September 19, 2024

ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ಸ್ಕ್ಯಾನಿಂಗ್ ಸೆಂಟರ್, ಖಾಸಗಿ ಆಸ್ಪತ್ರೆ, ಕ್ಲಿನಿಕ್ ಲ್ಯಾಬ್‌ಗಳ ಮೇಲೆ ದಾಳಿ

0
ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ಸ್ಕ್ಯಾನಿಂಗ್ ಸೆಂಟರ್, ಖಾಸಗಿ ಆಸ್ಪತ್ರೆ, ಕ್ಲಿನಿಕ್ ಲ್ಯಾಬ್‌ಗಳ ಮೇಲೆ ದಾಳಿ

ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ಸ್ಕ್ಯಾನಿಂಗ್ ಸೆಂಟರ್, ಖಾಸಗಿ ಆಸ್ಪತ್ರೆ, ಕ್ಲಿನಿಕ್ ಲ್ಯಾಬ್‌ಗಳ ಮೇಲೆ ದಾಳಿ

ಚಿಕ್ಕಮಗಳೂರು: ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚದ ದರ ಪಟ್ಟಿ ಹಾಕಬೇಕು ಹಾಗೂ ಸರ್ಕಾರದ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಅಶ್ವಥ್ ಬಾಬು ಸೂಚನೆ ನೀಡಿದರು.

ಅವರು ಇಂದು ನಗರದ ಸೆಕ್ಯೂರ್ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಗರದ ಸೆಕ್ಯೂರ್ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರ ಹಾಗೂ ಕೆ.ಪಿ.ಎಂ.ಇ ದಾಖಲೆಗಳ ಬಗ್ಗೆ ತಪಾಸಣೆ ನಡೆಸಿದರು.

ಜಿಲ್ಲೆಯ ಎಲ್ಲಾ ಸ್ಕ್ಯಾನಿಂಗ್ ಸೆಂಟರ್, ಖಾಸಗಿ ಆಸ್ಪತ್ರೆ, ಕ್ಲಿನಿಕ್ ಲ್ಯಾಬ್‌ಗಳ ಮೇಲೆ ದಾಳಿ ನಡೆಸಲಾಗುತ್ತಿದೆ, ಖಾಸಗಿ ಆಸ್ಪತ್ರೆಗಳಲ್ಲಿ ಅಕ್ರಮ ಗರ್ಭಪಾತ, ಭ್ರೂಣ ಲಿಂಗ ಪತ್ತೆ, ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಉಲ್ಲಂಘನೆ ಹಾಗೂ ಕೆ.ಪಿ.ಎಂ.ಇ ಪರವಾನಿಗೆ ಇಲ್ಲದೆ ಅನದಿಕೃತವಾಗಿ ಆಸ್ಪತ್ರೆ ಕ್ಲಿನಿಕ್ ಹಾಗೂ ಲ್ಯಾಬ್‌ಗಳನ್ನು ನಡೆಸುತ್ತಿರುವವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಣ್ಣಪುಟ್ಟ ನ್ಯೂನತೆಗಳಿದ್ದು ಅದನ್ನು ಸರಿಪಡಿಸಿಕೊಳಲು ಸೂಚನೆ ನೀಡಿದರು. ಸರ್ಕಾರದ ನಿಯಮಗಳನ್ನು ಪಾಲಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಆಸ್ಪತ್ರೆಗಳನ್ನು ಮುಚ್ಚಿಸಲಾಗುವುದೆಂದು ಎಚ್ಚರಿಸಿದರು.

ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ನಮ್ಮ ಇಲಾಖೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಆ ಸಂದರ್ಭದಲ್ಲಿ ಹೆರಿಗೆ ಆಸ್ಪತ್ರೆಗಳು ನೋಂದಣಿ ಆಗದ ಚಿಕ್ಕ ಚಿಕ್ಕ ಕ್ಲಿನಿಕ್‌ಗಳಿಗೂ ಭೇಟಿ ನೀಡಿ ನಿಯಮ ಬಾಹಿರವಾಗಿದ್ದರೆ ಅಂತಹ ಆಸ್ಪತ್ರೆಗಳಿಗೆ ಬೀಗ ಹಾಕುವುದಾಗಿ ಹೇಳಿದರು.

