September 19, 2024
ಕುಂಬರ ಬೀದಿಯಲ್ಲಿ ಸುಮಾರು ೧.೫೦ ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆ

ಕುಂಬರ ಬೀದಿಯಲ್ಲಿ ಸುಮಾರು ೧.೫೦ ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆ

ಚಿಕ್ಕಮಗಳೂರು: ನಗರ ಸಭೆ ವತಿಯಿಂದ ಕಳೆದ ೨೨ ತಿಂಗಳುಗಳಿಂದ ನಗರದಲ್ಲಿ ನಿರಂತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.

ಅವರು ಇಂದು ನಗರದ ಅವರದೆ ಆದ ಮತ ಕ್ಷೇತ್ರವಾದ ಕುಂಬರ ಬೀದಿಯಲ್ಲಿ ಸುಮಾರು ೧.೫೦ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ನಗರಸಭೆಯಿಂದ ಸುಮಾರು ೧.೫೦ ಕೋಟಿ ರೂ. ವೆಚ್ಚದಲ್ಲಿ ಈ ನಮ್ಮ ವಾರ್ಡ್‌ಅನ್ನು ಅಭಿವೃದ್ಧಿ ಪಡಿಸಲು ಹಣವನ್ನು ಮೀಸಲಿಟ್ಟಿದ್ದು ಸಧ್ಯದಲೇ ಕಾಮಗಾರಿಗಳು ಆರಂಭವಾಗಿ ಇನ್ನೂ ೩ ತಿಂಗಳಲ್ಲಿ ಕಾಮಗಾರಿಗಳು ಮುಕ್ತಾಯಗೊಂಡು ನಗರದಲ್ಲೇ ಮಾದರಿ ವಾರ್ಡ್‌ನ್ನಾಗಿಸಲು ನಿರ್ಧರಿಸಲಾಗಿದೆ ಎಂದರು.

ಮೊದಲಿಗೆ ಅಂಚೆ ಲಿಂಗಣ್ಣ ಬೀದಿಯ ಸ್ಲಾಬ್ ನಿರ್ಮಾಣ ಮಾಡುವುದರ ಜೊತೆಗೆ ಕುಂಬಾರ ಬೀದಿ ಮತ್ತು ಮೊದಲನೆ, ಎರಡನೇ ತಿರುವಿನಲ್ಲಿರುವ ಅಡ್ಡ ರಸ್ತೆಗಳು ಸೇರಿದಂತೆ ಎಲ್ಲಾ ಚರಂಡಿಗಳನ್ನು ಅಭಿವೃದ್ಧಿ ಪಡಿಸಲಾಗುವುದು ಕವರಿಂಗ್ ಸ್ಲಾಬ್‌ಗಳನ್ನು ಅಳವಡಿಸಲು ಸೂಚಿಸಲಾಗಿದೆ ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಈ ವಾರ್ಡ್ ಮಾದರಿಯಾಗಿ ಪರಿವರ್ತನೆಗೊಳ್ಳಲಿದೆ ಎಂದು ಹೇಳಿದರು.

ಇದೇ ವಾರ್ಡ್‌ನಲ್ಲಿ ಅಗತ್ಯವಿರುವ ಇಂಟರ್ ಲಾಕ್ ಅಳವಡಿಸುವ ಕಾರ್ಯವನ್ನು ಪ್ರಾರಂಭಿಸಲಾಗುವುದು. ಅಂಗನವಾಡಿ, ಕಾಂಕ್ರೀಟ್ ರಸ್ತೆ ಮತ್ತು ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ನಗರಸಭೆ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಮಾಹಿತಿ ನೀಡಿದರು.

ಅವಿಶ್ವಾಸ ನಿರ್ಣಯ ಮಂಡನೆ ಸಂದರ್ಭದಲ್ಲಿ ಅಧ್ಯಕ್ಷರ ವಾರ್ಡ್ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದು ಕಡೆಗಣಿಸಲಾಗಿದೆ ಎಂಬ ಆರೋಪಗಳಿಗೆ ಉತ್ತರವಾಗಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಕಾಮಗಾರಿಗಳು ಅಂತ್ಯಗೊಂಡ ಬಳಿಕ ಅಭಿವೃದ್ಧಿಯ ವಾರ್ಡ್‌ನ್ನಾಗಿ ಪರಿವರ್ತಿಸಿ ಉತ್ತರಿಸಲಾಗುವುದೆಂದರು.

ಇದೇ ಸಂದರ್ಭದಲ್ಲಿ ನಗರ ಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಲೋಕೇಶ್, ಇಂಜಿನಿಯರ್ ರಶ್ಮಿ, ಈ ವಾರ್ಡ್‌ನ ಪ್ರಮುಖರಾದ ಏಕಾಂತರಾಮ್, ಚೇತನ್, ಶ್ರೀಪತಿ ನಾಯಕ್, ಸುನೀಲ್, ಭೂತ್‌ಮಟ್ಟದ ಅಧ್ಯಕ್ಷ ರಾಖಿ, ಜಗದೀಶ್, ಕುಮಾರ್, ಅಶ್ವಿನ್, ನವೀನ್, ತೀರ್ಥೇಶ್ ಮತ್ತಿತ್ತರರು ಉಪಸ್ಥಿತರಿದ್ದರು.

1.50 crores in Kumbar street. Installation of cones for cost road works

About Author

Leave a Reply

Your email address will not be published. Required fields are marked *

You may have missed