September 19, 2024

ಹುಲಿಕೆರೆಯಲ್ಲಿ ಅರಳಿಕಟ್ಟೆ ಸಂವಾದ ಬನ್ನಿ ಮತಾಡೋಣ ಕಾರ್ಯಕ್ರಮ

0
ಆಮ್ ಆದ್ಮಿ ಪಕ್ಷದ ರಾಜ್ಯ ಮುಖಂಡ ಹೇಮಂತ್‌ಕುಮಾರ್ ಸುದ್ದಿಗೋಷ್ಠಿ

ಆಮ್ ಆದ್ಮಿ ಪಕ್ಷದ ರಾಜ್ಯ ಮುಖಂಡ ಹೇಮಂತ್‌ಕುಮಾರ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಪಕ್ಷ ಸಂಘಟನೆ ಮತ್ತು ಜನರ ಸಮಸ್ಯೆ ಅರಿಯುವ ಸಲುವಾಗಿ ರಾಜ್ಯಾದ್ಯಂತ ಅರಳಿಕಟ್ಟೆ ಸಂವಾದ ಬನ್ನಿ ಮತಾಡೋಣ ಕಾರ್ಯಕ್ರಮ ಆಯೋಜಿಸಿದ್ದು, ಇದೇ ೧೩ ರಂದು ಕಡೂರು ತಾಲೂಕಿನ ಹುಲಿಕೆರೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮುಖಂಡ ಹೇಮಂತ್‌ಕುಮಾರ್ ತಿಳಿಸಿದರು.

ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಲಿಕೆರೆಯಲ್ಲಿ ಡಿ.೧೩ ರ ಸಂಜೆ ೪ ಗಂಟೆಗೆ ಸಂವಾದ ಕಾರ್ಯಕ್ರಮ ಆರಂಭವಾಗಲಿದ್ದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಸಂವಾದ ನಡೆಸಿಕೊಡಲಿದ್ದಾರೆ ಎಂದು ಹೇಳಿದರು.

ಸಂವಾದದಲ್ಲಿ ಪ್ರಸ್ತುತ ರಾಜಕೀಯ ಸನ್ನಿವೇಶಗಳು, ಜನ ಅನುಭವಿಸುತ್ತಿರುವ ಸಂಕಷ್ಟ, ಅವೈಜ್ಞಾನಿಕವಾಗಿ ಬರ ಘೋಷಣೆ ಮಾಡಿರುವುದು ಮತ್ತಿತರೆ ವಿಷಯಗಳು ಚರ್ಚೆಗೆ ಬರಲಿವೆ. ಜತೆಗೆ ಕೇಂದ್ರ ಸರಕಾರ ಈವರೆಗೂ ರಾಜ್ಯದ ಬರ ನಿರ್ವಹಣೆಗೆ ನಯಾಪೈಸೆ ಬಿಡುಗಡೆ ಮಾಡದಿರುವ ಬಗ್ಗೆ ಚರ್ಚೆಯಾಗಲಿದೆ ಎಂದು ತಿಳಿಸಿದರು.

ರಾಜ್ಯ ಸರಕಾರ ಬರ ನಿರ್ವಹಣೆಗಾಗಿ ಪ್ರತಿ ರೈತ ಕುಟುಂಬಕ್ಕೆ ಕೇವಲ ೨ ಸಾವಿರ ರೂ. ಬಿಡುಗಡೆ ಮಾಡುವುದಾಗಿ ಹೇಳಿದೆ. ಅದು ಪ್ರಯೊಜನವಿಲ್ಲ. ಕನಿಷ್ಠ ೨೫ ಸಾವಿರ ರೂ.ಬರಪರಿಹಾರ ಘೋಷಣೆ ಮಾಡುವಂತೆ ಸಂವಾದದಲ್ಲಿ ಆಗ್ರಹಿಸಲಿದ್ದೇವೆ ಎಂದು ಹೇಳಿದರು.

ರೈತರಿಗೆ ಕನಿಷ್ಠ ನಷ್ಟ ತುಂಬಿಕೊಡಬಲ್ಲ ಬರಪರಿಹಾರ, ರೈತರ ಸಂಪೂರ್ಣ ಸಾಲಮನ್ನಾ ಮಾಡುವುದು, ಮಲೆನಾಡು ಭಾಗದಲ್ಲಿ ಹೆಚ್ಚಾಗಿರುವ ಆನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಆನೆ ಹಾವಳಿಯಿಂದ ಕಾಫಿ ತೋಟಕ್ಕೆ ಕೂಲಿಗೆ ಬರಲು ಕಾರ್ಮಿಕರು ನಿರಾಕರಿಸುತ್ತಿದ್ದು ಇಂತಹ ಸಂಕಷ್ಟ ಸಮಯದಲ್ಲಿ ಸರಕಾರ ಆನೆ ಹಾವಳಿ ತಡೆಗೆ ಪರಿಹಾರ ಕಂಡುಹಿಡಿಯಬೇಕು ಮತ್ತಿತರೆ ವಿಚಾರಗಳು ಸಂವಾದದಲ್ಲಿ ಚರ್ಚೆ ನಡೆಸಲಿರುವುದಾಗಿ ಹೇಳಿದರು.

ಇದಲ್ಲದೆ ಆರೋಗ್ಯ ವ್ಯವಸ್ಥೆ ಸರಿಪಡಿಸುವುದು, ಗುಣಮಟ್ಟದ ಶಿಕ್ಷಣ, ರೈತರ ಶ್ರಮಕ್ಕೆ ತಕ್ಕ ಬೆಲೆ, ಯುವಕರಿಗೆ ಅವಕಾಶ, ಮಹಿಳೆಯರಿಗೆ ಸಮಾನ ಅವಕಾಶ, ಭ್ರಷ್ಟಾಚಾರ ತಡೆ ಮತ್ತಿತರೆ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಚಂದ್ರು ಅವರು ಸುದೀರ್ಘವಾಗಿ ಮಾತಾಡಲಿದ್ದಾರೆ ಎಂದು ಹೇಳಿದರು.

ಎಎಪಿ ಮಾಧ್ಯಮ ವಕ್ತಾರ ಡಾ. ಕೆ.ಸುಂದರಗೌಡ, ಪ್ರಧಾನ ಕಾರ್ಯದರ್ಶಿ ಎಂ.ಪಿ.ಈರೇಗೌಡ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಮೀಲ್ ಅಹ್ಮದ್, ಎಸ್ಸಿ,ಎಸ್ಟಿ ಘಟಕದ ಪ್ರಭು ಮತ್ತಿತರರಿದ್ದರು.

Let’s Talk Come Let’s Talk Program

About Author

Leave a Reply

Your email address will not be published. Required fields are marked *

You may have missed