ಆಸ್ಪತ್ರೆಗಳಲ್ಲಿ ಬ್ರೂಣಲಿಂಗ ಪತ್ತೆ, ಅನಾವಶ್ಯಕವಾಗಿ ಸಿಜೇರಿಯನ್ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದಾರ ತಾಯಿ ಮರಣಗಳಾಗುತ್ತಿವೆಯೇ, ಮಗು ಮರಣ, ಆಸ್ಪತ್ರೆಗಳ ಸ್ವಚ್ಛತೆ, ಇಲ್ಲಿ ವಿಧಿಸುತ್ತಿರುವ ಚಿಕಿತ್ಸಾ ವೆಚ್ಚದ ದರ ಇವೆಲ್ಲದರ ಬಗ್ಗೆಯೂ ಕೂಲಂಕುಶವಾಗಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಕುಟುಂಬ ಕಲ್ಯಾಣಾಧಿಕಾರಿ ಡಾ|| ಶಶಿಕಲಾ ಮಾತನಾಡಿ ಇಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಿಗೂ ಭೇಟಿ ನೀಡಿ ನ್ಯೂನತೆಗಳ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲು ಸೂಚನೆ ನೀಡಿದ್ದೇವೆ ಎಂದರು.

ಈ ಪರಿಶೀಲನೆ ಅವಧಿಯಲ್ಲಿ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ತೀವ್ರ ನಿಗಾ ಇರುವಂತೆ ಸೂಚನೆ ನೀಡುತ್ತೇವೆ ಇದರಿಂದ ಭ್ರೂಣಲಿಂಗ ಪತ್ತೆ ಆಗಿರುವ ಬಗ್ಗೆ ನೋಂದಣಿ ಮಾಡಿ ಸ್ಕ್ಯಾನಿಂಗ್ ಮಿ?ನ್ ಅನ್ನು ಕ್ರಾಸ್ ಚೆಕ್ ಮಾಡುತ್ತೇವೆ ಕೆಲವು ದಾಖಲೆಗಳನ್ನು ಅವರು ನಿರ್ವಹಣೆ ಮಾಡದಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸುತ್ತೇವೆಂದು ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚದ ದರ ಪಟ್ಟಿ ಪ್ರಕಟಿಸಬೇಕೆಂದು ಸರ್ಕಾರದ ನಿಯಮ ಇದ್ದು ಈ ಬಗ್ಗೆಯೂ ಕ್ರಮ ವಹಿಸುತ್ತೇವೆ ದರಪಟ್ಟಿ ಪ್ರಕಟಿಸದ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಆರೋಗ್ಯ ಇಲಾಖೆಯ ಸೂಚನೆಗಳನ್ನು ಸರಿಯಾಗಿ ಪಾಲಿಸದ ಆಸ್ಪತ್ರೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ|| ಸೀಮಾ ಮಾತನಾಡಿ ಇಂದು ಸರ್ಕಾರದ ಆದೇಶದಂತೆ ಆರೋಗ್ಯ ಇಲಾಖೆ ತಂಡ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಅದರ ನೋಂದಣಿ ದಾಖಲಾತಿ ಹೆರಿಗೆಗೆ ಸಂಬಂಧಿಸಿದ ಗರ್ಭಪಾತ ನಿಯಮಾನುಸಾರವಾಗಿದೆಯೇ? ಅಥವಾ ನಿಯಮ ಬಾಹಿರವಾಗಿದೆಯೇ, ಎಂಬ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಈ ಕಾರ್ಯಾಚರಣೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಲಿದ್ದು ಸಂಬಂಧಿಸಿದ ವರದಿಯನ್ನು ಸರ್ಕಾರಕ್ಕೆ ರವಾನಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಭರತ್‌ಕುಮಾರ್, ಪಿ.ಸಿ ಮತ್ತು ಪಿ.ಎಸ್.ಡಿ.ಟಿ ವಿಷಯ ನಿರ್ವಾಹಕರಾದ ಹರ್ಷ ಅರಸ್ ಉಪಸ್ಥಿತರಿದ್ದರು.

Scanning center raided by district health officials

About Author

Leave a Reply

Your email address will not be published. Required fields are marked *

You may have missed