ್ಷ ಕೇಂದ್ರದಲ್ಲಿ ೨೫೪ ಅಭ್ಯರ್ಥಿಗಳು ಹಾಜರಾಗಿದ್ದು, ೩೪ ಅರ್ಭರ್ಥಿಗಳು ಗೈರು ಹಾಜರಾದರು.

ವಿಜಯಪುರ ಜೆವಿಎಸ್ ಶಾಲೆ ಪರೀಕ್ಷ ಕೇಂದ್ರದಲ್ಲಿ ೨೫೭ ಅಭ್ಯರ್ಥಿಗಳು ಹಾಜರಾಗಿದ್ದು, ೩೦ ಅಭ್ಯರ್ಥಿಗಳು ಗೈರು ಹಾಜರಾದರು. ಸಂತಜೋಸೆಫ್ ಬಾಲಕಿರ ಪ್ರೌಢಶಾಲೆ ಪರೀಕ್ಷ ಕೇಂದ್ರದಲ್ಲಿ ೨೬೦ ಅಭ್ಯರ್ಥಿ ಗಳು ಪರೀಕ್ಷೆ ಬರೆದರೇ, ೨೭ ಅಭ್ಯರ್ಥಿಗಳು ಪರೀಕ್ಷೆಯಿಂದ ದೂರ ಉಳಿದರು. ಬೇಲೂರು ರಸ್ತೆಯ ಪದವಿ ಪೂರ್ವ ಕಾಲೇಜು ಪರೀಕ್ಷ ಕೇಂದ್ರದಲ್ಲಿ ೨೩೪ ಪರೀಕ್ಷಾರ್ಥಿಗಳು ಪರೀಕ್ಷೆ ಬರೆದರೇ, ೫೩ ಅಭ್ಯರ್ಥಿಗಳು ಗೈರು ಹಾಜರಾದರು. ಟಿಎಂಎಸ್ ಕಾಲೇಜು ಪರೀಕ್ಷ ಕೇಂದ್ರದಲ್ಲಿ ೨೪೩ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರು. ೪೧ ಅಭ್ಯರ್ಥಿಗಳು ಗೈರಾದರು.

ಆನ್‌ಲೈನ್ ಎಡವಟ್ಟಿನಿಂದ ಕೆಲವು ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಯಿಂದ ವಂಚಿತರಾದರು. ಆನ್‌ಲೈನ್‌ನಲ್ಲಿ ಎರಡು ಬಾರೀ ಬೇರೆ ಬೇರೆ ಪರೀಕ್ಷ ಕೇಂದ್ರಗಳನ್ನು ತೋರಿಸಿದ್ದು, ಇಂದರಿಂದ ಅಭ್ಯರ್ಥಿಗಳು ಗೊಂದಲಕ್ಕೆ ಒಳಗಾದರೂ. ಇಲ್ಲಸಲ್ಲದ ಸಬೂಬು ಹೇಳಿ ಅಭ್ಯರ್ಥಿಗಳನ್ನು ಪರೀಕ್ಷ ಕೇಂದ್ರದ ಒಳ ಪ್ರವೇಶವನ್ನು ನಿರಾಕರಿಸಲಾಯಿತು.

About Author

Leave a Reply

Your email address will not be published. Required fields are marked *

You may have missed