September 19, 2024

ತಾಲೂಕು ಬರಪೀಡಿತ ಪ್ರದೇಶ ಘೋಷಿಸಲು ಆಗ್ರಹಿಸಿ ರೈತಸಂಘ ಪ್ರತಿಭಟನೆ

0
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಶಾಖೆಯ ಸುದ್ದಿಗೋಷ್ಠಿ

ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಶಾಖೆಯ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಬರ ಅಧ್ಯಯನ ತಂಡ ಚಿಕ್ಕಮಗಳೂರು ತಾಲೂಕಿನ ವಾಸ್ತವ ಸ್ಥಿತಿ ಅಧ್ಯಯನ ಮಾಡಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಶಾಖೆ ಡಿ.೧೩ರಂದು ಬುಧವಾರ ಇಲ್ಲಿನ ತಾಲೂಕು ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲು ನಿರ್ಧರಿಸಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ.ಬಿ ಚಂದ್ರಶೇಖರ್ ಚಿಕ್ಕಮಗಳೂರು ತಾಲೂಕಿನ ಅಂಬಳೆ, ಲಕ್ಯಾ, ಸಕ್ರೆಪಟ್ಟಣ ಹೋಬಳಿಗಳಲ್ಲಿ ತೀವ್ರ ಬರಗಾಲವಿದ್ದರು ಸರಿಯಾಗಿ ರೈತರ ಜಮೀನುಗಳ ಬಳಿ ಹೋಗಿ ಸಮೀಕ್ಷೆ ಸರ್ವೆಯನ್ನು ಮಾಡದಿರುವುದೇ ಈ ತಾಲೂಕು ಬರ ಪಟ್ಟಿಯಿಂದ ಹೊರಗುಳಿಯಲು ಕಾರಣ ಎಂದು ದೂರಿದರು.

ಜಿಲ್ಲೆಯ ೯ ತಾಲೂಕುಗಳಲ್ಲಿ ಈಗಾಗಲೆ ೮ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಚಿಕ್ಕಮಗಳೂರು ತಾಲೂಕನ್ನು ಶಾಸಕ ಎಚ್.ಡಿ ತಮ್ಮಯ್ಯ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಕೃಷಿ ಸಚಿವರಿಗೆ ಮನವಿ ನೀಡಿ ಸದನದಲ್ಲಿ ವಿ?ಯ ಪ್ರಸ್ತಾಪಿಸಿ ಪರಿಹಾರದ ಹಣವನ್ನು ಮಂಜೂರು ಮಾಡುವಂತೆ ಆಗ್ರಹಿಸಿರುವುದನ್ನು ಸ್ವಾಗತಿಸಿದರು.

ತಾಲೂಕಿನ ಪರಿಸ್ಥಿತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಒತ್ತಾಯಿಸಿದ ಅವರು ಇದರಿಂದ ಬೆಳೆ ನ?ವಾಗಿರುವ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಲು ಮುಂದಾಗಬೇಕು ಹಾಗೂ ರೈತರ ಸಂಪೂರ್ಣ ಸಾಲಮನ್ನಾ ಮಾಡುವಂತೆ ಆಗ್ರಹಿಸಿದರು.

ಈ ವ? ಮುಂಗಾರು ಹಂಗಾಮಿನಿಂದಲೂ ಜಿಲ್ಲೆ ಮಳೆಯ ಅಭಾವ ಎದುರಿಸುತ್ತಿದೆ ಮಲೆನಾಡು ಬಯಲು ಸೀಮೆ ಎರಡು ಭಾಗದಲ್ಲಿ ತೀವ್ರ ಬರದ ಛಾಯೆ ಆವರಿಸಿದೆ. ನದಿ ಮೂಲಗಳು ಬತ್ತುತ್ತಿವೆ ಕೆರೆಕಟ್ಟೆಗಳು ಖಾಲಿಯಾಗುತ್ತಿವೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಆಹಾಕಾರ ಪಡುವ ಪರಿಸ್ಥಿತಿ ಬಂದೊದಗುತ್ತಿದೆ ಎಂದು ಹೇಳಿದರು.

ರೈತರ ಯಾವುದೆ ಬೆಳೆಗಳು ಭೂಮಿ ಬಿಟ್ಟು ಮೇಲೆ ಬಂದಿಲ್ಲ ಭತ್ತ ಸಸಿ ಮಡಿಗಳಲ್ಲೆ ಒಣಗಿ ನಿಂತಿವೆ ಬಿತ್ತಿದ ಭತ್ತ ತೆನೆಯೊಡೆಯದೆ ಬೋದು ಆಗಿದೆ. ರಾಗಿ, ಜೋಳ ತರಕಾರಿಗಳು ಯಾವುದೇ ಬೆಳೆಗಳೂ ರೈತರ ಕೈಗೆ ಬಂದಿಲ್ಲ ಭೂಮಿಗೆ ಹಾಕಿದ ಬೀಜ ಗೊಬ್ಬರ ಔ?ಧಿ ಕಳೆ ಆಳು ಕಾಳುಗಳ ಖರ್ಚೆಲ್ಲ ರೈತರ ತಲೆ ಮೇಲೆ ಬಂದು ಸಾಲದ ಹೊರೆ ರೈತರಿಗೆ ದುಪ್ಪಟ್ಟಾಗಿದೆ ಎಂದರು.

ಜಾನುವಾರುಗಳನ್ನು ಸಾಕಲಾಗದೆ ಮಾರುವ ಪರಿಸ್ಥಿತಿ ಬಂದಿದೆ ಕೊಳವೆ ಬಾವಿಗಳ ಅಂತರ್ಜಲದ ಕೊರತೆ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವ ಸಂದರ್ಭದಲ್ಲಿ ಚಿಕ್ಕಮಗಳೂರು ತಾಲೂಕನ್ನು ಬಿಟ್ಟು ಉಳಿದ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಚಿಕ್ಕಮಗಳೂರು ತಾಲೂಕಿನ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿರುವುದನ್ನು ಖಂಡಿಸಿದರು.

ಚಿಕ್ಕಮಗಳೂರು ತಾಲೂಕಿನ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆಗಳು ಸಹ ಚಿಕ್ಕಮಗಳೂರಿನ ಬರ ಪರಿಸ್ಥಿತಿ ಬಗ್ಗೆ ವಾಸ್ತವವನ್ನು ಮರೆಮಾಚಿ ಕಚೇರಿಯಲ್ಲೆ ಕುಳಿತು ತಮ್ಮ ಮೂಗಿನ ನೇರಕ್ಕೆ ವರದಿ ಸಲ್ಲಿಸಿರುವುದು ಸಹ ಚಿಕ್ಕಮಗಳೂರು ತಾಲೂಕನ್ನ ಬರಗಾಲ ಘೋ?ಣೆಯಿಂದ ಹೊರಗಿಡಲು ಕಾರಣವಾಗಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಗೌರವಾಧ್ಯಕ್ಷ ಕೆ.ಕೆ ಕೃ?ಗೌಡ ಮುಖಂಡರಾದ ಬಸವರಾಜ್, ಮಲ್ಲುಂಡಪ್ಪ, ಶಿವಣ್ಣ, ಲೋಕೇಶ್ ಮತ್ತಿತರರಿದ್ದರು.

Farmers union protest demanding declaration of taluk drought prone area

About Author

Leave a Reply

Your email address will not be published. Required fields are marked *

You may have missed